ಡೆಹ್ರಾಡೂನ್ (ಉತ್ತರಾಖಂಡ): ಹಲ್ದ್ವಾನಿಯಲ್ಲಿ ನಡೆದ ಪ್ರತಿಭಟನೆಯ ಪ್ರಮುಖ ಆರೋಪಿ ಅಬ್ದುಲ್ ಮಲಿಕ್ಗೆ 2.44 ಕೋಟಿ ರೂಪಾಯಿ ನಷ್ಟ ಭರಿಸುವಂತೆ ಮುನ್ಸಿಪಲ್ ಕಾರ್ಪೊರೇಷನ್ ಸೋಮವಾರ ನೋಟಿಸ್ ಜಾರಿ ಮಾಡಿದೆ. ಹಾನಿ ಭರಿಸಲು ಹಣವನ್ನು ಠೇವಣಿ ಮಾಡುವಂತೆ ಅಬ್ದುಲ್ ಮಲಿಕ್ರನ್ನು ಕೇಳಿದೆ. ಹಲ್ದ್ವಾನಿಯಲ್ಲಿ ನಡೆದ ಘರ್ಷಣೆ ಸಮಯದಲ್ಲಿ ಸರ್ಕಾರಿ ಆಸ್ತಿಗೆ ನಷ್ಟ ಉಂಟಾಗಿತ್ತು.
ಮಲಿಕ್‌ನಿಂದ ಉಂಟಾದ ನಷ್ಟದ ಆರಂಭಿಕ ಮೌಲ್ಯಮಾಪನ ಮಾಡಿರುವ ಮುನ್ಸಿಪಲ್ ಕಾರ್ಪೊರೇಷನ್ 2.44 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಿದೆ. ಈ ಮೊತ್ತವನ್ನು ಫೆಬ್ರವರಿ 15 ರೊಳಗೆ ಹಲ್ದ್ವಾನಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಠೇವಣಿ ಮಾಡುವಂತೆ ಕಾರ್ಪೊರೇಷನ್ ತಿಳಿಸಿದೆ. ‘ಮಲಿಕ್ ಕಾ ಬಗೀಚಾ’ದಲ್ಲಿ ಧ್ವಂಸ ಕಾರ್ಯ ನಡೆಸಲು ತೆರಳಿದ್ದ ತಂಡದ ಮೇಲೆ ಮಲಿಕ್ ಬೆಂಬಲಿಗರು ದಾಳಿ ನಡೆಸಿ ಮುನ್ಸಿಪಲ್ ಕಾರ್ಪೊರೇಷನ್ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ ಎಂದು ಅಧಿಕಾರಿಗಳು ನೋಟಿಸ್ ನಲ್ಲಿ ಹೇಳಿದ್ದಾರೆ.
ಫೆಬ್ರವರಿ 8 ರಂದು ಘಟನೆ ನಡೆದ ದಿನದಂದು ಮಲಿಕ್ ಹೆಸರಿಸಲಾದ ಎಫ್‌ಐಆರ್ ಅನ್ನು ಸಹ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ನಜೂಲ್ ನಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಗಳ ಹಿಂದೆ ಹಿಂದೆ ಮಲಿಕ್ ಇದ್ದು, ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಮತ್ತು ಮುನ್ಸಿಪಲ್ ಕಾರ್ಪೊರೇಷನ್‌ನ ಸಿಬ್ಬಂದಿ ಮೇಲೆ ದಾಳಿ ಮಾಡುವ ಮೂಲಕ, ನಿಮ್ಮ ಬೆಂಬಲಿಗರು ಮುನ್ಸಿಪಲ್ ಕಾರ್ಪೊರೇಷನ್‌ನ ಆಸ್ತಿಗಳನ್ನು ಹಾನಿಗೊಳಿಸಿದ್ದಾರೆ. ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ, ಪೂರ್ವ ಯೋಜನೆ ಮಾಡಿಕೊಂಡಂತೆ, ನೀವು ಸುಮಾರು 2.44 ಕೋಟಿ ರೂಪಾಯಿಗಳ ನಷ್ಟವನ್ನು ಉಂಟುಮಾಡಿದ್ದೀರಿ. ಫೆಬ್ರವರಿ 15 ರೊಳಗೆ ಮುನ್ಸಿಪಲ್ ಕಾರ್ಪೊರೇಷನ್ ಗೆ ದಂಡ ಪಾವತಿಸುವಂತೆ ಹಲ್ದ್ವಾನಿ ಮುನ್ಸಿಪಲ್ ಕಾರ್ಪೊರೇಷನ್ ಮಲಿಕ್ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ಹೇಳಿದೆ.
ನೈನಿತಾಲ್‌ನ ಹಲ್ದ್ವಾನಿ ನಗರದಲ್ಲಿ ಗುರುವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 30 ಮಂದಿಯನ್ನು ಬಂಧಿಸಲಾಗಿದೆ. ಘರ್ಷಣೆ ಮತ್ತು ಹಿಂಸಾಚಾರದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದರು. ಬಂಧಿತರಿಂದ ದೇಶೀಯ ನಿರ್ಮಿತ ಆಯುಧಗಳು ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆಯಾಗಿ ಪೊಲೀಸರು ಹಲ್ದ್ವಾನಿಯಲ್ಲಿ ಭಾರಿ ಭದ್ರತೆ ಕೈಗೊಂಡಿದ್ದರು. ಕೆಲ ಸಮಯ ಶಾಲಾ- ಕಾಲೇಜುಗಳಿಗೆ ರಜೆ ಕೂಡಾ ನೀಡಲಾಗಿತ್ತು. ಈಗ ಇಲ್ಲಿ ಶಾಂತಿ ನೆಲೆಸಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳಿದೆ.
ಇದನ್ನು ಓದಿ:ದೆಹಲಿ ಚಲೋ ಚಳವಳಿ: ಇಂದಿನಿಂದ ತಿಂಗಳವರೆಗೆ ದೆಹಲಿಯಲ್ಲಿ 144 ಸೆಕ್ಷನ್ ಜಾರಿ