ETV Bharat / bharat

Zika Virus: ರಾಜ್ಯಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸಲಹೆ - ZIKA VIRUS Advisory to States - ZIKA VIRUS ADVISORY TO STATES

ಮಹಾರಾಷ್ಟ್ರದಲ್ಲಿ 8 ಝಿಕಾ ಸೋಂಕು ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ.

health-ministry-issues-advisory-to-states-alerts-clinicians-for-close-monitoring
ಝಿಕಾ ಸೋಂಕು (ಸಾಂದರ್ಭಿಕ ಚಿತ್ರ)
author img

By ETV Bharat Karnataka Team

Published : Jul 4, 2024, 12:29 PM IST

ನವದೆಹಲಿ: ಮಹಾರಾಷ್ಟ್ರದಲ್ಲಿ ಝಿಕಾ ವೈರಸ್​ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೋಂಕಿನ ಕುರಿತು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿ ಸಲಹೆಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಝಿಕಾ ವೈರಸ್ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆ ಎಲ್ಲಾ ರಾಜ್ಯಗಳು ನಿರಂತರವಾಗಿ ಈ ಕುರಿತು ನಿಗಾ ವಹಿಸುವಂತೆ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ ಅತುಲ್ ಗೋಯೆಲ್ ತಿಳಿಸಿದ್ದಾರೆ.

ಝಿಕಾ ಸೋಂಕು ಗರ್ಭಿಣಿ ಭ್ರೂಣದ ಮೈಕ್ರೊಸೆಫಾಲಿ (ತಲೆಗಾತ್ರ ಕಡಿಮೆ) ಮತ್ತು ನರವೈಜ್ಞಾನಿಕ ಸಮಸ್ಯೆಗೆ ಕಾರಣವಾಗುವ ಹಿನ್ನೆಲೆ ಅಗತ್ಯ ಮೇಲ್ವಿಚಾರಣೆಯೊಂದಿಗೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಸೂಚಿಸಲಾಗಿದೆ. ಝಿಕಾ ವೈರಸ್​ ಸೋಂಕಿತ ಪ್ರದೇಶಗಳಲ್ಲಿ ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸುವುದು. ಇಂತಹ ಪ್ರದೇಶಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ನೀಡುವಂತೆ, ಗರ್ಭಿಣಿಯರಲ್ಲಿ ಝಿಕಾ ಸೋಂಕು ದೃಢಪಟ್ಟರೆ, ಕೇಂದ್ರ ಸರ್ಕಾರದ ಮಾರ್ಗಸೂಚನೆ ಅನುಸಾರ ಕ್ರಮ ನಡೆಸುವಂತೆ ಕೂಡ ರಾಜ್ಯಗಳಿಗೆ ಒತ್ತಾಯಿಸಲಾಗಿದೆ.

ಏಡಿಸ್​ ಸೊಳ್ಳೆಗಳಿಂದ ಪ್ರದೇಶಗಳು ಮುಕ್ತವಾಗಿರುವಂತೆ ನೋಡಿಕೊಳ್ಳುವ ಜೊತೆಗೆ ಈ ಕುರಿತು ಮೇಲ್ವಿಚಾರಣೆಗೆ ನೋಡಲ್​ ಅಧಿಕಾರಿಗಳನ್ನು ನೇಮಿಸಬೇಕು. ಅಗತ್ಯ ಆರೋಗ್ಯ ಸೌಲಭ್ಯ ಮತ್ತು ಆಸ್ಪತ್ರೆಗಳ ಕುರಿತು ಅವರು ಸಲಹೆ ನೀಡಬೇಕು. ಜನನಿಬಿಡ ಪ್ರದೇಶ, ಮನೆ ಸುತ್ತಮುತ್ತ, ಕಾರ್ಯ ಸ್ಥಳ, ಶಾಲೆ, ಕಟ್ಟಡ ನಿರ್ಮಾಣ ಸ್ಥಳಗಳು, ಸಂಸ್ಥೆ ಸುತ್ತಮುತ್ತ ಝಿಕಾ ಸೋಂಕಿನ ಕುರಿತು ಹೆಚ್ಚಿನ ಕಣ್ಗಾವಲುವಹಿಸಿ, ಅಗತ್ಯ ಕ್ರಮಕ್ಕೆ ಮುಂದಾಗಬೇಕು.

ಜೊತೆಗೆ ರಾಜ್ಯಗಳು ಸಾಮಾಜಿಕ ಜಾಲತಾಣ ಮತ್ತಿತರ ವೇದಿಕೆ ಬಳಕೆ ಮಾಡಿಕೊಂಡು ಝಿಕಾ ವೈರಸ್​ ಸೋಂಕಿನ ಕುರಿತು ಮುನ್ನೆಚ್ಚರಿಕೆ ಕ್ರಮದ ಅರಿವು ಮೂಡಿಸಬೇಕು. ಈ ಮೂಲಕ ಸೋಂಕಿನ ಕುರಿತು ಸಮುದಾಯದಲ್ಲಿ ಮೂಡಿರುವ ಆತಂಕ ತಗ್ಗಿಸುವ, ಅರಿವು ಮೂಡಿಸಬೇಕು. ಝಿಕಾ ಕೂಡ ಇತರೆ ಸೋಂಕಿನಂತೆ ಯಾವುದೇ ಲಕ್ಷಣ ಅಥವಾ ಸೌಮ್ಯ ಲಕ್ಷಣ ಹೊಂದಿದ್ದು, ಈ ಕುರಿತು ಜನರಿಗೆ ತಿಳಿಸಬೇಕು.

ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಝಿಕಾ ವೈರಸ್​ ಸೋಂಕು ಮಗುವಿನ ಮೈಕ್ರೊಸೆಫಾಲಿಗೆ ಸಂಬಂಧಿಸಿದೆ. 2016ರಿಂದ ಮೈಕ್ರೋಸೆಫಾಲಿ ಸಂಬಂಧಿತ ಝಿಕಾ ಸೋಂಕು ದೇಶದಲ್ಲಿ ಕಂಡು ಬಂದಿರಲಿಲ್ಲ.

ಸೂಕ್ತ ಸಮಯದಲ್ಲಿ ಪತ್ತೆ ಮತ್ತು ನಿಯಂತ್ರಣದ ಮೂಲಕ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳಿಗೆ ಕಣ್ಗಾವಲು ವಹಿಸುವಂತೆ ಸಲಹೆ ನೀಡಲಾಗಿದ್ದು, ಎಲ್ಲಾ ಮಟ್ಟದಲ್ಲಿ ಸಿದ್ಧತೆ ಲಭ್ಯವಾಗಿರುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯಗಳು ಐಡಿಎಸ್​ಪಿ ಮತ್ತು ಎನ್​ಸಿವಿಬಿಡಿಸಿ ಕಾರ್ಯಕ್ರಮಗಳ ಮೂಲಕ ಪ್ರಕರಣದ ತಕ್ಷಣ ಪತ್ತೆಗೆ ಮುಂದಾಗಬೇಕು. ರಾಷ್ಟ್ರೀಯ ವೈರಾಲಾಜಿ ಸಂಸ್ಥೆ (ಎನ್​ಐವಿ), ಪುಣೆಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್​ಸಿಡಿಸಿ) ಮತ್ತು ದೆಹಲಿಯ ಐಸಿಎಂಆರ್​ನಿಂದ ಕೆಲವು ಆಯ್ದ ಸಂಶೋಧನಾ ಮತ್ತು ಪತ್ತೆ ಕೇಂದ್ರದಲ್ಲಿ ಝಿಕಾ ಸೋಂಕಿನ ಪರೀಕ್ಷೆ ನಡೆಸಬಹುದಾಗಿದೆ.

ಝಿಕಾ ವೈರಸ್​ ಕುರಿತು: ಡೆಂಗ್ಯೂ ಮತ್ತು ಚಿಗನ್​ಗುನ್ಯಾನಂತೆ ಏಡಿಸ್​ ಸೊಳ್ಳೆಯಿಂದ ಹರಡುವ ಸೋಂಕು ಇದಾಗಿದೆ. ಇದು ಮಾರಣಾಂತಿಕ ಸೋಂಕು ಅಲ್ಲ. ಆದರೆ, ಝಿಕಾ ಮೈಕ್ರೊಸೆಫಾಲಿಯೊಂದಿಗೆ ಸಂಬಂಧ ಹೊಂದಿದ್ದಲ್ಲಿ, ಇದು ಗರ್ಭಿಣಿಯರ ಭ್ರೂಣದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.

2016ರಲ್ಲಿ ಗುಜರಾತ್​​ನಲ್ಲಿ ಮೊದಲ ಬಾರಿಗೆ ಝಿಕಾ ಸೋಂಕು ಪತ್ತೆಯಾಗಿತ್ತು. ತಮಿಳುನಾಡು, ಮಧ್ಯಪ್ರದೇಶಮ ರಾಜಸ್ಥಾನ್​, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ಕರ್ನಾಟಕದಲ್ಲೂ ಇದರ ವರದಿಯಾಗಿದೆ. ಈ ವರ್ಷ ಜುಲೈ 2ರ ವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 8 ಪ್ರಕರಣ ವರದಿಯಾಗಿದೆ.

ಇದನ್ನೂ ಓದಿ: ಗುಡ್​ ನ್ಯೂಸ್​: ಝಿಕಾ ವೈರಸ್‌ ತಡೆಯಲು ವಿಶೇಷ ಲಸಿಕೆ ಅಭಿವೃದ್ಧಿಪಡಿಸಿದ ಆಸ್ಟ್ರೇಲಿಯಾ ವಿಜ್ಞಾನಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.