ETV Bharat / bharat

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ; 3 ವರ್ಷದಿಂದ ಒಂದೇ ಕಾಲಲ್ಲಿ ನಿಂತಿರುವ ಹಠಯೋಗಿ ಬಾಬಾ! - Baba unique form of protest - BABA UNIQUE FORM OF PROTEST

ಬಾಬಾ ಮಹೇಶಾನಂದ್ ಗಿರಿ ಅಲಿಯಾಸ್ ಬಚ್ಚಾ ಬಾಬಾ ಕಳೆದ ಮೂರು ವರ್ಷದಿಂದ ತಮ್ಮ ಬೇಡಿಕೆ ಈಡೇರಿಸುವಂತೆ ಹಗಲಿರುಳು ಒಂದು ನಿಮಿಷವೂ ಮಲಗದೇ, ಒಂದೇ ಕಾಲಿನಲ್ಲಿ ನಿಂತು ಹೋರಾಟ ನಡೆಸಿದ್ದಾರೆ.

hathayogi-baba-unique-protest-standing-on-one-leg
ಹಠಯೋಗಿ ಬಾಬಾ (ETV Bharat)
author img

By ETV Bharat Karnataka Team

Published : Aug 20, 2024, 12:20 PM IST

ಫಿರೋಜ್​ಪುರ್​: ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟನೆಗಳು ಹೊಸದಲ್ಲ. ಆದರೆ, ಪ್ರತಿಭಟನೆ ನಡೆಸಲು ಕೆಲವೊಮ್ಮೆ ಅನುಸರಿಸುವ ಮಾರ್ಗಗಳು ವಿಶೇಷತೆಯಿಂದ ಕೂಡಿರುತ್ತದೆ. ಅದೇ ರೀತಿ ವಿಭಿನ್ನ ರೀತಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಂತರೊಬ್ಬರು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಗ್ರಾಮದಲ್ಲಿ ರಸ್ತೆ ಸೇರಿದಂತೆ ಮೂಲ ಸೌಕರ್ಯಕ್ಕಾಗಿ ಆಗ್ರಹಿಸಿರುವ ಇವರು, ಒಂಟಿ ಕಾಲಲ್ಲಿ ನಿಂತು ಕಳೆದ ಮೂರು ವರ್ಷಗಳಿಂದ ಪ್ರತಿಭಟನೆ ನಡೆಸಿದ್ದಾರೆ.

ಯಾರಿದು ಸಂತ: ಬಾಬಾ ಮಹೇಶಾನಂದ್ ಗಿರಿ ಅಲಿಯಾಸ್ ಬಚ್ಚಾ ಬಾಬಾ ಕಳೆದ ಮೂರು ವರ್ಷದಿಂದ ತಮ್ಮ ಬೇಡಿಕೆ ಈಡೇರಿಸುವಂತೆ ಹಗಲಿರುಳು ಒಂದು ನಿಮಿಷವೂ ಮಲಗದೇ, ಒಂದೇ ಕಾಲಿನಲ್ಲಿ ನಿಂತು ಹೋರಾಟ ನಡೆಸಿದ್ದಾರೆ. ಇವರ ಈ ಛಲಗಂಡ ಜನರು ಇವರನ್ನು ಹಠಯೋಗಿ ಬಾಬಾ ಎಂದು ಕರೆದಿದ್ದು, ಅದೇ ಹೆಸರಿನಿಂದ ಇದೀಗ ಖ್ಯಾತಿ ಪಡೆದಿದ್ದಾರೆ.

ತುಂಡ್ಲಾ ತಹಸಿಲ್‌ನದ ಯಮುನ ನದಿ ದಂಡೆ ಮೇಲಿರುವ ಗ್ವಾರೈ ಗ್ರಾಮದ ಹೊರವಲಯದಲ್ಲಿ ನಿರ್ಮಿಸಲಾಗಿರುವ ಮಂಹತ್​ ಕೂಡ ಆಗಿದ್ದಾರೆ ಈ ಬಾಬಾ. ಈ ಗ್ರಾಮವೂ ಕಳಪೆ ರಸ್ತೆ ಮತ್ತು ವಿದ್ಯುತ್ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆ ಹೊಂದಿದ್ದು, ಇವುಗಳನ್ನು ನಿಗಿಸುವಂತೆ ಕೋರಿದ್ದಾರೆ.

ಏನಿವರ ಬೇಡಿಕೆ: ಈ ಪ್ರತಿಭಟನೆ ಕುರಿತು ಮಾತನಾಡಿರುವ ಬಾಬಾ, ಜನರು ಅನುಭವಿಸುತ್ತಿರುವ ಬವಣೆ ಕಂಡು ನಾನು ಒಂಟಿ ಕಾಲಲ್ಲಿ ನಿಂತು ಪ್ರತಿಭಟನೆ ಆರಂಭಿಸುವ ಪ್ರತಿಜ್ಞೆ ಮಾಡಿದೆ. ಒಂದೇ ಕಾಲಿನಲ್ಲಿ ಸದಾ ನಿಲ್ಲುತ್ತೇನೆ. ಕಾಲು ನೋವಾದಾಗ ಬದಲಾಯಿಸುತ್ತೇನೆ ಹೊರತು, ಒಟ್ಟಿಗೆ ಎರಡು ಕಾಲಿನ ಮೇಲೆ ನಿಂತಿಲ್ಲ. ಒಂದೇ ಕಾಲಿನಲ್ಲಿ ನಡೆದು ಎಲ್ಲಾ ಕಾರ್ಯ ನಡೆಸುತ್ತೇನೆ, ನಮ್ಮ ಸಮೀಪದ ಇತರೆ ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿಗಳು ನಮ್ಮ ಗ್ರಾಮದಲ್ಲಿ ಯಾಕೆ ಇಲ್ಲ. ನಮ್ಮ ಗ್ರಾಮದಲ್ಲಿ ಬೀದಿ ದೀಪ, ನೀರು ಇಲ್ಲದೇ ನಾವು ಬಳಲುತ್ತಿದ್ದೇವೆ ಎಂದಿದ್ದಾರೆ.

ಬಾಬಾ ಅವರ ಮತ್ತೊಂದು ಬೇಡಿಕೆ ಎಂದರೆ, ಅವರು ಸೇವೆ ಸಲ್ಲಿಸುತ್ತಿರುವ ದೇಗುಲವನ್ನು ಜೀರ್ಣೋದ್ಧಾರ ಮಾಡಬೇಕು. ಚುನಾವಣೆಗೆ ಮುನ್ನ ಅನೇಕ ನಾಯಕರು ಬಂದರು, ದೇಗುಲವನ್ನು ಪುನರ್​ನವೀಕರಣ ಮಾಡುವ ಭರವಸೆ ನೀಡಿದರು. ಅದರಲ್ಲಿ ಶಾಸಕ ಪ್ರೆಮ್​ಪಾಲ್​ ದಾಂಗ್ರೆ ಕೂಡ ಒಬ್ಬರು. ಆದರೆ, ಇದುವರೆಗೆ ಯಾವುದೇ ನವೀಕರಣ ಕಾರ್ಯ ನಡೆದಿಲ್ಲ. ನನ್ನ ಬೇಡಿಕೆ ಪೂರ್ಣಗೊಳ್ಳುವವರೆಗೆ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದಿದ್ದಾರೆ ಹಠಯೋಗಿ ಬಾಬಾ.

ಇದನ್ನೂ ಓದಿ: ದೇಶಸೇವೆಗೆ ಜೀವನ ಮುಡುಪಾಗಿಸಿದ ಗ್ರಾಮಸ್ಥರು; ಈ ಊರಲ್ಲಿದ್ದಾರೆ 3000ಕ್ಕೂ ಹೆಚ್ಚು ಯೋಧರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.