ETV Bharat / bharat

ರಸ್ತೆ ಬದಿ ನಿಲ್ಲಿಸಿದ ನಿರುಪಯುಕ್ತ ವಾಹನಗಳ ಜಪ್ತಿ: ಸರ್ಕಾರದ ಎಚ್ಚರಿಕೆ - Seizure Of Unused Vehicles - SEIZURE OF UNUSED VEHICLES

ನಾಗರಿಕರು ತಮ್ಮ ಹಳೆಯ, ನಿರುಪಯುಕ್ತ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿದರೆ ಅಂಥ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ದಿಲ್ಲಿ ಸರ್ಕಾರ ಎಚ್ಚರಿಕೆ ನೀಡಿದೆ.

ದೆಹಲಿಯಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್
ದೆಹಲಿಯಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ (IANS (ಸಾಂದರ್ಭಿಕ ಚಿತ್ರ))
author img

By PTI

Published : Jun 20, 2024, 6:24 PM IST

ನವದೆಹಲಿ: ನಾಗರಿಕರು ತಮ್ಮ ನಿರುಪಯುಕ್ತ ವಾಹನಗಳನ್ನು ತಮ್ಮ ಖಾಸಗಿ ಜಾಗದಲ್ಲಿ ನಿಲ್ಲಿಸಿಕೊಳ್ಳಬೇಕು ಅಥವಾ ಅವನ್ನು ಗುಜರಿಗೆ ಹಾಕಬೇಕೆಂದು ದಿಲ್ಲಿ ಸರ್ಕಾರ ಗುರುವಾರ ಸಾರ್ವಜನಿಕ ನೋಟಿಸ್ ಹೊರಡಿಸಿದೆ. ಈ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಲಾಗುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಹಿಂದೆ ಫೆಬ್ರವರಿಯಲ್ಲಿ ಹೊರಡಿಸಲಾದ ನೋಟಿಸ್​ನಲ್ಲಿನ ಮಾರ್ಗಸೂಚಿಗಳನ್ನು ಪುನರುಚ್ಚರಿಸಿರುವ ಸಾರಿಗೆ ಇಲಾಖೆ, ಸಾರ್ವಜನಿಕ ಪ್ರದೇಶಗಳೆಂದು ಪರಿಗಣಿಸಲಾಗಿರುವ ಸ್ಥಳಗಳು ಅಂದರೆ, ಮನೆಯ ಮುಂದಿನ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಸಂಪೂರ್ಣ ನಿಷೇಧವಿದೆ ಎಂದು ಹೇಳಿದೆ.

ದೆಹಲಿ ಸರ್ಕಾರವು 5.5 ಮಿಲಿಯನ್ ಹಳೆಯ ವಾಹನಗಳ ನೋಂದಣಿಯನ್ನು ರದ್ದುಗೊಳಿಸಿದೆ ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. ನೋಂದಣಿ ರದ್ದಾದ ಇಂಥ ವಾಹನಗಳ ಮಾಲೀಕರು ವಾಹನದ ನೋಂದಣಿ ರದ್ದಾದ ಒಂದು ವರ್ಷದೊಳಗೆ ವಾಹನವನ್ನು ದೆಹಲಿಯಿಂದ ಹೊರಗೆ ಸಾಗಿಸಲು ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (ಎನ್ಒಸಿ) ಪಡೆಯಬಹುದು ಹಾಗೂ ಅವಧಿ ಮುಗಿದ ಒಂದು ವರ್ಷದ ನಂತರ ವಾಹನಕ್ಕೆ ಯಾವುದೇ ಎನ್ಒಸಿ ನೀಡಲಾಗುವುದಿಲ್ಲ ಎಂದು ಅದು ಹೇಳಿದೆ.

ಇದಲ್ಲದೆ ನಿರುಪಯುಕ್ತ ವಾಹನಗಳ ಮಾಲೀಕರು ಹತ್ತಿರದ ಯಾವುದೇ ನೋಂದಾಯಿತ ವಾಹನ ಗುಜರಿ ಕೇಂದ್ರದಲ್ಲಿ 'https://vscrap.parivahan.gov.in/' ನಲ್ಲಿ ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ಅಪ್ಲಿಕೇಶನ್ ಮೂಲಕ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಆಯ್ಕೆಯನ್ನು ಕೂಡ ಆಯ್ದುಕೊಳ್ಳಬಹುದು.

ಸಾರಿಗೆ ಇಲಾಖೆ, ನವದೆಹಲಿ ಮುನ್ಸಿಪಲ್ ಕೌನ್ಸಿಲ್, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಸಂಚಾರ ಪೊಲೀಸರ ಜಾರಿ ವಿಭಾಗವು ಎನ್ಒಸಿ ನೀಡಿದ್ದರೂ, ಎನ್ಒಸಿ ನೀಡಿದ ಒಂದು ತಿಂಗಳೊಳಗೆ ವಾಹನವನ್ನು ದೆಹಲಿಯಿಂದ ಸ್ಥಳಾಂತರಿಸದಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿರುವ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.

'ಎಂಡ್ ಆಫ್ ಲೈಫ್ ವೆಹಿಕಲ್ಸ್ ನಿರ್ವಹಣೆ ಮಾರ್ಗಸೂಚಿಗಳು 2024' ರ ಪ್ರಕಾರ ಇಂಥ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವವರನ್ನು ವಿಚಾರಣೆಗೆ ಒಳಪಡಿಸಬಹುದು. 2018 ರಲ್ಲಿ ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಕ್ರಮವಾಗಿ 10 ಮತ್ತು 15 ವರ್ಷಕ್ಕಿಂತ ಹಳೆಯದಾದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ನಿಷೇಧಿಸಿದೆ. ಈ ಆದೇಶವನ್ನು ಉಲ್ಲಂಘಿಸಿ ಚಲಿಸುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅದು ಹೇಳಿದೆ. ಇನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ 2014 ರ ಆದೇಶವು 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುವುದನ್ನು ನಿಷೇಧಿಸುತ್ತದೆ.

ಇದನ್ನೂ ಓದಿ: ಶೇ 65ರಷ್ಟು ಮೀಸಲಾತಿ ನೀಡುವ ಕಾನೂನು ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್ - 65 percent reservation canceled

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.