ETV Bharat / bharat

ವಾರದ ಹಿಂದಷ್ಟೇ ಮದುವೆಯಾದ ವ್ಯಕ್ತಿಯಿಂದ ಮಧ್ಯರಾತ್ರಿ 8 ಮಂದಿ ಸಂಬಂಧಿಕರ ಹತ್ಯೆ; ಮಧ್ಯಪ್ರದೇಶದಲ್ಲಿ ಭೀಕರ ನರಮೇಧ - Chhindwara Murder Case - CHHINDWARA MURDER CASE

ತನ್ನ ಕುಟುಂಬದ ಎಂಟು ಸದಸ್ಯರನ್ನು ಕೊಂದು ಹಾಕಿದ ಮನೆ ಮಗ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ರಾತ್ರಿ ಮಧ್ಯಪ್ರದೇಶದಲ್ಲಿ ನಡೆದಿದೆ.

ಸಾಮೂಹಿಕ ಹತ್ಯೆ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : May 29, 2024, 9:58 AM IST

Updated : May 29, 2024, 11:15 AM IST

ಮಧ್ಯಪ್ರದೇಶ: ರಾಜ್ಯದ ಛಿಂದ್​ವಾಡ ಎಂಬಲ್ಲಿ ಕಳೆದ ರಾತ್ರಿ ಭೀಕರ ಹತ್ಯಾಕಾಂಡ ನಡೆದಿದೆ. ತನ್ನ ಕುಟುಂಬದ 8 ಸದಸ್ಯರನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಮನೆಮಗ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಂತಕನಿಗೆ 8 ದಿನಗಳ ಹಿಂದಷ್ಟೇ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.

ಆರೋಪಿ ಸುಖನಿದ್ರೆಯಲ್ಲಿದ್ದ ತನ್ನ ಹೆಂಡತಿ, ತಾಯಿ (55), ಅಣ್ಣ(35), ತಂಗಿ (16), ಅತ್ತಿಗೆ (30) ಮಾತ್ರವಲ್ಲದೇ ಮಕ್ಕಳನ್ನೂ ಕೊಲೆಗೈದಿದ್ದಾನೆ. ಆ ಬಳಿಕ ಚಿಕ್ಕಪ್ಪನ ಮನೆಗೆ ತೆರಳಿ ಚಿಕ್ಕಪ್ಪನ 10 ವರ್ಷದ ಮಗನ ಮೇಲೂ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ತಪ್ಪಿಸಿಕೊಂಡ ಚಿಕ್ಕಪ್ಪನ ಮಗ ಊರಿನವರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾನೆ. ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.

"ಛಿಂದ್​ವಾಡದ ತಮಿಯಾ ಎಂಬಲ್ಲಿನ ಬೋದಲ್ ಕಚಾರ್ ಗ್ರಾಮದಲ್ಲಿ ಬುಡಕಟ್ಟು ಕುಟುಂಬದ ಎಂಟು ಜನರನ್ನು ವ್ಯಕ್ತಿಯೊಬ್ಬ ಕೊಡಲಿಯಿಂದ ಕೊಲೆಗೈದು, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ" ಎಂದು ಹೆಚ್ಚುವರಿ ಎಸ್ಪಿ ಅವಧೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.

"ಕೊಲೆ ಆರೋಪಿಗೆ ಮೇ 21ರಂದು ಮದುವೆಯಾಗಿತ್ತು. ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂಬ ಮಾಹಿತಿಯೂ ಇದೆ. ಈ ಕುರಿತು ವಿವರವಾದ ತನಿಖೆ ನಡೆಯುತ್ತಿದೆ" ಎಂದು ಎಸ್ಪಿ ಮನೀಶ್​ ಖತ್ರಿ ಹೇಳಿದರು.

ಇದನ್ನೂ ಓದಿ: ರಾಂಚಿಯ ಎಕ್ಸ್‌ಟ್ರೀಮ್ ಬಾರ್​ನಲ್ಲಿ ಭಯಾನಕ ಕೊಲೆ ಪ್ರಕರಣ: 14 ಆರೋಪಿಗಳ ಬಂಧನ - Extreme Bar crime

Last Updated : May 29, 2024, 11:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.