ETV Bharat / bharat

ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸಬೇಕೆ? ಹಾಗಾದ್ರೆ ಸರಿಯಾದ ITR ಫಾರ್ಮ್​ ಆಯ್ಕೆಮಾಡುವುದು ಹೇಗೆ ಗೊತ್ತಾ? - Income Tax Return Form - INCOME TAX RETURN FORM

ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸಲು ಈ ಕೆಳಗಿರುವ ಫಾರ್ಮ್​ಗಳಡಿ ನಿಮಗೆ ಅನ್ವಯಿಸುವುದನ್ನು ಆಯ್ಕೆ ಮಾಡಿಕೊಂಡು ಈ ರೀತಿಯಾಗಿ ಸಲ್ಲಿಸಬಹುದಾಗಿದೆ.

ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸಬೇಕೆ? ಹಾಗಾದ್ರೆ ಸರಿಯಾದ ITR ಫಾರ್ಮ್​ ಆಯ್ಕೆಮಾಡುವುದು ಹೇಗೆ ಗೊತ್ತಾ?

author img

By ETV Bharat Karnataka Team

Published : Mar 24, 2024, 3:09 PM IST

ಪ್ರಸಕ್ತ ಆರ್ಥಿಕ ವರ್ಷ 2023-24ರ ಮುಕ್ತಾಯಕ್ಕೆ ಇನ್ನು 7 ದಿನಗಳು ಮಾತ್ರ ಬಾಕಿ ಉಳಿದಿವೆ. ಆದಾಯ ತೆರಿಗೆ ರಿಟರ್ನ್ಸ್​ (ITR) ಸಲ್ಲಿಸದವರಿಗೆ ಮಾ.31ರ ವರೆಗೆ ಸಮಯವಿದ್ದು ರಿಟರ್ನ್ಸ್​ ಸಲ್ಲಿಸಬುಹದಾಗಿದೆ.

ರಿಟರ್ನ್ಸ್​ ಸಲ್ಲಿಸುವುದು ಹೇಗೆ?: ಇದಕ್ಕಾಗಿ ತೆರಿಗೆ ಇಲಾಖೆ 7 ಬಗೆಯ ITR-1, ITR-2, ITR-3, ITR-4, ITR-5, ITR-6 & ITR-7 ಫಾರ್ಮ್​ಗಳನ್ನು ಸೂಚಿಸಿದೆ. ತೆರಿಗೆದಾರರ ಆದಾಯದ ಮೂಲಗಳು, ಗಳಿಸಿದ ಮೊತ್ತ ಮತ್ತು ತೆರಿಗೆದಾರರು ಯಾವ ವರ್ಗಕ್ಕೆ ಸೇರಿದ್ದಾರೆ ಎಂಬುದರ ಆಧಾರದ ಮೇಲೆ ಸೂಕ್ತವಾದ ITR ಫಾರ್ಮ್ ಅನ್ನು ಆಯ್ಕೆ ಮಾಡಿಕೊಂಡು ರಿಟರ್ನ್ಸ್​ ಸಲ್ಲಿಸಬೇಕಾಗುತ್ತದೆ.

ಸರಿಯಾದ ITR ಫಾರ್ಮ್ ಅನ್ನು ಹೇಗೆ ಆಯ್ಕೆ ಮಾಡುವುದು?

ಪ್ರತಿ ವರ್ಷ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಹಿಂದಿನ ಹಣಕಾಸು ವರ್ಷದ ITR ಫಾರ್ಮ್‌ಗಳನ್ನು ತಿಳಿಸುತ್ತದೆ. ಕೆಳಗೆ ತಿಳಿಸಲಾದ ಯಾವುದೇ ಷರತ್ತುಗಳು ನಿಮಗೆ ಅನ್ವಯಿಸಿದರೆ, ನೀವು ಖಂಡಿತವಾಗಿಯೂ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬೇಕಾಗುತ್ತದೆ.

ITR-1 ಅಥವಾ SAHAJ: ವ್ಯಕ್ತಿಗಳು ಭಾರತದಲ್ಲಿ ನೆಲೆಸಿರುವ ಸಾಮಾನ್ಯ ನಾಗರಿಕರು ಮತ್ತು ರೂ. 50 ಲಕ್ಷದವರೆಗಿನ ಆದಾಯವನ್ನು ಹೊಂದಿರುವವರು ITR-1 ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ. ಸಂಬಳ, ಮನೆಯಿಂದ ಬರುವ ಆದಾಯ, ಇತರ ಮೂಲಗಳಿಂದ ಬರುವ ಆದಾಯ, ಸಂಗಾತಿ ಅಥವಾ ಮಕ್ಕಳಿಂದ ಬರುವ ಆದಾಯ ಸೇರಿ ಎಲ್ಲವೂ ರೂ.50 ಲಕ್ಷದವರೆಗೆ ಇದ್ದರೆ, ಐಟಿಆರ್-1ರ ಅಡಿ ರಿಟರ್ನ್ಸ್​ ಸಲ್ಲಿಸಬೇಕು.

ITR-2: ವೃತ್ತಿ, ವ್ಯಾಪಾರ, ಹಿಂದೂ ಅವಿಭಜಿತ ಕುಟುಂಬಗಳಿಂದ ಆದಾಯ ಗಳಿಸದ ವ್ಯಕ್ತಿಗಳು ಈ ITR ಫಾರ್ಮ್-2 ಅನ್ನು ಸಲ್ಲಿಸಬೇಕು. ರೂ.50 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿ, ಕಂಪನಿಯ ನಿರ್ದೇಶಕರು, ಪಟ್ಟಿ ಮಾಡದ ಈಕ್ವಿಟಿ ಷೇರುಗಳನ್ನು ಹೊಂದಿರುವವರು ಈ ಐಟಿಆರ್ ಫಾರ್ಮ್-2 ಅನ್ನು ಸಲ್ಲಿಸಬೇಕು. ಮಾಸಿಕ ಸಂಬಳ ಹೊಂದಿರುವವರು, ಬಹು ಕುಟುಂಬಗಳು, ಬಂಡವಾಳ ಲಾಭಗಳು, ವಿದೇಶಗಳಲ್ಲಿ ಆಸ್ತಿಗಳು ಮತ್ತು ಆದಾಯದ ಮಾರ್ಗಗಳನ್ನು ಹೊಂದಿರುವವರು ITR-2 ಫಾರ್ಮ್​ ಅನ್ನು ಸಲ್ಲಿಸಬೇಕು.

ITR-3: ವೃತ್ತಿ, ವ್ಯಾಪಾರ ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಂದ ಆದಾಯ ಮತ್ತು ಲಾಭ ಗಳಿಸುವ ವ್ಯಕ್ತಿಗಳು ಈ ಫಾರ್ಮ್​ ಸಲ್ಲಿಸಬೇಕು.

ITR-4 ಅಥವಾ SUGAM: ರೂ.50 ಲಕ್ಷದವರೆಗೆ ಆದಾಯ ಹೊಂದಿರುವ ವ್ಯಕ್ತಿಗಳು, HUFಗಳು, ಸಂಸ್ಥೆಗಳು (LLP ಹೊರತುಪಡಿಸಿ); ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 44AD, 44ADA, 44AE ಪ್ರಕಾರ, ವೃತ್ತಿ ಮತ್ತು ವ್ಯವಹಾರದ ಮೂಲಕ ಆದಾಯ ಗಳಿಸುವ ವ್ಯಕ್ತಿಗಳು ITR-4 ಅನ್ನು ಸಲ್ಲಿಸಬೇಕು.

ITR-5: ವ್ಯಕ್ತಿಗಳು, HUF, ಕಂಪನಿಗಳು, ITR-7 ಫೈಲರ್‌ಗಳನ್ನು ಹೊರತುಪಡಿಸಿ, ಇತರ ರೀತಿಯಲ್ಲಿ ಆದಾಯವನ್ನು ಗಳಿಸುವವರು ಈ ITR-5 ಫಾರ್ಮ್ ಅನ್ನು ಸಲ್ಲಿಸಬೇಕು.

ITR-6: ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 11ರ ಅಡಿಯಲ್ಲಿ ವಿನಾಯಿತಿ ಪಡೆಯುವ ಕಂಪನಿಗಳನ್ನು ಹೊರತುಪಡಿಸಿ ಇತರ ಕಂಪನಿಗಳು ಈ ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ.

ITR-7: ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 139(4A) ಅಥವಾ 139(4B) ಅಥವಾ 139(4C) ಅಥವಾ 139(4D) ಅಡಿಯಲ್ಲಿ ರಿಟರ್ನ್ಸ್ ಸಲ್ಲಿಸುವ ವ್ಯಕ್ತಿಗಳು ಮತ್ತು ಕಂಪನಿಗಳು ಇದನ್ನು ಸಲ್ಲಿಸಬೇಕಾಗುತ್ತದೆ. ವ್ಯಕ್ತಿಗಳು, ದತ್ತಿ ಸಂಸ್ಥೆಗಳು, ಧಾರ್ಮಿಕ ಟ್ರಸ್ಟ್‌ಗಳು, ರಾಜಕೀಯ ಪಕ್ಷಗಳು, ವೈಜ್ಞಾನಿಕ ಸಂಶೋಧನಾ ಸಂಘಗಳು, ಸುದ್ದಿ ಸಂಸ್ಥೆಗಳು, ಆಸ್ಪತ್ರೆಗಳು, ಟ್ರೇಡ್ ಯೂನಿಯನ್‌ಗಳು, ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಎನ್‌ಜಿಒಗಳು ಅಥವಾ ಅಂತಹ ಇತರ ಸಂಸ್ಥೆಗಳು ITR-7 ವ್ಯಾಪ್ತಿಗೆ ಒಳಪಡುತ್ತವೆ.

ಇದನ್ನೂ ಓದಿ: ಏ.1ಕ್ಕೆ ಎನ್​ಪಿಎಸ್​ ಲಾಗಿನ್​ ಹೊಸ ನಿಯಮ ಜಾರಿ: ಇನ್ಮುಂದೆ ಆಧಾರ್​​ ದೃಢೀಕರಣ ಕಡ್ಡಾಯ - NPS New Login Rule

ETV Bharat Logo

Copyright © 2024 Ushodaya Enterprises Pvt. Ltd., All Rights Reserved.