ETV Bharat / bharat

ಹೇಮಾ ವರದಿಯ ಎಡಿಟ್​ ಮಾಡದ ಪ್ರತಿ ನೀಡಿ: ಕೇರಳ ಸರ್ಕಾರಕ್ಕೆ ಮಹಿಳಾ ಆಯೋಗದ ಸೂಚನೆ - Hema Committee Report - HEMA COMMITTEE REPORT

ಹೇಮಾ ಸಮಿತಿಯ ವರದಿಯನ್ನು ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಕೇರಳ ಸರ್ಕಾರಕ್ಕೆ ಸೂಚಿಸಿದೆ.

ರಾಷ್ಟ್ರೀಯ ಮಹಿಳಾ ಆಯೋಗ
ರಾಷ್ಟ್ರೀಯ ಮಹಿಳಾ ಆಯೋಗ (IANS)
author img

By ETV Bharat Karnataka Team

Published : Aug 30, 2024, 7:38 PM IST

ತಿರುವನಂತಪುರಂ: ಸ್ಫೋಟಕ ಹೇಮಾ ಸಮಿತಿಯ ವರದಿಯ ಎಡಿಟ್ ಮಾಡದ ಆವೃತ್ತಿಯನ್ನು ಒಂದು ವಾರದೊಳಗೆ ತನಗೆ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್​ಸಿಡಬ್ಲ್ಯೂ) ವು ಕೇರಳ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ಕಳೆದು 5 ವರ್ಷಗಳ ಕಾಲ ವರದಿಯನ್ನು ಮುಚ್ಚಿಟ್ಟಿದ್ದಕ್ಕಾಗಿ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಐ-ಎಂ ಸರಕಾರದ ವಿರುದ್ಧ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿರುವುದು ಗಮನಾರ್ಹ.

ಕಳೆದ ವಾರ ವರದಿ ಬಿಡುಗಡೆಯಾದ ನಂತರ ಬಹಿರಂಗವಾದ ಲೈಂಗಿಕ ಶೋಷಣೆಯ ವರದಿಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಕೋಲಾಹಲ ಉಂಟಾಗಿದೆ. ನಟ ಮುಖೇಶ್ ಮಾಧವನ್, ಸಿದ್ದಿಕ್, ಜಯಸೂರ್ಯ, ಎಡವೇಲಾ ಬಾಬು, ಮಣಿಯನ್ ಪಿಳ್ಳ ರಾಜು, ನಿರ್ದೇಶಕರಾದ ರಂಜಿತ್, ವಿ.ಕೆ.ಪ್ರಕಾಶ್, ಪ್ರೊಡಕ್ಷನ್ ಎಕ್ಸಿಕ್ಯೂಟಿವ್​ಗಳಾದ ವಿಚು ಮತ್ತು ನೋಬಲ್ ಸೇರಿದಂತೆ ಒಂಬತ್ತು ಚಲನಚಿತ್ರ ಉದ್ಯಮದ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಬಿಜೆಪಿ ಮುಖಂಡ ಸಂದೀಪ್ ವಾಚಸ್ಪತಿ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನೀಡಿದ ದೂರಿನ ಆಧಾರದ ಮೇಲೆ ಮಹಿಳಾ ಆಯೋಗವು ರಾಜ್ಯದಿಂದ ವರದಿ ಕೇಳಿದೆ.

2017 ರಲ್ಲಿ ಹೇಮಾ ಸಮಿತಿಯನ್ನು ರಚಿಸಲಾಗಿತ್ತು. ಸರ್ಕಾರದ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ವರದಿಯನ್ನು 2019ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ 5 ವರ್ಷಗಳ ಕಾಲ ಸುದೀರ್ಘ ಅವಧಿಯವರೆಗೆ ಈ ವರದಿಯನ್ನು ಮುಚ್ಚಿಟ್ಟಿದ್ದಕ್ಕಾಗಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸುದೀರ್ಘ ಕಾನೂನು ಹೋರಾಟದ ನಂತರ, ಅಂತಿಮವಾಗಿ ವರದಿಯನ್ನು ಪ್ರಕಟಿಸಲಾಗಿದೆ. ವರದಿ ಬಿಡುಗಡೆಯಾಗುವ ಸಮಯದಲ್ಲಿ ಅದರಲ್ಲಿನ 21 ಪ್ಯಾರಾಗಳನ್ನು ಸೆನ್ಸಾರ್​ ಮಾಡುವಂತೆ ಮುಖ್ಯ ಮಾಹಿತಿ ಆಯುಕ್ತರು ಸೂಚಿಸಿದ ನಂತರ ಸರ್ಕಾರ ಮತ್ತೆ ಸಂಶಯದ ಸುಳಿಗೆ ಸಿಲುಕಿತ್ತು. ಆದರೆ ಕೆಲ ಪ್ರಮುಖ ವ್ಯಕ್ತಿಗಳನ್ನು ರಕ್ಷಿಸುವ ಸಲುವಾಗಿ ವರದಿಯ 121 ಪ್ಯಾರಾಗಳನ್ನು ಅಳಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

289 ಪುಟಗಳ ಹೇಮಾ ಸಮಿತಿಯ ವರದಿಯ ಆರಂಭದಲ್ಲಿ ಮಲಯಾಳಂ ಚಲನಚಿತ್ರೋದ್ಯಮ ಹೇಗಿದೆ ಎಂಬ ಸ್ಥೂಲ ಚಿತ್ರಣವನ್ನು ನೀಡಲಾಗಿದೆ. "ಮಿನುಗುವ ನಕ್ಷತ್ರಗಳು ಮತ್ತು ಸುಂದರವಾದ ಚಂದ್ರನೊಂದಿಗೆ ಆಕಾಶವು ರಹಸ್ಯಗಳಿಂದ ತುಂಬಿದೆ; ಆದರೆ ನಕ್ಷತ್ರಗಳು ಮಿನುಗುವುದಿಲ್ಲ ಅಥವಾ ಚಂದ್ರನು ಸುಂದರವಾಗಿ ಕಾಣುವುದಿಲ್ಲ ಎಂಬುದು ವೈಜ್ಞಾನಿಕ ತನಿಖೆಗಳಿಂದ ಬಹಿರಂಗವಾಗಿದೆ. ಹೀಗಾಗಿ ನಿಮಗೆ ಕಾಣುವುದನ್ನೇ ನೀವು ನಂಬಬೇಡಿ. ಉಪ್ಪು ಸಹ ಸಕ್ಕರೆಯಂತೆ ಕಾಣುತ್ತದೆ" ಎಂದು ವರದಿಯ ಆರಂಭಿಕ ಪುಟದಲ್ಲಿ ಹೇಳಲಾಗಿದೆ.

"ಲೈಂಗಿಕ ಕಿರುಕುಳವು ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಇದು ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಅತ್ಯಂತ ಕೆಟ್ಟ ಕೃತ್ಯವಾಗಿದೆ. ಸಿನಿಮಾ ರಂಗದಲ್ಲಿ ತುಂಬಾ ಧೈರ್ಯಶಾಲಿ ಎಂದು ಕಂಡು ಬರುವ ಬಹುತೇಕ ಮಹಿಳೆಯರು ಕೂಡ ತಮ್ಮ ಕೆಟ್ಟ ಅನುಭವಗಳನ್ನು, ವಿಶೇಷವಾಗಿ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗಪಡಿಸಲು ಹಿಂಜರಿಯುತ್ತಾರೆ. ಅವರು ಅದನ್ನು ಸಿನೆಮಾದಲ್ಲಿನ ತಮ್ಮ ಸಹೋದ್ಯೋಗಿಗಳ ಮುಂದೆ ಹೇಳಲು ಸಹ ಹೆದರುತ್ತಾರೆ. ಅವರು ತಮ್ಮ ಸಮಸ್ಯೆಗಳನ್ನು ಬಹಿರಂಗಪಡಿಸಿದರೆ, ಅವರನ್ನು ಸಿನೆಮಾ ರಂಗದಿಂದ ನಿಷೇಧಿಸಲಾಗುತ್ತದೆ ಮತ್ತು ಕಿರುಕುಳಕ್ಕೆ ಒಳಗಾಗುತ್ತಾರೆ. ದೌರ್ಜನ್ಯ ಎಸಗುವ ವ್ಯಕ್ತಿಗಳು ಪ್ರಬಲರಾಗಿದ್ದಾರೆ ಮತ್ತು ಸಿನೆಮಾದಲ್ಲಿನ ಎಲ್ಲಾ ಪುರುಷರು ಅವರೊಂದಿಗೆ ಒಟ್ಟಾಗಿ ನಿಲ್ಲುತ್ತಾರೆ ಎಂದು ಅವರು ಹೆದರುತ್ತಾರೆ. ಅಭಿಮಾನಿಗಳು ಮತ್ತು ಅಭಿಮಾನಿ ಸಂಘಗಳನ್ನು ಬಳಸುವ ಮೂಲಕ, ಸಾಮಾಜಿಕ ಮಾಧ್ಯಮದಲ್ಲಿ ಕಿರುಕುಳಕ್ಕೊಳಗಾದ ಮಹಿಳೆಯರ ವಿರುದ್ಧ ಆನ್​ಲೈನ್​ನಲ್ಲಿ ಮತ್ತೆ ಕಿರುಕುಳ ನೀಡಲಾಗುತ್ತದೆ. ಅವರು ತಾವು ಮಾತ್ರವಲ್ಲದೆ ಅವರ ಹತ್ತಿರದ ಕುಟುಂಬ ಸದಸ್ಯರೂ ಜೀವ ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ; ಇದನ್ನು ವಿವಿಧ ಸಾಕ್ಷಿಗಳು ಹೇಳಿದ್ದಾರೆ." ಎಂದು ಹೇಮಾ ವರದಿ ಹೇಳಿದೆ.

ಇದನ್ನೂ ಓದಿ : ಕೇರಳದಲ್ಲಿ ಆ.31ರಿಂದ ಆರ್​ಎಸ್​ಎಸ್​ ಸಮನ್ವಯ ಬೈಠಕ್: ಶತಮಾನೋತ್ಸವ ಆಚರಣೆಯ ಕುರಿತು ಚರ್ಚೆ - RSS samanvay baithak

ETV Bharat Logo

Copyright © 2025 Ushodaya Enterprises Pvt. Ltd., All Rights Reserved.