ETV Bharat / bharat

ಸಿಗ್ನಲ್​ ಜಂಪ್​ ಮಾಡಿ, ಆಟೋಗೆ ಗುದ್ದಿದ ಬಿಎಂಡಬ್ಲ್ಯೂ ಕಾರ್​: ಒಬ್ಬರ ಸಾವು, ಮಗು ಸ್ಥಿತಿ ಗಂಭೀರ - BMW car hits auto in central Delhi

author img

By PTI

Published : 2 hours ago

ಬಿಎಂಡಬ್ಲ್ಯೂ ಕಾರ್​ ವೊಂದು ಸಿಗ್ನಲ್​ ಜಂಪ್​ ಮಾಡಿದ್ದಲ್ಲದೇ ಆಟೋ ರಿಕ್ಷಾಗೆ ಗುದ್ದಿದ್ದು 63 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, 8 ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದೆ.

elderly-man-dead-4-injured-after-bmw-car-hits-auto-in-central-delhi
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)

ನವದೆಹಲಿ: ಇಲ್ಲಿನ ತಿಲಕ್​ ಮಾರ್ಗ್​​ನಲ್ಲಿ ಐಷರಾಮಿ ಬಿಎಂಡಬ್ಲ್ಯೂ ಕಾರ್​ ಸಿಗ್ನಲ್​ ಜಂಪ್​ ಮಾಡಿ ವೇಗವಾಗಿ ಸಾಗಿ ಆಟೋಗೆ ಗುದ್ದಿದ ಪರಿಣಾಮ 63 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಸೆಪ್ಟೆಂಬರ್​ 12ರಂದು ಬೆಳಗ್ಗೆ 5ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನೀರಜ್ ಕುಮಾರ್ ತನ್ನ ತಂದೆ ಸಚ್ಚಿದಾನಂದ, ಪತ್ನಿ ಕುಮಾರಿ ಸಲ್ಮಾ, ಇಬ್ಬರು ಮಕ್ಕಳಾದ ಯಶರಾಜ್ ಮತ್ತು ಹಂಸರಾಜ್ ಅವರೊಂದಿಗೆ ನವದೆಹಲಿ ರೈಲ್ವೆ ನಿಲ್ದಾಣದಿಂದ ಆಟೋ ರಿಕ್ಷಾದಲ್ಲಿ ತಮ್ಮ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಆಟೋ ಸಿಕಂದ್ರ ಮತ್ತು ಮಥುರಾ ರೋಡ್​ ಸಿಗ್ನಲ್​ ಬಳಿ ಸಾಗುತ್ತಿದ್ದಾಗ, ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರ್​ ಆಟೋಗೆ ಗುದ್ದಿದೆ. ಈ ವೇಳೆ ಸಚ್ಚಿದಾನಂದ ಸ್ಥಳದಲ್ಲಿ ಸಾವನ್ನಪ್ಪಿದ್ದು, ಉಳಿದ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಿಎಂಡಬ್ಲ್ಯೂ ಕಾರ್​ ಚಾಲಕನ ವಿರುದ್ಧ ಸಿಗ್ನಲ್​ ಜಂಪ್​ ಮತ್ತು ಆಟೋ ರಿಕ್ಷಾಗೆ ಗುದ್ದಿದ ಕಾರಣಕ್ಕೆ ಎಫ್​ಐಆರ್​ ದಾಖಲಿಸಲಾಗಿದೆ. ಆಟೋದಲ್ಲಿದ್ದ ಎಲ್ಲ ಐದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆ ವೇಳೆ ಡ್ರೈವರ್​ ಪಾರಾಗಿದ್ದು, ಗಾಯಗೊಂಡಿಲ್ಲ. ಈ ಅಪಘಾತದ ಸಂಬಂಧ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಚ್ಚಿದಾನಂದ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ಅವರ ಮೊಮ್ಮಗ ಯಸ್ರಾಜ್ (8) ಗಂಭೀರವಾಗಿ ಗಾಯಗೊಂಡಿದ್ದು, ಎಲ್​ಎನ್​ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಎಂಡಬ್ಲ್ಯೂ ಕಾರ್​ ಹಿಮಾಚಲ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿದ್ದು, ಶೀಘ್ರದಲ್ಲೇ ಪತ್ತೆ ಮಾಡಿ, ಚಾಲಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಬಿಎನ್​ಎಸ್​ ಸೆಕ್ಷನ್ 281 (ವೇಗದ ಚಾಲನೆ) ಮತ್ತು 125 (ಎ) (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಅಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಗುಜರಾತ್​​: ರೈಲು ಹಳಿ ತಪ್ಪಿಸಲು ಮತ್ತೊಂದು ಸಂಚು, ತಪ್ಪಿದ ಅನಾಹುತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.