ETV Bharat / bharat

ಮಹಾ ವಿಕಾಸ್‌ ಅಘಾಡಿ ಮೈತ್ರಿಕೂಟದ ಸೀಟು ಹಂಚಿಕೆ ಒಪ್ಪಂದ ಅಂತಿಮ: ಯಾರಿಗೆ ಎಷ್ಟು ಸೀಟು? - MVA announces seat sharing - MVA ANNOUNCES SEAT SHARING

ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ ಮೈತ್ರಿಕೂಟ ಲೋಕಸಭಾ ಚುನಾವಣೆಗೆ ರಾಜ್ಯದ 48 ಸ್ಥಾನಗಳಿಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ.

mva-announces-seat-sharing-in-maharashtra
ಮಹಾ ವಿಕಾಸ್‌ ಅಘಾಡಿ ವಿಪಕ್ಷ ಮೈತ್ರಿಕೂಟದ ಸೀಟು ಹಂಚಿಕೆ ಒಪ್ಪಂದ ಅಂತಿಮ: ಯಾರಿಗೆ ಎಷ್ಟು ಸೀಟು?
author img

By ETV Bharat Karnataka Team

Published : Apr 9, 2024, 3:33 PM IST

ಮುಂಬೈ(ಮಹಾರಾಷ್ಟ್ರ): ಮಹಾ ವಿಕಾಸ್‌ ಅಘಾಡಿ ಮೈತ್ರಿಕೂಟ ಎರಡು ವಾರಗಳ ಸುದೀರ್ಘ ಚರ್ಚೆ ನಡೆಸಿದ ನಂತರ ಲೋಕಸಭಾ ಚುನಾವಣೆಗೆ ರಾಜ್ಯದ 48 ಸ್ಥಾನಗಳಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. ಈ ಒಪ್ಪಂದದಂತೆ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) 21 ಸ್ಥಾನ, ಕಾಂಗ್ರೆಸ್ 17 ಸ್ಥಾನ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್ ಬಣ) 10 ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಜಂಟಿಯಾಗಿ ಸೀಟು ಹಂಚಿಕೆಯನ್ನು ಘೋಷಿಸಿದ್ದಾರೆ.

ಎಲ್ಲೆಲ್ಲಿ ಯಾವಾಗ ಮತದಾನ?: ಲೋಕಸಭೆ ಚುನಾವಣೆ ರಾಜ್ಯದಲ್ಲಿ ಏಪ್ರಿಲ್ 19 ರಿಂದ ಮೇ 20 ರವರೆಗೆ ಐದು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಏಪ್ರಿಲ್ 19 ರಂದು ರಾಮ್‌ಟೆಕ್, ನಾಗ್ಪುರ, ಭಂಡಾರಾ - ಗೊಂಡಿಯಾ, ಗಡ್ಚಿರೋಲಿ-ಚಿಮೂರ್ ಮತ್ತು ಚಂದ್ರಾಪುರದಲ್ಲಿ ಮತದಾನ ನಡೆಯಲಿದೆ. ಬುಲ್ಧಾನ, ಅಕೋಲಾ , ಅಮರಾವತಿ, ವಾರ್ಧಾ, ಯವತ್ಮಾಲ್-ವಾಶಿಮ್, ಹಿಂಗೋಲಿ, ನಾಂದೇಡ್ ಮತ್ತು ಪರ್ಭಾನಿ ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.

ರಾಯಗಡ, ಬಾರಾಮತಿ, ಉಸ್ಮಾನಾಬಾದ್, ಲಾತೂರ್, ಸೋಲಾಪುರ್, ಮಾಧಾ, ಸಾಂಗ್ಲಿ, ಸತಾರಾ, ರತ್ನಗಿರಿ-ಸಿಂಧುದುರ್ಗ, ಮತ್ತು ಕೊಲ್ಲಾಪುರದಲ್ಲಿ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ನಂದೂರಭಾರ್, ಜಲಗಾಂವ್, ರೇವರ್, ಜಲ್ನಾ, ಛತ್ರಪತಿ ಸಂಭಾಜಿನಗರ, ಮಾವಲ್, ಪುಣೆ, ಶಿರೂರು, ಅಹಮದ್‌ನಗರ, ಬೀಡು ಮತ್ತು ಶಿರಡಿಯಲ್ಲಿ ಮೇ 13 ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ. ಧುಲೆ, ದಿಂಡೋರಿ, ನಾಸಿಕ್, ಪಾಲ್ಘರ್, ಕಲ್ಯಾಣ್, ಥಾಣೆ, ಮುಂಬೈ ಉತ್ತರ, ಮುಂಬೈ ವಾಯವ್ಯ, ಮುಂಬೈ ಈಶಾನ್ಯ, ಮುಂಬೈ ಉತ್ತರ-ಮಧ್ಯ, ಮುಂಬೈ ದಕ್ಷಿಣ ಮತ್ತು ಮುಂಬೈ ದಕ್ಷಿಣ-ಮಧ್ಯ ಮೇ 20 ರಂದು ಅಂತಿಮ ಹಂತದಲ್ಲಿ ಮತದಾನ ನಡೆಯಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅವಿಭಜಿತ ಶಿವಸೇನೆ ಕ್ರಮವಾಗಿ 23 ಮತ್ತು 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ನನ್ನ ಪುತ್ರ ಅನಿಲ್‌ ಸೋಲಬೇಕು: ಎ.ಕೆ.ಆ್ಯಂಟನಿ - AK Antony

ETV Bharat Logo

Copyright © 2025 Ushodaya Enterprises Pvt. Ltd., All Rights Reserved.