ETV Bharat / bharat

ಅಮೃತ್​ಸರದಲ್ಲಿ ತ್ರಿವಳಿ ಕೊಲೆ: ತಾಯಿ, ಅತ್ತಿಗೆ, ಮಗನನ್ನು ಕೊಂದ ಮಾದಕ ವ್ಯಸನಿ - Triple Murder - TRIPLE MURDER

ತನ್ನ ಡ್ರಗ್ಸ್​ ಚಟವನ್ನು ಬಿಡಿಸಲು ಯತ್ನಿಸಿದ್ದಕ್ಕೆ ಮನೆಯವರನ್ನು ಯುವಕ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.

Drug addict young man killed his mother, sister-in-law and son in amritsar
ಅಮೃತ್​ಸರದಲ್ಲಿ ತ್ರಿವಳಿ ಕೊಲೆ: ತಾಯಿ, ಅತ್ತಿಗೆ, ಮಗನನ್ನು ಕೊಂದ ಮಾದಕ ವ್ಯಸನಿ
author img

By ETV Bharat Karnataka Team

Published : Apr 4, 2024, 3:23 PM IST

ಅಮೃತಸರ (ಪಂಜಾಬ್​): ಮಾದಕ ವ್ಯಸನಿಯೊಬ್ಬ ತನ್ನ ತಾಯಿ, ಅತ್ತಿಗೆ ಹಾಗೂ ಎರಡೂವರೆ ವರ್ಷದ ಮಗನನ್ನು ಕೊಲೆ ಮಾಡಿರುವ ಘಟನೆ ಅಮೃತ್​ಸರದ ಅಜ್ನಾಲಾ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಮೂವರನ್ನು ಕೊಲೆ ಮಾಡಿದ ಬಳಿಕ ರಕ್ತ ಸಿಕ್ತ ಶವಗಳನ್ನು ಮನೆಯಲ್ಲೇ ಬಿಟ್ಟು ನೇರವಾಗಿ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಆರೋಪಿಯನ್ನು ಅಜ್ನಾಲಾದ ಕಾಂಡೋವಾಲಿಯಾ ಪಟ್ಟಣದ ನಿವಾಸಿ 35 ವರ್ಷದ ಅಮೃತಪಾಲ್​ ಸಿಂಗ್​ ಎಂದು ಗುರುತಿಸಲಾಗಿದೆ. ಮೃತರನ್ನು ತಾಯಿ ಮನ್ಬೀರ್​ ಕೌರ್​, ಅತ್ತಿಗೆ ಅವನೀತ್​ ಕೌರ್​ ಹಾಗೂ ಮಗ ಸಮರ್ಥ್​ ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಮಾಹಿತಿ ಪ್ರಕಾರ, ಆರೋಪಿಯು ತಡರಾತ್ರಿ ಕುಡಿದ ಅಮಲಿನಲ್ಲಿ ಮೊದಲು ತನ್ನ ತಾಯಿ, ಅತ್ತಿಗೆ ಹಾಗೂ ಮಗನಿಗೆ ಥಳಿಸಿದ್ದಾನೆ. ನಂತರ ಮೊಗಸಾಲೆಯಲ್ಲಿ ಹೊರಗೆ ಮಲಗಿದ್ದ ತಾಯಿಯನ್ನು ಹರಿತವಾದ ಆಯುಧದಿಂದ ಹತ್ಯೆ ಮಾಡಿದ್ದಾನೆ. ತಾಯಿ ಕಿರುಚಿದ ಶಬ್ಧ ಕೇಳಿ ಕೋಣೆಯಲ್ಲಿ ಮಲಗಿದ್ದ ಅತ್ತಿಗೆ ಅವನೀತ್​ ಕೌರ್​ ಹೊರಬಂದಿದ್ದಾರೆ. ಆಗ ಅತ್ತಿಗೆಯನ್ನೂ ಕೊಲೆ ಮಾಡಿದ್ದಾನೆ. ನಂತರ ಮಲಗಿದ್ದ ಮಗನನ್ನು ಹತ್ಯೆ ಮಾಡಿದ್ದಾನೆ.

ಆರೋಪಿ ಮಾದಕ ವ್ಯಸನಿಯಾಗಿದ್ದು, ಡ್ರಗ್ಸ್​ ಸೇವನೆ ಚಟಕ್ಕೆ ಬಿದ್ದಿದ್ದ. ಡ್ರಗ್ಸ್​ ಚಟದಿಂದ ಬಿಡಿಸಲು ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ಇದೇ ಕಾರಣಕ್ಕೆ ಮನೆಯವರನ್ನು ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಆರೋಪಿಯ ಸಹೋದರ ಪ್ರೀತ್ಪಾಲ್​ ಸಿಂಗ್​ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕ್ರಮ ಕೈಗೊಂಡಿದ್ದಾರೆ. ಆರೋಪಿ ಹತ್ಯೆಗೆ ಬಳಸಿದ್ದ ಆಯುದಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪ್ರೇಯಸಿ ಕತ್ತು ಸೀಳಿ ಹತ್ಯೆ ಮಾಡಿದ ಪ್ರಿಯಕರ‌ - Lover Murder

ETV Bharat Logo

Copyright © 2024 Ushodaya Enterprises Pvt. Ltd., All Rights Reserved.