ETV Bharat / bharat

ಎನ್‌ಕೌಂಟರ್ ವೇಳೆ ಇನ್ಸ್​ಪೆಕ್ಟರ್ ಎದೆಗೆ ಗುಂಡಿಟ್ಟ ದುಷ್ಕರ್ಮಿಗಳು - ಮೀರತ್‌ನ ಕಂಕರಖೇಡ

ಮೀರತ್‌ನ ಕಂಕರ್‌ಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಕಾರು ಕದ್ದು ಓಡಿಹೋಗುತ್ತಿದ್ದ ಅಪರಾಧಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಇನ್ಸ್​ಪೆಕ್ಟರ್ ಎದೆಗೆ ಗುಂಡು ಹಾರಿಸಿದ್ದಾರೆ. ಸದ್ಯ ಗಾಯಗೊಂಡಿರುವ ಇನ್ಸ್ ಪೆಕ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೀರತ್‌
ಮೀರತ್‌
author img

By ETV Bharat Karnataka Team

Published : Jan 23, 2024, 4:31 PM IST

ಎ​ಸ್​ಪಿ ರೋಹಿತ್ ಸಿಂಗ್ ಸಜ್ವಾನ್

ಮೀರತ್ (ಉತ್ತರ ಪ್ರದೇಶ) : ಜಿಲ್ಲೆಯ ಕಂಕರಖೇಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ, ಕಾರು ಕದ್ದು ಓಡಿಹೋಗುತ್ತಿದ್ದ ದುಷ್ಕರ್ಮಿಗಳನ್ನು ಬೆನ್ನಟ್ಟುತ್ತಿದ್ದ ಸಬ್​ಇನ್ಸ್​ಪೆಕ್ಟರ್ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ. ಇನ್ಸ್​ಪೆಕ್ಟರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲಾಖೆಯ ವತಿಯಿಂದ ನಾಲ್ಕು ತಂಡಗಳನ್ನು ರಚಿಸಿ ಅಪರಾಧಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ.

ಜಿಪಿಎಸ್ ಸಹಾಯದಿಂದ ಕಾರು ತಲುಪಿದ ಪೊಲೀಸರು: ಪೊಲೀಸರ ಪ್ರಕಾರ, ಮೀರತ್‌ನ ಕಂಕರಖೇಡ ಬೈಪಾಸ್ ಪ್ರದೇಶದ ಮದುವೆ ಮಂಟಪದ ಹೊರಗೆ ನಿಲ್ಲಿಸಿದ್ದ ಕಾರನ್ನು ಕೆಲವು ದುಷ್ಕರ್ಮಿಗಳು ಕದ್ದಿದ್ದಾರೆ. ವಿಷಯದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಜಿಪಿಎಸ್ ಸಹಾಯದಿಂದ ಕಾರು ಇರುವ ಜಾಗವನ್ನು ತಲುಪಿದ್ದಾರೆ. ಆದರೆ, ಈ ವೇಳೆ ಕಾರಿನಲ್ಲಿದ್ದ ದುಷ್ಕರ್ಮಿಗಳನ್ನು ಹಿಡಿಯಲು ಮುಂದಾದ ಪೊಲೀಸ್ ಸಿಬ್ಬಂದಿ ತಂಡದ ಮೇಲೆ ಪ್ರತಿಯಾಗಿ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಇನ್ಸ್‌ಪೆಕ್ಟರ್‌ ಎದೆಗೆ ಗುಂಡು ತಗುಲಿದೆ. ಇಡೀ ಘಟನೆ ನಿನ್ನೆ ತಡರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಪೊಲೀಸರ ಪ್ರಕಾರ, ದುಷ್ಕರ್ಮಿಗಳೊಂದಿಗಿನ ಎನ್‌ಕೌಂಟರ್ ಸಂದರ್ಭದಲ್ಲಿ ಔಟ್‌ಪೋಸ್ಟ್ ಇನ್‌ಚಾರ್ಜ್ ಮುನೇಶ್ ಸಿಂಗ್ ಅವರ ಎದೆಗೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡು ತಗುಲಿದ ನಂತರ ಮುನೇಶ್ ಸಿಂಗ್ ಅಲ್ಲೇ ಕುಸಿದು ಬಿದ್ದಿದ್ದಾರೆ. ಆಗ ಇತರ ಸಿಬ್ಬಂದಿ ಗಾಯಾಳುವನ್ನು ಚಿಕಿತ್ಸೆಗಾಗಿ ಗಾಜಿಯಾಬಾದ್‌ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ಸ್​ಪೆಕ್ಟರ್ ಮುನೇಶ್ ಸಿಂಗ್ ಸ್ಥಿತಿ ಗಂಭೀರವಾಗಿದೆ. ಮುನೇಶ್ ಆಗ್ರಾದ ಚಿತ್ರಾ ಹತ್ ಜಿಲ್ಲೆಯ ಮಣಿಯಖೇಡ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಆಗಿದ್ದಾರೆ.

ಸಬ್ ಇನ್ಸ್​ಪೆಕ್ಟರ್ ಮುನೇಶ್ ಸ್ಥಿತಿ ಚಿಂತಾಜನಕ : ಸಬ್​ಇನ್ಸ್​ಪೆಕ್ಟರ್​ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಎ​ಸ್​ಪಿ ರೋಹಿತ್ ಸಿಂಗ್ ಸಜ್ವಾನ್ ಅವರು ತಿಳಿಸಿದ್ದಾರೆ. ಮುನೇಶ್ ಸಿಂಗ್ ಬಹುಕಾಲದಿಂದ ಮೀರತ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸದ್ಯ ಇನ್ಸ್​ಪೆಕ್ಟರ್ ಮುನೇಶ್ ಸಿಂಗ್ ಅವರ ಕುಟುಂಬ ಗಾಜಿಯಾಬಾದ್​ನಲ್ಲಿ ನೆಲೆಸಿದೆ.

ಈ ಘಟನೆಯಲ್ಲಿ ಮೂವರು ದುಷ್ಕರ್ಮಿಗಳು ಭಾಗಿಯಾಗಿದ್ದಾರೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಈಗಾಗಲೇ ಇನ್ಸ್​ಪೆಕ್ಟರ್ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿರುವ ದುಷ್ಕರ್ಮಿಗಳನ್ನು ಸೆರೆ ಹಿಡಿಯಲು ಇಲಾಖೆಯ ವತಿಯಿಂದ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಮಂಜಿನಿಂದಾಗಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೂವರು ದುಷ್ಕರ್ಮಿಗಳನ್ನು ಹಿಡಿಯಲು ಪೊಲೀಸರು ನಿರಂತರ ಪ್ರಯತ್ನ ಮುಂದುವರೆಸಿದ್ದಾರೆ ಎಂದು ಎಸ್​​ಪಿ ಇದೇ ವೇಳೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿ, ದುಷ್ಕರ್ಮಿಗಳು ಪರಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.