ETV Bharat / bharat

ಜ್ಞಾನವಾಪಿ ಸಂಕೀರ್ಣದಲ್ಲಿರುವ ಮೂರ್ತಿಗಳಿಗೆ ಪ್ರತಿನಿತ್ಯ 5 ಬಾರಿ ಆರತಿ: ವೇಳಾಪಟ್ಟಿ ಪ್ರಕಟ - ಶೃಂಗಾರ ಗೌರಿ ಸಂಕೀರ್ಣ

ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ಸಂಕೀರ್ಣದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತಿದೆ. ಹಿಂದೂ ಸಂಘಟನೆಗಳ ಕಡೆಯವರು ನಡೆಸುವ ಐದು ಆರತಿಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

gyanvapi  Gyanvapi complex  five aartis  ಜ್ಞಾನವಾಪಿ ಮಸೀದಿ  ಶೃಂಗಾರ ಗೌರಿ ಸಂಕೀರ್ಣ  ವಾರಣಾಸಿ ನ್ಯಾಯಾಲಯ
ಜ್ಞಾನವಾಪಿ ಸಂಕೀರ್ಣದಲ್ಲಿ ಪ್ರತಿನಿತ್ಯ ಐದು ಆರತಿ: ವೇಳಾಪಟ್ಟಿ ಪ್ರಕಟ
author img

By ETV Bharat Karnataka Team

Published : Feb 2, 2024, 8:34 AM IST

ವಾರಣಾಸಿ(ಉತ್ತರ ಪ್ರದೇಶ): ಜ್ಞಾನವಾಪಿ ಮಸೀದಿ ವಿವಾದದ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮುಂದುವರೆದಿದೆ. ಈ ಮಧ್ಯೆ ವಿವಾದಿತ ಸ್ಥಳದಲ್ಲಿ ವಾರಣಾಸಿ ನ್ಯಾಯಾಲಯವು ಪೂಜೆಗೆ ಅನುಮತಿ ನೀಡಿದ ನಂತರ, ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ಸಂಕೀರ್ಣದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿರುವ ಹಿಂದೂ ಪಕ್ಷಗಾರರ ಕಡೆಯವರು ಐದು ಆರತಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ನೆಲಮಾಳಿಗೆಯಲ್ಲಿ ಪ್ರತಿದಿನವೂ ವಿಶೇಷ ಪೂಜೆ ಜರುಗಲಿದೆ. ಸಂಕೀರ್ಣದೊಳಗಿನ 'ವ್ಯಾಸ್ ಕಾ ತೆಖಾನಾ'ದಲ್ಲಿ ಪ್ರತಿದಿನ ಆರತಿ ಬೆಳಗಲಾಗುತ್ತದೆ ಎಂದು ಹಿಂದೂ ಪರವಾಗಿ ಪ್ರತಿನಿಧಿಸುವ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ವಿಷ್ಣು ಶಂಕರ್ ಜೈನ್ ಮಾಹಿತಿ ನೀಡಿ, ಐದು ಬಾರಿ ನಡೆಯಲಿರುವ ಆರತಿ ಸಮಯದ ವೇಳಾಪಟ್ಟಿ ಪ್ರಕಟಿಸಿದ್ದಾರೆ. "ಪ್ರತಿದಿನ ಐದು ಆರತಿಗಳು ನಡೆಯಲಿವೆ. 1) ಮಂಗಳಾರತಿ- ಬೆಳಿಗ್ಗೆ 3:30, ಭೋಗ್- ಮಧ್ಯಾಹ್ನ 12ಕ್ಕೆ, ಅಪರಾಹ್ನ ಆರತಿ-ಸಂಜೆ 4, ಸಂಯ್ಕಾಲ್- ಸಂಜೆ 7, ಶಯನ್ ಆರತಿ- ರಾತ್ರಿ 10:30ಕ್ಕೆ ಜರುಗಲಿದೆ" ಎಂದು ಬರೆದುಕೊಂಡಿದ್ದಾರೆ.

ವಾರಣಾಸಿ ನ್ಯಾಯಾಲಯವು ಹಿಂದೂ ಭಕ್ತರಿಗೆ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಬುಧವಾರ ಅನುಮತಿಸಿತ್ತು. ಆದೇಶದ ಪ್ರಕಾರ, ಮಸೀದಿಯೊಳಗಿನ ನಿರ್ಬಂಧಿತ ಪ್ರದೇಶವಾದ 'ವ್ಯಾಸ್ ಕಾ ತೆಖಾನಾ'ದಲ್ಲಿ ಹಿಂದೂ ಭಕ್ತರು ಈಗ ಪ್ರಾರ್ಥನೆ ಸಲ್ಲಿಸಬಹುದು. ಗುರುವಾರದ ಹಿಂದಿನ ವಿಚಾರಣೆಯ ವೇಳೆ ನ್ಯಾಯಾಲಯವು ಭಕ್ತರಿಂದ ಪೂಜೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಪೂಜೆಗೆ ಅರ್ಚಕರನ್ನು ನಾಮನಿರ್ದೇಶನ ಮಾಡುವಂತೆಯೂ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ಗೆ ಸೂಚನೆ ನೀಡಿತ್ತು.

ಗುರುವಾರ ಮಧ್ಯರಾತ್ರಿ, ಜ್ಞಾನವಾಪಿ ಸಂಕೀರ್ಣವನ್ನು ಹಿಂದೂ ಕಡೆಯವರಿಂದ ನಡೆಯುವ ಪೂಜೆಗಾಗಿ ತೆರೆಯಲಾಗಿತ್ತು. ಆವರಣದ ಸರ್ವೇಕ್ಷಣೆಯ ವೇಳೆ ದೊರೆತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಸಾದ ವಿನಿಯೋಗ ಮಾಡಲಾಯಿತು. ವಿಷ್ಣುವಿನ ಪ್ರತಿಮೆ, ಗಣೇಶನ ವಿಗ್ರಹ, ಎರಡು ಹನುಮಂತನ ಪ್ರತಿಮೆಗಳು ಮತ್ತು ಅದರ ಮೇಲೆ ರಾಮ ಬರೆದ ಕಲ್ಲುಗಳನ್ನು ಇರಿಸಲಾಗಿದೆ.

ಮುಸ್ಲಿಂ ಪಕ್ಷಗಾರರು ಗುರುವಾರ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಹಿಂದೂ ಕಡೆಯವರು ಕೂಡ ಪ್ರಕರಣದಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ. ಜ್ಞಾನವಾಪಿ ಮಸೀದಿ ಎಂಬ ಫಲಕದ ಮೇಲೆ ಹಿಂದೂ ಬೆಂಬಲಿಗರು 'ಮಂದಿರ' ಎಂದು ಬರೆದು ಅಂಟಿಸಿದ್ದರು. ಸ್ಥಳದಲ್ಲಿ ಉತ್ತರ ಪ್ರದೇಶ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಿದ್ದಾರೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ; ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಹಿಂದೂ ಅರ್ಚಕರ ಕುಟುಂಬ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.