ETV Bharat / bharat

ಲೋಕಸಭಾ ಚುನಾವಣೆ 2024: 96 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರು - ಚುನಾವಣಾ ಆಯೋಗದ ಅಂಕಿಅಂಶ

Lok Sabha Election 2024 Voters : ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲಿರುವ ದೇಶದಲ್ಲಿ ಒಟ್ಟು 96 ಕೋಟಿ ಮತದಾರರಿದ್ದಾರೆ. ಅದರಲ್ಲಿ 47 ಕೋಟಿ ಮಹಿಳೆಯರಿದ್ದಾರೆ.

2024 ರ ಲೋಕಸಭಾ ಚುನಾವಣೆಗಳು - 96 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ
ಲೋಕಸಭಾ ಚುನಾವಣೆ 2024: 96 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರು
author img

By ETV Bharat Karnataka Team

Published : Jan 27, 2024, 9:16 AM IST

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳು ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿವೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರ ಕಾರ್ಯತಂತ್ರಗಳನ್ನು ಮಾಡುತ್ತಿವೆ. ಈ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ದೇಶದಲ್ಲಿ 96 ಕೋಟಿಗೂ ಹೆಚ್ಚು ಮತದಾರರಿದ್ದಾರೆ ಎಂದು ಚುನಾವಣಾ ಆಯೋಗದ (ಇಸಿ) ಅಂಕಿಅಂಶಗಳು ತೋರಿಸುತ್ತಿವೆ. ಅವರಲ್ಲಿ 47 ಕೋಟಿ ಮಹಿಳೆಯರು ಇದ್ದಾರೆ ಎಂದು ಚುನಾವಣೆ ಆಯೋಗ ಹೇಳಿದೆ. ದೇಶಾದ್ಯಂತ 12 ಲಕ್ಷಕ್ಕೂ ಅಧಿಕ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

1.5 ಕೋಟಿ ಸಿಬ್ಬಂದಿ ನೇಮಕ: ಚುನಾವಣಾ ಆಯೋಗದ ಪ್ರಕಾರ, 18 ರಿಂದ 19 ವರ್ಷದೊಳಗಿನ ಸುಮಾರು 1.73 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಸಂಸತ್ ಚುನಾವಣೆಗೆ 1.5 ಕೋಟಿ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಹೇಳಿದೆ. ಕಳೆದ ವರ್ಷ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಕಳುಹಿಸಿದ್ದ ಪತ್ರದ ಪ್ರಕಾರ 1951ರಲ್ಲಿ ದೇಶದಲ್ಲಿ 17.32 ಕೋಟಿ ನೋಂದಾಯಿತ ಮತದಾರರಿದ್ದರು. 2019ರ ಚುನಾವಣೆ ವೇಳೆಗೆ ಈ ಸಂಖ್ಯೆ 91.20 ಕೋಟಿಗೆ ಏರಿಕೆಯಾಗಿದೆ. ಮೊದಲ ಲೋಕಸಭೆ ಚುನಾವಣೆಯಲ್ಲಿ ಶೇ.45ರಷ್ಟು ಮತದಾನ ದಾಖಲಾಗಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ.67ರಷ್ಟು ಮತದಾನವಾಗಿತ್ತು.

ಸಾರ್ವತ್ರಿಕ ಚುನಾವಣೆಯ ದಿನಾಂಕಗಳು ಇನ್ನೂ ಸ್ಪಷ್ಟವಾಗಬೇಕಿದೆ. 2024 ರ ಏಪ್ರಿಲ್ 16 ರ ಲೋಕಸಭಾ ಚುನಾವಣೆಯ ದಿನಾಂಕವು ತಾತ್ಕಾಲಿಕವಾಗಿದೆ ಎಂದು EC ಇತ್ತೀಚೆಗೆ ಸ್ಪಷ್ಟಪಡಿಸಿದೆ. ಈ ದಿನಾಂಕವನ್ನು ಸಂಪೂರ್ಣವಾಗಿ ಲೋಕಸಭೆ ಚುನಾವಣೆ ಪೂರ್ವ ಯೋಜನೆಗಾಗಿ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ. ಚುನಾವಣಾಧಿಕಾರಿಗಳ ಸೂಚನೆಯಂತೆ ಮಾತ್ರ ಇದನ್ನು ಹೊರಡಿಸಲಾಗಿದ್ದು, ಸೂಕ್ತ ಸಮಯದಲ್ಲಿ ಭಾರತೀಯ ಚುನಾವಣಾ ಆಯೋಗವು ಲೋಕಸಭೆ ಚುನಾವಣೆ ದಿನಾಂಕವನ್ನು ಪ್ರಕಟಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಪ್ರಾಥಮಿಕ ಚಟುವಟಿಕೆಗಳನ್ನು ಪೂರ್ಣಗೊಳಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ವಿವರಿಸಿದೆ.

ಕಳೆದ ಸಂಸತ್ ಚುನಾವಣೆಗೆ ಮಾರ್ಚ್ 10, 2019 ರಂದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರೆ, ಏಪ್ರಿಲ್ 11 ರಿಂದ ಮೇ 19ರ ವರೆಗೆ ಏಳು ಹಂತಗಳಲ್ಲಿ ಮತದಾನವನ್ನು ನಡೆಸಲಾಗಿತ್ತು. ಫಲಿತಾಂಶ ಮೇ 23 ರಂದು ಪ್ರಕಟಿವಾಗಿತ್ತು. ಈ ಬಾರಿಯೂ ಏಪ್ರಿಲ್-ಮೇ ತಿಂಗಳಿನಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳಿವೆ.

ಓದಿ: ಗಣರಾಜ್ಯೋತ್ಸವದಲ್ಲಿ ಮಕ್ಕಳಿಂದ ಕಮಲದ ಹೂವಿನ ನೃತ್ಯ: ಅರಸೀಕೆರೆ ಶಾಸಕರಿಂದ ಶಿಕ್ಷಕಿಗೆ ತರಾಟೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.