ಹೈದರಾಬಾದ್: ಕಡಿಮೆ ಖರ್ಚಿನಲ್ಲಿ ತಿರುಪತಿಗೆ ಹೋಗಲು ಬಯಸಿದ್ದವರು ಐಆರ್ಸಿಟಿಸಿಯ ಈ ಹೊಸ ಪ್ಯಾಕೆಜ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. "ಗೋವಿಂದಂ" ಹೆಸರಿನಲ್ಲಿ ಹೈದರಾಬಾದ್‌ನಿಂದ ತಿರುಪತಿಗೆ ವಿಶೇಷ ಟೂರ್ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಘೋಷಿಸಿದೆ.
ಗೋವಿಂದಂ ತಿರುಪತಿ ಟೂರ್ ಪ್ಯಾಕೇಜ್: 'ಗೋವಿಂದಂ' ಹೆಸರಿನ ಈ ಟೂರ್ ಪ್ಯಾಕೇಜ್ 2 ರಾತ್ರಿ ಸೇರಿ 3 ದಿನಗಳನ್ನು ಒಳಗೊಂಡಿದೆ. ಇದರಲ್ಲಿ ವೆಂಕಟೇಶ್ವರ ಸ್ವಾಮಿ ದರ್ಶನ, ಪದ್ಮಾವತಿ ದೇವಸ್ಥಾನ, ಗೋವಿಂದರಾಜ ಸ್ವಾಮಿ ದರ್ಶನವು ಇರಲಿದೆ. ಹಾಗೆಯೇ ಶ್ರೀವಾರಿ ವಿಶೇಷ ದರ್ಶನಂ ಟಿಕೆಟ್ ಕೂಡ ಇದು ಹೊಂದಿದೆ. ಈ ಪ್ರಯಾಣವು ಹೈದರಾಬಾದ್‌ನ ಲಿಂಗಂಪಲ್ಲಿ ರೈಲ್ವೆ ನಿಲ್ದಾಣದಿಂದ ಆರಂಭವಾಗಲಿದೆ.
ಪ್ರವಾಸದ ಮೊದಲ ದಿನ: ಹೈದರಾಬಾದ್‌ನ ಲಿಂಗಂಪಲ್ಲಿ ರೈಲು ನಿಲ್ದಾಣದಿಂದ ಸಂಜೆ 5 ಗಂಟೆ 25 ನಿಮಿಷಕ್ಕೆ ಟ್ರೈನ್ ಹೊರಡುತ್ತದೆ. ನಂತರ 6 ಗಂಟೆ 10 ನಿಮಿಷಕ್ಕೆ ಸಿಕಿಂದ್ರಾಬಾದ್ ರೈಲ್ವೆ ನಿಲ್ದಾಣ, 7.38 ನಿಮಿಷಕ್ಕೆ ನಲ್ಗೊಂಡಕ್ಕೆ ತಲುಪಲಿದೆ. ನಂತರ ಇಡೀ ರಾತ್ರಿ ಪ್ರಯಾಣ ಮುಂದುವರೆಯುತ್ತದೆ.
ಎರಡನೇ ದಿನ: ಬೆಳಗ್ಗೆ 5:55ಕ್ಕೆ ರೈಲು ತಿರುಪತಿ ತಲುಪಲಿದೆ. ಅಲ್ಲಿಂದ ಐಆರ್‌ಸಿಟಿಸಿ ಬಸ್ನಲ್ಲಿ ಪ್ರಯಾಣಿಕರನ್ನು ತ್ರಿಸ್ಟಾರ್ ಹೋಟೆಲ್‌ಗೆ ಕರೆದೊಯ್ಯುಲಾಗುತ್ತದೆ. ಎಸಿ ಕೊಠಡಿ ಸೌಲಭ್ಯವೂ ಉಂಟು. ಹೋಟೆಲ್‌ನಲ್ಲಿ ಫ್ರಶಪ್, ಟಿಫಿನ್ ಮುಗಿದ ನಂತರ, ಬೆಳಗ್ಗೆ 8 ಗಂಟೆಗೆ ಶ್ರೀವಾರಿ ವಿಶೇಷ ದರ್ಶನಕ್ಕಾಗಿ ತಿರುಮಲಕ್ಕೆ ಕರೆದೊಯ್ಯಲಾಗುತ್ತದೆ. ದರ್ಶನ ಮುಗಿದ ಬಳಿಕ ಊಟಕ್ಕೆ ಪುನಃ ತಿರುಪತಿಯಲ್ಲಿನ ಹೋಟೆಲ್‌ಗೆ ಕರೆ ತರಲಾಗುತ್ತದೆ. ನಂತರ ತಿರುಚಾನೂರ್ ಪದ್ಮಾವತಿ ದೇವಸ್ಥಾನಕ್ಕೆ ದರ್ಶನಕ್ಕೆ ಕರೆದೊಯ್ಯಲಾಗುತ್ತದೆ. ಅದೇ ದಿನ, ತಿರುಪತಿ ರೈಲು ನಿಲ್ದಾಣದಿಂದ ಸಂಜೆ 6:25ಕ್ಕೆ ರಿಟರ್ನ್ ಜರ್ನಿ ಆರಂಭವಾಗಲಿದ್ದು ಮರು ದಿನ ಬೆಳಗ್ಗೆ 6.55 ನಿಮಿಷಕ್ಕೆ ಲಿಂಗಪಲ್ಲಿಗೆ ತಲುಪುವ ಮೂಲಕ ಪ್ರವಾಸವು ಕೊನೆಗೊಳ್ಳಲಿದೆ.
ಟಿಕೆಟ್ ದರ: ಈ ಪ್ರವಾಸದ ದರವೂ ಒಬ್ಬ ವ್ಯಕ್ತಿಗೆ 3,800 ರೂಪಾಯಿ ನಿಗದಿಪಡಿಸಲಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ್ಳಿಗೆ ಉಚಿತ. ಈ ಪ್ರವಾಸಕ್ಕೆ ತೆರಳುವವರು ಕಡ್ಡಾಯವಾಗಿ ಒರಿಜಿನಲ್ ಆಧಾರ್ ಕಾರ್ಡ್ ಹೊಂದಿರಲೇಬೇಕು.
ಇದನ್ನೂ ಓದಿ: F77 Mach-2 ಎಲೆಕ್ಟ್ರಿಕ್ ಮೋಟರ್ ಸೈಕಲ್ ಬಿಡುಗಡೆ: ವಿಶೇಷತೆ, ವಿನ್ಯಾಸ, ಬೆಲೆ- ಸಂಪೂರ್ಣ ವಿವರ - Electric Motorcycle