ETV Bharat / bharat

ಹಳ್ಳಿಗೆ ನುಗ್ಗಿದ ಚಿರತೆ, 7 ಜನರ ಮೇಲೆ ದಾಳಿ: ಮನಬಂದಂತೆ ದೊಣ್ಣೆಗಳಿಂದ ಹೊಡೆದ ಜನರು-ವಿಡಿಯೋ - Leopard Attack - LEOPARD ATTACK

ಉತ್ತರ ಪ್ರದೇಶದ ಹಳ್ಳಿಗೆ ನುಗ್ಗಿದ ಚಿರತೆಯೊಂದು ಸ್ಥಳೀಯರ ಮೇಲೆ ದಾಳಿ ಮಾಡಿದೆ.

ಹಳ್ಳಿಗೆ ನುಗ್ಗಿದ ಚಿರತೆ
ಹಳ್ಳಿಗೆ ನುಗ್ಗಿದ ಚಿರತೆ
author img

By ETV Bharat Karnataka Team

Published : Apr 29, 2024, 7:22 PM IST

ಹಳ್ಳಿಗೆ ನುಗ್ಗಿದ ಚಿರತೆ

ಸಿದ್ಧಾರ್ಥನಗರ(ಉತ್ತರ ಪ್ರದೇಶ): ಹಾಡಹಗಲೇ ಗ್ರಾಮಕ್ಕೆ ನುಗ್ಗಿದ ಚಿರತೆಯೊಂದು ಏಳು ಜನರ ಮೇಲೆ ದಾಳಿ ನಡೆಸಿದ ಘಟನೆ ಸಿದ್ಧಾರ್ಥನಗರ ಜಿಲ್ಲೆಯ ಹತ್ವಾ ಗ್ರಾಮದಲ್ಲಿ ನಡೆದಿದೆ. ದಾಳಿ ಮಾಡಿದ ದೃಶ್ಯವನ್ನು ಸ್ಥಳೀಯರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಎಲ್ಲಿಂದಲೋ ಬಂದ ಚಿರತೆ ಸೋಮವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಗ್ರಾಮಕ್ಕೆ ನುಗ್ಗಿದೆ. ಗ್ರಾಮದ ನಿವಾಸಿ ಉದಯರಾಜ್ (80) ಎಂಬುವರು ತಮ್ಮ ಮನೆಯ ವರಾಂಡದಲ್ಲಿ ಕುಳಿತಿದ್ದಾಗ ಮೊದಲು ಅವರ ಮೇಲೆ ಮೇಲೆ ದಾಳಿ ಮಾಡಿದೆ. ಕಿರುಚಾಟ ಕೇಳಿ ಮತ್ತೆ ಅಲ್ಲಿಂದ ಓಡಿ ಮನೆಯೊಂದಕ್ಕೆ ನುಗ್ಗಿದೆ. ಮನೆಯಲ್ಲಿ ಅಡಗಿ ಕುಳಿತಿರುವ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಭಯಭೀತರಾಗಿದ್ದರು. ಅರಣ್ಯ ಇಲಾಖೆಗೂ ಮಾಹಿತಿ ನೀಡಿ ಸೆರೆ ಹಿಡಿಯುವ ಸಲುವಾಗಿ ಸ್ಥಳೀಯರೆಲ್ಲರೂ ಕೋಲು, ಬಡಿಗೆ ಹಿಡಿದು ಮನೆಯ ಹೊರಗೆ ಕಾದು ನಿಂತಿದ್ದರು. ಈ ವೇಳೆ ಭಯದಲ್ಲಿ ಇದ್ದಕ್ಕಿದ್ದಂತೆ ಮನೆಯ ಒಳಗಿನಿಂದ ಹಾರಿ ಬಂದ ಚಿರತೆ ಓರ್ವನ ಮೇಲೆ ದಾಳಿ ಮಾಡಿ ಆತನ ಕಾಲು ಕಚ್ಚಿದೆ.

ವ್ಯಕ್ತಿ ತನ್ನ ಕಾಲನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಜನರು ಚಿರತೆಗೆ ದೊಣ್ಣೆಯಿಂದ ಹೊಡೆದಿದ್ದರಿಂದ ಮತ್ತಷ್ಟು ಭಯಗೊಂಡು ಹಲವರ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಕಿರುಚಾಟ, ಕೂಗಾಟ ವಿಡಿಯೋದಲ್ಲಿ ಸೆರೆಯಾಗಿದೆ. ಜನರ ಕೂಗಾಟದಿಂದ ಚಿರತೆ ಮತ್ತೆ ಮನೆಯ ಒಳಗೆ ಓಡಿ ಹೋಗಿದೆ. ಚಿರತೆ ಒಂದರ ಹಿಂದೆ ಒಂದರಂತೆ ಒಟ್ಟು ಏಳು ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಗಾಯಗೊಂಡಿರುವ ಐವರನ್ನು ಇಟಾವಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸದ್ಯ ಚಿರತೆಯನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ. ಗ್ರಾಮಕ್ಕೆ ಪಡೆಯನ್ನು ಕಳುಹಿಸಲಾಗಿದೆ. ಯಾವುದೇ ಕ್ಷಣದಲ್ಲಾದರೂ ಚಿರತೆ ಮನೆಯಿಂದ ಹೊರಬರಬಹುದು. ಅರಣ್ಯ ಇಲಾಖೆ ತಂಡ ಚಿರತೆ ಹಿಡಿಯಲು ಹರಸಾಹಸಪಡುತ್ತಿದೆ. ಹಾಗಾಗಿ ಎಚ್ಚರಿಕೆಯಿಂದ ಇರುವಂತೆ ಪ್ರಭಾರಿ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ತಿವಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಚಿರತೆ: 12 ಜನರ ಮೇಲೆ ಮಾರಣಾಂತಿಕ ದಾಳಿ - Leopard Enters House

ETV Bharat Logo

Copyright © 2025 Ushodaya Enterprises Pvt. Ltd., All Rights Reserved.