ETV Bharat / bharat

ಪಶ್ಚಿಮ ಬಂಗಾಳ ಪಡಿತರ ಹಗರಣ ಪ್ರಕರಣ: ಸಚಿವ ಸ್ಥಾನದಿಂದ ಜ್ಯೋತಿಪ್ರಿಯಾ ಮಲ್ಲಿಕ್ ವಜಾ - Jyotipriya Mallick

ಪಶ್ಚಿಮ ಬಂಗಾಳ ಪಡಿತರ ಹಗರಣದಲ್ಲಿ ಬಂಧನವಾಗಿರುವ ಜ್ಯೋತಿಪ್ರಿಯಾ ಮಲ್ಲಿಕ್​ರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಲಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಮುಜಯಗರ ತಪ್ಪಿಸಿಕೊಳ್ಳಲು ಈ ನಿರ್ಧಾರ ಕೈಗೊಂಡಿದೆ.

ಜ್ಯೋತಿಪ್ರಿಯಾ ಮಲ್ಲಿಕ್ ವಜಾ
ಜ್ಯೋತಿಪ್ರಿಯಾ ಮಲ್ಲಿಕ್ ವಜಾ
author img

By PTI

Published : Feb 17, 2024, 9:59 AM IST

ಕೋಲ್ಕತ್ತಾ (ಪಶ್ಚಿಮಬಂಗಾಳ) : ಬಹುಕೋಟಿ ಮೊತ್ತದ ಪಡಿತರ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯದ(ಇಡಿ) ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಜ್ಯೋತಿಪ್ರಿಯಾ ಮಲ್ಲಿಕ್​ರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಎಂ ಮಮತಾ ಬ್ಯಾನರ್ಜಿ ಈ ಕ್ರಮ ಕೈಗೊಂಡಿದ್ದಾರೆ.

ಅರಣ್ಯ, ಸಾರ್ವಜನಿಕ ಉದ್ಯಮಗಳು ಮತ್ತು ಕೈಗಾರಿಕಾ ಸಚಿವರಾಗಿದ್ದ ಜ್ಯೋತಿಪ್ರಿಯಾ ಅವರನ್ನು 2023 ರ ಅಕ್ಟೋಬರ್​ 27 ರಂದು ಇಡಿ ಅಧಿಕಾರಿಗಳು ಬಂಧಿಸಿದ್ದರು. ವಿಚಾರಣೆಗಾಗಿ ಅವರನ್ನು ತನ್ನ ಕಸ್ಟಡಿಗೆ ಪಡೆದಿದೆ. ಸಚಿವರ ಬಂಧನದಿಂದ ತೀವ್ರ ಮಜುಗರಕ್ಕೆ ಒಳಗಾಗಿರುವ ಸಿಎಂ ಮಮತಾ ಬ್ಯಾನರ್ಜಿ ಅವರ ಸರ್ಕಾರ ಸಚಿವರನ್ನು ಎರಡೂ ಖಾತೆಗಳಿಂದ ಮುಕ್ತಗೊಳಿಸಿದೆ.

ಇಬ್ಬರು ಸಚಿವರಿಗೆ ಹಂಚಿಕೆ: ಜ್ಯೋತಿಪ್ರಿಯಾ ಅವರ ಬಳಿ ಇದ್ದ ಅರಣ್ಯ ಖಾತೆಯನ್ನು ಸ್ವಯಂ ಉದ್ಯೋಗ ಖಾತೆ ಸಚಿವ ಬಿರ್ಬಹಾ ಹನ್ಸಾ ಅವರಿಗೆ ಹೆಚ್ಚುವರಿಯಾಗಿ ನೀಡಿದರೆ, ಸಾರ್ವಜನಿಕ ಉದ್ಯಮಗಳು ಮತ್ತು ಕೈಗಾರಿಕಾ ಪುನರ್ನಿರ್ಮಾಣ ಖಾತೆಯನ್ನು ನೀರಾವರಿ ಮತ್ತು ಜಲಮಾರ್ಗ ಇಲಾಖೆಯ ಸಚಿವರಾದ ಪಾರ್ಥ ಭೌಮಿಕ್ ಅವರಿಗೆ ನೀಡಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆದೇಶದ ಮೇರೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರಾಜ್ಯಪಾಲ ಸಿ.ವಿ. ಆನಂದ್​ ಬೋಸ್ ಅವರು ಸಂವಿಧಾನದ 166(3) ಅನುಚ್ಛೇದದ ಅಡಿ ತಮ್ಮ ಅಧಿಕಾರವನ್ನು ಚಲಾಯಿಸಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ ಮಲ್ಲಿಕ್ ಅವರನ್ನು ಸಚಿವ ಸ್ತಾನದಿಂದ ಮುಕ್ತಗೊಳಿಸಿದ್ದಾರೆ. ಅವರ ಖಾತೆಗಳನ್ನು ಇತರರಿಗೆ ಹಂಚಲಾಗಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ: ಪಶ್ಚಿಮಬಂಗಾಳದಲ್ಲಿ ಬಹುಕೋಟಿ ಮೌಲ್ಯದ ಪಡಿತರ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. ಇದರಲ್ಲಿ ಸಚಿವ ಅರಣ್ಯ ಇಲಾಖೆ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್​ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಇದರ ವಿರುದ್ಧ ಇಡಿ ಕೇಸ್​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಕಳೆದ ವರ್ಷದಲ್ಲಿ ಜ್ಯೋತಿ ಪ್ರಿಯಾ ಮಲಿಕ್​ರನ್ನು ಬಂಧಿಸಲಾಗಿದೆ.

ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಎಸಗಿರುವ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಪ್ರಕರಣ ಸಂಬಂಧ ಈ ಹಿಂದೆ ಬಾಕಿಬುರ್​ ರೆಹಮಾನ್​ ಅವರನ್ನು ಇಡಿ ಬಂಧಿಸಿತ್ತು. ವಿಚಾರಣೆಯಲ್ಲಿ ಸಚಿವ ಜ್ಯೋತಿಪ್ರಿಯ ಮಲಿಕ್ ಹೆಸರು ಕೇಳಿಬಂದಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಇಡಿ ಅಧಿಕಾರಿಗಳು ಸಚಿವರ ಮನೆ ಮೇಲೆ ದಾಳಿ ನಡೆಸಿದ್ದರು. ಸಾಲ್ಟ್​ ಲೇಕ್​ನ ಬಿ ಬ್ಲಾಕ್​ನಲ್ಲಿರುವ ಸಚಿವರ ಎರಡು ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಲಾಗಿತ್ತು. ಬಳಿಕ ಸಚಿವರನ್ನು ಬಂಧಿಸಲಾಗಿತ್ತು. ಬಹು ಕಠಿಣ ಕಾನೂನಾದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ: ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯ ಬಂಧಿಸಿದ ED

ETV Bharat Logo

Copyright © 2025 Ushodaya Enterprises Pvt. Ltd., All Rights Reserved.