ETV Bharat / bharat

18ನೇ ಲೋಕಸಭೆಯ ಮೊದಲ ಅಧಿವೇಶನ ಜೂ.24ಕ್ಕೆ ಆರಂಭ: ಸಚಿವ ಕಿರಣ್ ರಿಜಿಜು - 18th Lok Sabha First session - 18TH LOK SABHA FIRST SESSION

''18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಂದು ಆರಂಭವಾಗಲಿದೆ'' ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

18th Lok Sabha First session  Minister Kiren Rijiju  Parliamentary Affairs Minister  First session June 24
ಲೋಕಸಭೆಯ ಮೊದಲ ಅಧಿವೇಶನ - ಸಂಗ್ರಹ ಚಿತ್ರ (ETV Bharat)
author img

By PTI

Published : Jun 12, 2024, 10:54 AM IST

ನವದೆಹಲಿ: 18ನೇ ಲೋಕಸಭೆ ಚುನಾವಣೆ ನಡೆದು, ಎನ್​ಡಿಎ ಸರ್ಕಾರ ರಚನೆಯಾದ ಬಳಿಕ ಜೂನ್ 24ರಂದು ಮೊದಲ ಮುಂಗಾರು ಅಧಿವೇಶನ ಆರಂಭವಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದರು.

18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24ರಂದು ಪ್ರಾರಂಭವಾಗಲಿದೆ. ಸಂಸತ್ತಿನ ಕೆಳಮನೆಗೆ ಹೊಸದಾಗಿ ಚುನಾಯಿತರಾಗಿರುವ ಸದಸ್ಯರು ಮೊದಲ ಎರಡು ದಿನಗಳಲ್ಲಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

ಏಳನೇ ಬಾರಿಗೆ ಮರು ಆಯ್ಕೆಯಾಗಿರುವ ಮಾಜಿ ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ಶಾಸಕ ರಾಧಾ ಮೋಹನ್ ಸಿಂಗ್ ಅವರು ಅಧಿವೇಶನದ ಮೂರನೇ ದಿನದಂದು ಹಂಗಾಮಿ ಸ್ಪೀಕರ್ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ರಾಷ್ಟ್ರಪತಿಗಳು ಜೂನ್ 27ರಂದು ಸದನವನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಜುಲೈ 3 ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸುವ ಸಾಧ್ಯತೆ ಕೂಡ ಇದೆ. ಜುಲೈ 22 ರಂದು ಪೂರ್ಣ ಪ್ರಮಾಣದ ಕೇಂದ್ರದ ಬಜೆಟ್ ಮಂಡನೆಯಾಗುವ ನಿರೀಕ್ಷೆಯಿದೆ. ಫೆಬ್ರವರಿ 1ರಂದು ಬೇಸಿಗೆಯಲ್ಲಿ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಧ್ಯಂತರ ಬಜೆಟ್ ಅನ್ನು ಮಂಡಿಸಲಾಗಿತ್ತು.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಿಂದ 'ಮೋದಿ ಕಾ ಪರಿವಾರ್'​ ತೆಗೆದು ಹಾಕುವಂತೆ ಪ್ರಧಾನಿ ಮನವಿ - Modi ka Parivar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.