ETV Bharat / bharat

ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಪ್ರಮುಖ ಕಿಂಗ್​ಪಿನ್​ ಸಂಜೀವ್​ ಮುಖಿಯಾಗಾಗಿ ಪೊಲೀಸರ ತೀವ್ರ ಹುಡುಕಾಟ - NEET exam question paper leak - NEET EXAM QUESTION PAPER LEAK

ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್​ಪಿನ್ ಸಂಜೀವ್ ​ ಮುಖಿಯಾಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಬಿಪಿಎಸ್‌ಸಿ ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂಜೀವ​ ಪುತ್ರನನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸಂಜೀವ್ ಕುಮಾರ್ & ಶಿವಮಕುಮಾರ್​
ಸಂಜೀವ್ ಕುಮಾರ್ & ಶಿವಮಕುಮಾರ್​ (ETV Bharat)
author img

By ETV Bharat Karnataka Team

Published : Jun 22, 2024, 10:33 AM IST

ನಳಂದ, ಬಿಹಾರ: ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಕಿಂಗ್​ಪಿನ್​ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾಗಾಗಿ ಬಿಹಾರ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಸಂಜೀವ್ ಮುಖಿಯಾ ಮೂಲತಃ ನಳಂದದ ನಾಗರನೌಸಾ ನಿವಾಸಿ ಆಗಿದ್ದು, ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ಶಂಕಿಸಿದ್ದಾರೆ. ಈತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಸಂಜೀವ್ ಕಳೆದ ಎರಡು ದಶಕಗಳಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ ದಂಧೆಯಲ್ಲಿ ತೊಡಗಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಬಿಹಾರದಲ್ಲಿ ಮುಕ್ತಾಯಗೊಂಡ ಶಿಕ್ಷಕರ ಮರು ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸೋರಿಕೆ ಪ್ರಕರಣದಲ್ಲೂ ಸಂಜೀವ್ ಮುಖಿಯಾ ಅವರ ಪುತ್ರ ಡಾ.ಶಿವಕುಮಾರ್​ ಕೂಡ ಭಾಗಿಯಾಗಿ ಸದ್ಯ ಬಂಧನದಲ್ಲಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತದ ಆರ್ಥಿಕ ಅಪರಾಧಗಳ ಘಟಕ (ಇಒಯು) 279 ಆರೋಪಿಗಳನ್ನು ಬಂಧಿಸಿ 68 ದಿನಗಳ ಕಾಲ ತೀವ್ರ ತನಿಖೆ ನಡೆಸಿ ಬಳಿಕ ಆರೋಪಿ ಶಿವಕುಮಾರ್​ನನ್ನು ಜೈಲಿಗೆ ಕಳುಹಿಸಿದ್ದರು.

2010 ರಿಂದ ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯಲ್ಲಿ ತೊಡಗಿರುವ ಸಂಜೀವ್​ ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತ ತನ್ನದೇ ಆದ ಗ್ಯಾಂಗ್ ಅನ್ನು ಮಾಡಿಕೊಂಡು ದಂಧೆ ನಡೆಸುತ್ತಿರುವುದಾಗಿ ಬಿಹಾರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗಷ್ಟೇ ಸಂಜೀವ್ ಮುಖಿಯಾ ಮತ್ತವನ ಗ್ಯಾಂಗ್​ನಿಂದ ಬಿಪಿಎಸ್‌ಸಿ (ಬಿಹಾರ ಲೋಕಸೇವಾ ಆಯೋಗ) ಪರೀಕ್ಷೆಯ ಪತ್ರಿಕೆಯೂ ಸೋರಿಕೆ ಮಾಡಲಾಗಿತ್ತು ಎಂಬ ಆರೋಪ ಇದೆ.

ದೇಶಾದ್ಯಂತ ನೆಟ್‌ವರ್ಕ್: ಸಂಜೀವ್ ಮುಖಿಯಾ ಅನೇಕ ಪೇಪರ್ ಸೋರಿಕೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಇದೀಗ ಅವರ ಹೆಸರೇ ಪ್ರಮುಖವಾಗಿ ಕೇಳಿ ಬರುತ್ತಿದೆ. ಈತ ದೇಶಾದ್ಯಂತ ನೆಟ್​ವರ್ಕ್​ ಹೊಂದಿದ್ದು, ತಮ್ಮ ಗ್ರೂಪ್​​ ಸದಸ್ಯರಿಂದ ಕಳೆದ 20 ವರ್ಷದಿಂದ ದಂಧೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜಕೀಯದಲ್ಲೂ ಸಕ್ರಿಯ: ಸಂಜೀವ್ ಮುಖಿಯಾ ಹಣ ಬಲದ ಮೇಲೆ ತಮ್ಮ ರಾಜಕೀಯದಲ್ಲೂ ಸಕ್ರಿಯನಾಗಿದ್ದಾನೆ ಎನ್ನಲಾಗುತ್ತಿದೆ. ಸದ್ಯ ನೀಟ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿರುವ ಆರೋಪಿ ಸಂಜೀವ್​​​ ಮುಖಿಯಾಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ಇದೂ ವರೆಗೂ 14 ಜನರನ್ನ ಬಿಹಾರ ಪೊಲೀಸರು ಬಂಧಿಸಿದ್ದು, ಇವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ನೀಟ್ ಪೇಪರ್ ಲೀಕ್ ಪ್ರಕರಣ: ಮಾಸ್ಟರ್ ಮೈಂಡ್ ಚಾಲಕ ಬಿತ್ತು ಕುಮಾರ್ ಅರೆಸ್ಟ್: ಕುಟುಂಬದ ಸದಸ್ಯರು ಹೇಳಿದ್ದೇನು? - NEET PAPER LEAK CASE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.