ETV Bharat / bharat

ದೇಶದಲ್ಲಿ ವಿಐಪಿ ಸಂಸ್ಕೃತಿ ತೊಲಗಲಿ: ಆಪ್​ ಅಭ್ಯರ್ಥಿ ಹರ್ಭಜನ್​ ಸಿಂಗ್​, ಹಳ್ಳಿಯೊಂದರಲ್ಲಿ ಮತದಾನ ಬಹಿಷ್ಕಾರ - lok sabha election 2024 - LOK SABHA ELECTION 2024

ಪಂಜಾಬ್​ನ ಜಲಂದರ್​ ಆಪ್​ ಅಭ್ಯರ್ಥಿಯಾಗಿರುವ ಕ್ರಿಕೆಟಿಗ ಹರ್ಭಜನ್​ ಸಿಂಗ್​ ಇಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮತದಾನ ಮಾಡಿದ ಹರ್ಭಜನ್​ ಸಿಂಗ್​
ಮತದಾನ ಮಾಡಿದ ಹರ್ಭಜನ್​ ಸಿಂಗ್​ (ETV Bharat)
author img

By ETV Bharat Karnataka Team

Published : Jun 1, 2024, 3:15 PM IST

Updated : Jun 1, 2024, 3:26 PM IST

ಜಲಂಧರ್ (ಪಂಜಾಬ್): ದೇಶದಲ್ಲಿ ಯಾವುದೇ ವಿಐಪಿ ಸಂಸ್ಕೃತಿ ಇರಬಾರದು. ಜನರು ಸ್ವತಂತ್ರವಾಗಿ ಮತ ಚಲಾಯಿಸಿ ಎಂದು ಆಮ್​ ಆದ್ಮಿ ಪಕ್ಷದ ಪಂಜಾಬ್​ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ ಕೋರಿದರು. ಏಳನೇ ಮತ್ತು ಕೊನೆಯ ಹಂತದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಿದ ಬಳಿಕ ಅವರು ಇಲ್ಲಿ ಮಾತನಾಡಿದರು.

ಜಲಂಧರ್‌ನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ಒತ್ತಾಯಿಸಿದ ಅವರು, ನಮ್ಮ ನೆಚ್ಚ್ಚಿನ ಸರ್ಕಾರವನ್ನು ಆಯ್ಕೆ ಮಾಡಲು ಇರುವ ಹಾದಿ ಅಂದರೆ ಅದು ಮತದಾನ. ದೇಶದಲ್ಲಿ ಯಾವುದೇ ವಿಐಪಿ ಸಂಸ್ಕೃತಿ ಇರಬಾರದು. ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಎಲ್ಲರಿಗೂ ಸಮಾನ ಅಧಿಕಾರ ಇದೆ ಎಂದು ಅವರು ಹೇಳಿದರು.

ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಜಲಂಧರ್‌ನಲ್ಲಿ ಗರಿಷ್ಠ ಮತದಾನವಾಗಬೇಕು ಎಂಬುದು ನನ್ನ ನಿರೀಕ್ಷೆ. ಮತ ಹಾಕುವುದು ನಮ್ಮ ಕರ್ತವ್ಯ ಕೂಡ ಹೌದು ಎಂದು ಹೇಳಿದರು.

ಹರ್ಭಜನ್ ಸಿಂಗ್​ ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ. 2021 ರಲ್ಲಿ ಕ್ರಿಕೆಟ್​​ಗೆ ವಿದಾಯ ಹೇಳಿದರು. ಭಾರತ ತಂಡದ ಪರವಾಗಿ ಅವರು 103 ಟೆಸ್ಟ್‌ಗಳನ್ನು ಆಡಿದ್ದು, ಅದರಲ್ಲಿ 417 ವಿಕೆಟ್​ ಪಡೆದಿದ್ದಾರೆ. 236 ಏಕದಿನ ಪಂದ್ಯಗಳಲ್ಲಿ 269 ಮತ್ತು 19 ಟಿ20ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಉದುರಿಸಿದ್ದಾರೆ. ಇನ್ನೂ ಐಪಿಎಲ್​ನಲ್ಲಿ ಭಜ್ಜಿ ವಿವಿಧ ಫ್ರಾಂಚೈಸಿಗಳ ಪರವಾಗಿ 163 ಪಂದ್ಯಗಳನ್ನು ಆಡಿದ್ದು ಅದರಲ್ಲಿ 150 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರ 'ದೂಸ್ರಾ' ಅಸ್ತ್ರದ ಮೂಲಕವೇ ಬ್ಯಾಟರ್​ಗಳ ನಿದ್ದೆಗೆಡಿಸಿದ್ದರು.

ನಡೆಯುತ್ತಿರುವ 7ನೇ ಹಂತದ ಚುನಾವಣೆಯಲ್ಲಿ ಪಂಜಾಬ್​ನ 13 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ 37.80% ರಷ್ಟು ಮತದಾನವಾಗಿದೆ.

ಯುವಕನ ಹತ್ಯೆ, ಮತದಾನ ಬಹಿಷ್ಕಾರ: ಶುಕ್ರವಾರ ರಾತ್ರಿ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಪಂಜಾಬ್​ನ ಗ್ರಾಮವೊಂದರಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಅಲ್ಲದೇ, ಜನರು ಮತದಾನ ಬಹಿಷ್ಕಾರ ಹಾಕಿದ್ದಾರೆ. ಇದರಿಂದ ಹಳ್ಳಿಯಲ್ಲಿ ಈವರೆಗೂ ಮೂವರು ಮಾತ್ರ ಮತ ಹಾಕಿದ್ದಾರೆ. ಮತದಾನ ಕೇಂದ್ರಕ್ಕೆ ಪೊಲೀಸ್​ ಬಿಗಿಭದ್ರತೆ ನೀಡಲಾಗಿದೆ.

ಲಖೋವಲ್ ಎಂಬ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಮ್ ಆದ್ಮಿ ಪಕ್ಷದ ಸ್ವಯಂಸೇವಕ ದೀಪಿಂದರ್ ಸಿಂಗ್ ಲಖೋವಾಲ್ ಎಂಬಾತನನ್ನು ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಜನರು, ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಇಲ್ಲಿ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಲಾದ ಮತಗಟ್ಟೆಗೆ ಪೊಲೀಸ್ ಆಡಳಿತ ಸೂಕ್ತ ಬಂದೋಬಸ್ತ್ ಮಾಡಿದೆ. ಇದಕ್ಕೂ ಮೊದಲು ಇಡೀ ಗ್ರಾಮದಲ್ಲಿ ಯಾರೂ ಮತದಾನ ಮಾಡದಂತೆ ಡಂಗುರ ಕೂಡ ಸಾರಲಾಗಿದೆ.

ಇದನ್ನೂ ಓದಿ: ಮತ ಚಲಾಯಿಸಿ, ಬಿಜೆಪಿ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ನಟಿ ಕಂಗನಾ ರಣಾವತ್ - Kangana Ranaut Voting

Last Updated : Jun 1, 2024, 3:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.