ETV Bharat / bharat

ಕಾಂಗ್ರೆಸ್​ ನಗರ ನಕ್ಸಲರ ಪರ, ಸೈನಿಕರ ವಿರೋಧಿ ಪಕ್ಷ: ಪ್ರಧಾನಿ ಮೋದಿ ಟೀಕೆ - JK PM MODI COMMENTS ON OPPOSTION - JK PM MODI COMMENTS ON OPPOSTION

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (ANI)
author img

By ETV Bharat Karnataka Team

Published : Sep 28, 2024, 5:09 PM IST

ಜಮ್ಮು (ಜಮ್ಮು- ಕಾಶ್ಮೀರ): ಕಾಂಗ್ರೆಸ್​ ನಗರ ನಕ್ಸಲರ ಪರವಾಗಿದೆ. ಪಕ್ಷವನ್ನು ಅರ್ಬನ್​​ ನಕ್ಸಲ್ಸ್​​ ಹೈಜಾಕ್ ಮಾಡಿದ್ದಾರೆ. ಕಾಂಗ್ರೆಸ್, ಎನ್‌ಸಿ ಮತ್ತು ಪಿಡಿಪಿ ಪಕ್ಷಗಳು ಸಂವಿಧಾನದ ದೊಡ್ಡ ಶತ್ರುಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಾಪ್ರಹಾರ ನಡೆಸಿದರು.

ಜಮ್ಮುವಿನ ಎಂಎಎಂ ಮೈದಾನದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಮೋದಿ, ಜಮ್ಮು ಮತ್ತು ಕಾಶ್ಮೀರದ ಜನರು ಶಾಂತಿಯನ್ನು ಬಯಸುತ್ತಿದ್ದಾರೆ. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದಿಂದ ಮುಕ್ತವಾದ ಸರ್ಕಾರಕ್ಕಾಗಿ ಕಾಯುತ್ತಿದ್ದಾರೆ. ಅವರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಆಶಿಸುತ್ತಿದ್ದಾರೆ ಎಂದು ಹೇಳಿದರು.

ಕುಟುಂಬ ಪಕ್ಷಗಳಾದ ಕಾಂಗ್ರೆಸ್, ಎನ್‌ಸಿಪಿ ಮತ್ತು ಪಿಡಿಪಿಯಿಂದ ಜಮ್ಮು ಮತ್ತು ಕಾಶ್ಮೀರದ ಜನರು ಬೇಸತ್ತಿದ್ದಾರೆ. ಉದ್ಯೋಗದಲ್ಲಿ ಭ್ರಷ್ಟಾಚಾರ ಮತ್ತು ತಾರತಮ್ಯವನ್ನು ಇಲ್ಲಿನ ಜನರು ಬಯಸುವುದಿಲ್ಲ. ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ರಕ್ತಪಾತದಿಂದ ದೂರವಿರಲು ಬಯಸುತ್ತಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಬೆಲೆ ಕಾಂಗ್ರೆಸ್​ಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸೈನಿಕರನ್ನು ಅವಮಾನಿಸಿದ ಕಾಂಗ್ರೆಸ್‌: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗಡಿಯಾಚೆ ಗುಂಡಿನ ದಾಳಿ ನಡೆದಾಗ ಬಿಳಿ ಬಾವುಟ ಹಾರಿಸಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತ ಭಯೋತ್ಪಾದಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಆರಂಭಿಸಿತು. 2016ರ ಸೆಪ್ಟೆಂಬರ್ 28ರ ರಾತ್ರಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಶತ್ರುವಿನ ಸೀಮೆಯನ್ನು ನುಗ್ಗಿ ದಾಳಿ ಮಾಡಿತು. ಇದನ್ನೆ ಜಗತ್ತೇ ಬೆಕ್ಕಸಬೆರಗಾಗಿ ನೋಡಿತು. ಆದರೆ, ಸೇನೆಯ ಈ ಮಹಾಸಾಹಸವನ್ನೇ ಕಾಂಗ್ರೆಸ್​​ ಪ್ರಶ್ನಿಸಿತು. ಸೈನಿಕರ ತ್ಯಾಗ ಬಲಿದಾನದ ಬೆಲೆ ಆ ಪಕ್ಷಕ್ಕೆ ಗೊತ್ತಿಲ್ಲ ಎಂದು ಹೇಳಿದರು.

ದೇಶದ ಸೈನಿಕರನ್ನು ಕಾಂಗ್ರೆಸ್ ಎಂದಿಗೂ ಗೌರವಿಸಲಿಲ್ಲ. ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ಸೈನಿಕರನ್ನು ವರ್ಷಗಳಿಂದ ಕಾಯಿಸುತ್ತಲೇ ಇತ್ತು ಎಂದು ಪ್ರಧಾನಿ ಆರೋಪಿಸಿದರು.

ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.61ರಷ್ಟು ಮತದಾನವಾಗಿರುವ ಬಗ್ಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜನತೆಯನ್ನು ಅಭಿನಂದಿಸಿದರು. ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. "ಈ ಬಾರಿಯ ವಿಜಯದಶಮಿ ನಮಗೆಲ್ಲರಿಗೂ ವಿಶೇಷವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಪೂರ್ಣ ಬಹುಮತವು ಅಧಿಕಾರಕ್ಕೆ ಬರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಸಂಕಲ್ಪ ಮಹಾ ರ್ಯಾಲಿಯಲ್ಲಿಂದು ಪ್ರಧಾನಿ ಮೋದಿ ಭಾಗಿ - PM Modi address BJP campaign

ETV Bharat Logo

Copyright © 2024 Ushodaya Enterprises Pvt. Ltd., All Rights Reserved.