ಬಕ್ಸರ್(ಬಿಹಾರ): ಗುಡ್ಡ ಕುಸಿದು ಇಬ್ಬರು ಸಹೋದರಿಯರು ಸೇರಿದಂತೆ ನಾಲ್ವರು ಹುಡುಗಿಯರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಸಂಭವಿಸಿತು.
ರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸರೇಂಜ ಗ್ರಾಮದಲ್ಲಿ ಆರು ಹುಡುಗಿಯರು ಮಣ್ಣಿನ ಒಲೆ ನಿರ್ಮಿಸಲು ಮಣ್ಣು ಅಗೆಯುತ್ತಿದ್ದಾಗ ಘಟನೆ ನಡೆದಿದೆ. ಮೃತರನ್ನು ಶಿವಾನಿ ಕುಮಾರಿ (6), ಸಂಜು ಕುಮಾರಿ (11), ನೈಂತರಾ ಕುಮಾರಿ (12) ಮತ್ತು ಸರಿತಾ ಕುಮಾರಿ (11) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಓರ್ವ ಬಾಲಕಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಇದು ಅತ್ಯಂತ ದುರಂತ ಘಟನೆ. ಮೃತ ಬಾಲಕಿಯರ ಕುಟುಂಬಕ್ಕೆ ತಕ್ಷಣ ತಲಾ 20,000 ರೂ. ಆರ್ಥಿಕ ನೆರವು ನೀಡಲಾಗುವುದು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳಿಂದ ತಲಾ 4 ಲಕ್ಷ ರೂ.ಗಳ ಪರಿಹಾರವನ್ನೂ ಸಹ ನೀಡಲಾಗುವುದು" ಎಂದು ಎಸ್ಪಿ ಶುಭಂ ಆರ್ಯ ಹೇಳಿದರು.
ಇದನ್ನೂ ಓದಿ: ಭೀಕರ ಅಪಘಾತ: ಬಳ್ಳಾರಿಯ ಇಬ್ಬರು ವೈದ್ಯರು, ಓರ್ವ ವಕೀಲ ಸಾವು