ಕೋಟಾ(ರಾಜಸ್ಥಾನ): ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಜೆಇಇ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಜೆಇಇ ಮೇನ್ 2024 ಸೆಷನ್ 1 ಪರೀಕ್ಷೆಯ ಉತ್ತರಗಳನ್ನು ಬಿಡುಗಡೆ ಮಾಡಿದೆ. ಇದನ್ನು ವಿದ್ಯಾರ್ಥಿಗಳು ತಮ್ಮ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಕುರಿತು ಕೋಟಾದ ಶಿಕ್ಷಣ ತಜ್ಞ ದೇವ್ ಶರ್ಮಾ ಮಾತನಾಡಿದ್ದು, 'ಉತ್ತರ ಕೀ ಮತ್ತು ಪ್ರಶ್ನೆಗಳಲ್ಲಿ ದೋಷವಿದ್ದಲ್ಲಿ ವಿದ್ಯಾರ್ಥಿಗಳು ಸಹ ಆಕ್ಷೇಪಣೆ ಸಲ್ಲಿಸಬಹುದು. ವಿದ್ಯಾರ್ಥಿಗಳು ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಲು ಫೆಬ್ರವರಿ 8 ರಂದು ರಾತ್ರಿ 11:00 ಗಂಟೆಯವರೆಗೆ ಸಮಯ ನೀಡಲಾಗಿದೆ' ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅಧಿಕೃತ ವೆಬ್‌ಸೈಟ್ https://jeemain.nta.ac.in/ನಲ್ಲಿ ಉತ್ತರದ ಕೀಗಳನ್ನು ಬಿಡುಗಡೆ ಮಾಡಲಾಗಿದೆ. ಈ ವೆಬ್ಸೈಟ್ಗೆ ಹೋಗಿ ಅಲ್ಲಿ ಮುಖಪುಟದಲ್ಲಿ 'JEE MAIN 2024 ANSWER KEY LIVE' ಎಂದು ಬರೆದಿರುವುದರ ಲಿಂಕ್ ಮೇಲೆ ಕ್ಲಿಕ್ ಮಾಡಿ. ತಕ್ಷಣ ನಿಮಗೆ ಹೊಸ ಪುಟ ತೆರದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಭದ್ರತಾ ಪಿನ್ ಮೂಲಕ ಲಾಗಿನ್ ಆಗಬೇಕು. ನಿಮಗೆ ಹೊಸ ಪುಟದಲ್ಲಿ ಉತ್ತರ ಕೀ ದೊರಕಲಿದೆ. ಉತ್ತರ ಕೀಯಲ್ಲಿ ಏನಾದರೂ ದೋಷ ಕಂಡು ಬಂದರೆ ಅಗತ್ಯ ದೃಢೀಕರಣದೊಂದಿಗೆ ನೀವು ಆಕ್ಷೇಪಣೆ ದಾಖಲಿಸಬಹುದಾಗಿದೆ.
ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತವನ್ನು ಒಳಗೊಂಡಿರುವ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (ಬಿಇ) ಮತ್ತು ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿಟೆಕ್) ಗೆ ಒಟ್ಟು 90 ಪ್ರಶ್ನೆಗಳಿವೆ. ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ (ಬಾರ್ಚ್) 80 ಪ್ರಶ್ನೆಗಳನ್ನು ಹೊಂದಿದೆ. ಹಾಗೇ ಇವುಗಳಲ್ಲಿ 30 ಗಣಿತ ಮತ್ತು 50 ಸಾಮರ್ಥ್ಯ ಪರೀಕ್ಷೆಯಾಗಿದೆ. ಅದೇ ರೀತಿ, ಬ್ಯಾಚುಲರ್ ಆಫ್ ಪ್ಲಾನಿಂಗ್ (ಬಿಪ್ಲಾನಿಂಗ್) 105 ಪ್ರಶ್ನೆಗಳನ್ನು ಹೊಂದಿದೆ. ಇವುಗಳಲ್ಲಿ ಗಣಿತದಿಂದ 30 ಪ್ರಶ್ನೆಗಳು, ಆಪ್ಟಿಟ್ಯೂಡ್ ಪರೀಕ್ಷೆಯಿಂದ 50 ಪ್ರಶ್ನೆಗಳು ಮತ್ತು ಪ್ಲಾನಿಂಗ್ ಬೆಸ್ಟ್ ಆಬ್ಜೆಕ್ಟಿವ್ ಪರೀಕ್ಷೆಯಿಂದ 25 ಪ್ರಶ್ನೆಗಳು ಸೇರಿವೆ.
ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳು ಉತ್ತರ ಪ್ರತಿ ಸವಾಲಿಗೆ 200 ರೂ.ಎನ್‌ಟಿಎ ಶುಲ್ಕ ಪಾವತಸಿಬೇಕಿದ್ದು, ಆನ್‌ಲೈನ್ ಡೆಬಿಟ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ಕಳೆದ ವರ್ಷಗಳಲ್ಲಿಯೂ ಸಹ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಈ ರೀತಿಯಲ್ಲಿ ಸ್ವೀಕರಿಸಿದ ಆಕ್ಷೇಪಣೆಗಳನ್ನು ವಿಷಯ ತಜ್ಞರಿಂದ ಪರಿಶೀಲಿಸುತ್ತದೆ ಮತ್ತು ನಂತರ ತಪ್ಪಾಗಿದ್ದರೆ ತಿರಸ್ಕರಿಸಲಾಗುತ್ತದೆ ಸರಿಯಾಗಿದ್ದರೆ ವಿದ್ಯಾರ್ಥಿಗಳ ಆಕ್ಷೇಪಣೆ ಸ್ವೀಕರಿಸಿ ನಂತರ ಎಲ್ಲರಿಗೂ ಬೋನಸ್ ಅಂಕಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮ ಎಸಗಿದ್ರೆ ಕನಿಷ್ಠ 3 ವರ್ಷ ಜೈಲು, ₹1 ಕೋಟಿ ದಂಡ; ಲೋಕಸಭೆಯಲ್ಲಿ ಬಿಲ್ ಪಾಸ್