ಅಟ್ಲೂರು. ಆಂಧ್ರಪ್ರದೇಶ: ವೈಎಸ್ ಆರ್ ಜಿಲ್ಲೆ ಅಟ್ಲೂರು ಮಂಡಲದ ಕೊರಿವಿ ವಂಡ್ಲ ಪಲ್ಲೆ ಮಿತ್ತದ ರೈತ ಸೊಂಟೆ ಗಂಗಿರೆಡ್ಡಿ ಮೇಕೆ ಮೇಯಿಸಲು ಕಾಡಿಗೆ ತೆರಳಿದ್ದರು. ಆದರೆ ಅವರು ಮೇಕೆ ಸಮೇತ ನಾಪತ್ತೆಯಾಗಿದ್ದಾರೆ. ಇದು ಗ್ರಾಮಸ್ಥರು ಹಾಗೂ ಕುಟುಂಬಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸೊಂಟೆ ಗಂಗಿರೆಡ್ಡಿ ಎಂದಿನಂತೆ ಸೋಮವಾರ ಬೆಳಗ್ಗೆಯೇ ಮೇಕೆ ಮೇಯಿಸಲು ಸಮೀಪದ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಸಂಜೆಯಾದರೂ ಮನೆಗೆ ಹಿಂತಿರುಗದ ಕಾರಣ ಆತಂಕಗೊಂಡ ಮನೆಯವರು ಗ್ರಾಮಸ್ಥರೊಂದಿಗೆ ಇಂದು ಬೆಳಗಿನ ಜಾವ ಎರಡರವರೆಗೂ ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ. ರೈತ ಪತ್ತೆಯಾಗದ ಹಿನ್ನೆಲೆಯಲ್ಲಿ 70 ಮಂದಿ ಸೇರಿಕೊಂಡು ಮಂಗಳವಾರ ಬೆಳಗ್ಗೆ ಟ್ರ್ಯಾಕ್ಟರ್‌ನಲ್ಲಿ ಅರಣ್ಯಕ್ಕೆ ತೆರಳಿ ಹುಡುಕಾಟ ನಡೆಸಿದ್ದಾರೆ. ಆದರೆ, ಅವರು ಪತ್ತೆಯಾಗದ ಕಾರಣ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಯಾವುದಾದರೂ ಕಾಡುಪ್ರಾಣಿಯಿಂದ ಅವಘಡ ಸಂಭವಿಸಿರಬಹುದು ಅಥವಾ ಕಳ್ಳರು ಮೇಕೆಗಳಿಗೆ ಏನಾದರೂ ಹಾನಿ ಮಾಡುವ ಉದ್ದೇಶ ಹೊಂದಿರಬಹುದು ಎಂದು ಶಂಕಿಸಲಾಗಿದೆ.
ಗಂಗಿರೆಡ್ಡಿ ಅವರಿಗೆ ಪತ್ನಿ ಓಬುಳಮ್ಮ ಮತ್ತು ಪುತ್ರ ಸುದರ್ಶನ ರೆಡ್ಡಿ ಇದ್ದಾರೆ. ಸುದರ್ಶನ್ ರೆಡ್ಡಿ ಸಿಎ ಮುಗಿಸಿ ಹೈದರಾಬಾದ್‌ನಲ್ಲಿ ಖಾಸಗಿ ಉದ್ಯೋಗದಲ್ಲಿದ್ದಾರೆ. ತಂದೆ ನಾಪತ್ತೆ ಆಗಿರುವ ವಿಚಾರ ತಿಳಿದ ನಂತರ ಅವರು ತಮ್ಮ ಊರಿಗೆ ದೌಡಾಯಿಸಿದ್ದು, ತಂದೆಯನ್ನು ಹುಡುಕುತ್ತಿದ್ದಾರೆ. ಪೊಲೀಸರು ಮುತುವರ್ಜಿ ವಹಿಸಿ ರೈತ ಗಂಗಿರೆಡ್ಡಿ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಂತೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
ಸೈಬರ್ ಕ್ರೈಂ ತಡೆ: ನಟಿ ರಶ್ಮಿಕಾ ಮಂದಣ್ಣ ರಾಷ್ಟ್ರೀಯ ರಾಯಭಾರಿ