ETV Bharat / bharat

ನೋಯ್ಡಾದ ಹೆದ್ದಾರಿಯಲ್ಲಿ ಚಾಲಕನ ದರೋಡೆ; ಗನ್​ಪಾಯಿಂಟ್​ನಲ್ಲಿ ಲೂಟಿ ಮಾಡಿದ ದುಷ್ಕರ್ಮಿಗಳು - miscreants robbed car - MISCREANTS ROBBED CAR

Miscreants robbed car driver Noida: ಕಾರು ಡ್ರೈವರ್​​ ಒತ್ತೆಯಾಳಾಗಿರಿಸಿಕೊಂಡ ದುಷ್ಕರ್ಮಿಗಳು 8 ಕಿ.ಮೀ ದೂರದಲ್ಲಿ ಚಲಿಸುವ ಕಾರಿನಿಂದ ಆತನನ್ನು ದೂಡಿ, ಕಾರು ಸಮೇತ ಪರಾರಿಯಾಗಿದ್ದಾರೆ.

miscreants-took-driver-hostage-at-gunpoint-and-robbed-car-in-noida
ನೋಯ್ಡಾದ ಹೆದ್ದಾರಿಯಲ್ಲಿ ಚಾಲಕನ ದರೋಡೆ; ಗನ್​ಪಾಯಿಂಟ್​ನಲ್ಲಿ ಲೂಟಿ ಮಾಡಿದ ದುಷ್ಕರ್ಮಿಗಳು (ETV Bharat)
author img

By ETV Bharat Karnataka Team

Published : Sep 16, 2024, 4:32 PM IST

ನವದೆಹಲಿ: ನೋಯ್ಡಾದ ಹೆದ್ದಾರಿಯಲ್ಲಿ ಚಾಲಕನನ್ನು ದರೋಡೆ ಮಾಡಿರುವ ಘಟನೆ ನಡೆದಿದೆ. ನೋಯ್ಡಾದಲ್ಲಿ ಮಹಾಮಾಯಾ ಫ್ಲೈಓವರ್​ನಿಂದ ಪರಿ ಚೌಕದ ಮಾರ್ಗದಲ್ಲಿ ಈ ಘಟನೆ ನಡೆದಿದೆ. ದಾರಿ ಮಧ್ಯೆ ವಾಹನ ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು, ಶಸಾಸ್ತ್ರಗಳನ್ನು ತೋರಿಸಿ ಬೆದರಿಸಿ, ಆತನನ್ನು ಒತ್ತೆಯಾಳುವಾಗಿಸಿಕೊಂಡು ಆತನ ಬಳಿಯಿದ್ದ ಕಾರು ಮತ್ತು ಹಣ ದೋಚಿ ಪರಾರಿಯಾಗಿದ್ದಾರೆ.

ಕಾರು ಡ್ರೈವರ್​​ ಒತ್ತೆಯಾಳಾಗಿರಿಸಿಕೊಂಡ ದುಷ್ಕರ್ಮಿಗಳು 8 ಕಿ.ಮೀ ದೂರದಲ್ಲಿ ಆತನನ್ನು ಬಿಟ್ಟು ಹೋಗಿದ್ದಾರೆ. ಸೆಕ್ಟರ್​​ -39ರಲ್ಲಿ ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಭಾನುವಾರ ಮೂವರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಏನಿದು ಘಟನೆ?: ದೂರಿನಲ್ಲಿ, ಫಿರೋಜಾಬಾದ್‌ನ ನಾರ್ಖಿ ನಿವಾಸಿ ನರೇಂದ್ರ ಕುಮಾರ್ ಅವರು ಜುಲೈ 13 ರಂದು ರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ತನ್ನ ಮಾಲೀಕರ ಮಗನನ್ನು ಡ್ರಾಪ್​ ಮಾಡಲು ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಡ್ರಾಪ್​ ಮಾಡಿ ಫಿರೋಜಾಬಾದ್​ಗೆ ಹಿಂದಿರುಗುವಾಗ ಮಹಾಮಾಯಾ ಮೇಲ್ಸೇತುವೆಯ ಬಳಿ ಕಾರು ನಿಲ್ಲಿಸಿ ನಿದ್ರೆಗೆ ಜಾರಿದ್ದಾರೆ.

ಮಲಗಿದಾಗ ಮಧ್ಯರಾತ್ರಿ ಸುಮಾರು 3 ಗಂಟೆಗೆ ಶಸಾಸ್ತ್ರಗಳೊಂದಿಗೆ ಅಲ್ಲಿಗೆ ಬಂದ ಮೂವರು ದುಷ್ಕರ್ಮಿಗಳು ಕಾರಿನ ಗಾಜು ಒಡೆದು ಹಲ್ಲೆಗೆ ಮುಂದಾಗಿದ್ದಾರೆ. ಮೂವರು ದುಷ್ಕರ್ಮಿಗಳು ಬಂದೂಕು ತೋರಿಸಿ ಕಾರು ಚಾಲಕನನ್ನು ಒತ್ತೆಯಾಳಾಗಿಟ್ಟುಕೊಂಡು ವಜೀರಾಬಾದ್‌ಗೆ ಕರೆದೊಯ್ದು ಥಳಿಸಿ ಬಟ್ಟೆ ಬಿಚ್ಚುವಂತೆ ಮಾಡಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಸಿ ಅವರಿಂದ 700 ರೂ. ನಂತರ ವಸೂಲಿ ಮಾಡಿ, ಆತನನ್ನು ಕಾರಿನಿಂದ ಹೊರಗೆ ತಳ್ಳಿ ಕಾರು ಸಮೇತ ಪರಾರಿಯಾಗಿದ್ದಾರೆ.

ಘಟನೆ ಬಳಿಕ ಸಂತ್ರಸ್ತ ತನ್ನ ಕಾರಿನ ಮಾಲೀಕನಿಗೆ ವಿಷಯ ದಾಖಲಿಸಿದ್ದಾರೆ. ಬಳಿಕ ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಆಧಾರದ ಮೇಲೆ ದುಷ್ಕರ್ಮಿಗಳ ಪತ್ತೆ ಕಾರ್ಯ ನಡೆಸಲಾಗುವುದು. ಶೀಘ್ರದಲ್ಲೇ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಬಗ್ಗೆ ಆಕ್ಷೇಪಾರ್ಹ ಕಮೆಂಟ್: ಮ್ಯಾಜಿಸ್ಟ್ರೇಟ್​ ಕಚೇರಿಯ ಗುತ್ತಿಗೆ ನೌಕರ ಬಂಧನ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.