ETV Bharat / bharat

ದೆಹಲಿಯಲ್ಲಿ ಇಬ್ಬರು ಮಕ್ಕಳ ಅಪಹರಣ: ಸಿನಿಮೀಯ ರೀತಿಯಲ್ಲಿ ಕಾರು ಚೇಸ್​ ಮಾಡಿ ಆರೋಪಿ ಹಿಡಿದ ಪೊಲೀಸರು - DELHI KIDNAP CASE

author img

By PTI

Published : Jun 29, 2024, 5:44 PM IST

ಆರೋಪಿ ಸೆರೆಗೆ 20 ವಾಹನಗಳ ಪೊಲೀಸರ ವಾಹನಗಳ ತಂಡ ಬೆನ್ನತ್ತಿದ್ದು, ದೆಹಲಿಯ ರಸ್ತೆಗಳಲ್ಲಿ 100 ಕಿ.ಮೀ ದೂರ ಚೇಸ್​ ಮಾಡಿದೆ.

delhi-police-rescues-kidnapped-siblings-after-three-hour-car-chase
ದೆಹಲಿ ಪೊಲೀಸ್​ (ಎಎನ್​ಐ)

ನವದೆಹಲಿ: ಇಬ್ಬರು ಮಕ್ಕಳನ್ನು ಅಪಹರಿಸಿದ ಅಪಹರಣಕಾರ ಸಿನಿಮೀಯ ರೀತಿಯಲ್ಲಿ ಮೂರು ಗಂಟೆಗಳ ಕಾಲ ಕಾರನ್ನು ಚೇಸ್​ ಮಾಡಿ, ಆರೋಪಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಶಕರ್​ಪುರ್​​ ಪ್ರದೇಶದಲ್ಲಿನ ವಿಕಾಸ್​ ಮಾರ್ಗ್​ನಲ್ಲಿ ಹೀರಾ ಸ್ಪೀಟ್​ ಶಾಪ್​ಗೆ​ ತಾಯಿ ತನ್ನ 3 ವರ್ಷದ ಮಗ ಮತ್ತು 11 ವರ್ಷದ ಮಗಳೊಂದಿಗೆ ಸಿಹಿತಿಂಡಿ ಖರೀದಿಗೆ ಹೋಗಿದ್ದರು. ಈ ವೇಳೆ ಪಾರ್ಕಿಂಗ್​ ಕೆಲಸಗಾರನ ಸೋಗಿನಲ್ಲಿ ಬಂದ ದುಷ್ಕರ್ಮಿ ಇಬ್ಬರು ಮಕ್ಕಳನ್ನು ಕಾರಿನ ಸಮೇತ ಅಪಹರಿಸಿದ್ದ. ಅಲ್ಲದೇ, ತಕ್ಷಣಕ್ಕೆ ಕಾರು ಪ್ರಯಾಣಿಸುವಾಗಲೇ ಮಕ್ಕಳ ಬಿಡುಗಡೆಗೆ 50 ಲಕ್ಷ ರೂ. ಬೇಡಿಕೆ ಇರಿಸಿದ್ದ. ಪ್ರಕರಣ ಸಂಬಂಧ ಮಕ್ಕಳ ತಂದೆ, ತಾಯಿ ಪೊಲೀಸರಿಗೆ ತಕ್ಷಣಕ್ಕೆ ದೂರು ನೀಡಿದ್ದರು.

ದೂರು ಪಡೆದ ಪೊಲೀಸರು ಆರೋಪಿ ಪತ್ತೆಗಾಗಿ ತಕ್ಷಣ ಕಾರ್ಯ ಪ್ರವೃತ್ತರಾಗಿದ್ದು, ಮಕ್ಕಳ ರಕ್ಷಣೆಗೆ ವಿಶೇಷ ತಂಡವನ್ನು ರಚಿಸಿದರು. ಆ ಮಕ್ಕಳ ತಾಯಿ ನೀಡಿದ ದೂರಿನ ಆಧಾರದ ಮೇಲೆ ಶಕರ್​ಪುರ್​ ಪೊಲೀಸ್​ ಠಾಣೆಯ ಎಸ್​ಹೆಚ್​ಒ ನೇತೃತ್ವದ ಒಂದು ತಂಡ ಮತ್ತು ತಂದೆ ದೂರಿನ ಅನುಸಾರ ಲಕ್ಷ್ಮೀ ನಗರ್​​ ಎಸ್​ಹೆಚ್​ಒ ಪೊಲೀಸ್​ ತಂಡ ಕಾರ್ಯ ನಿರ್ವಹಿಸಿದೆ. ಜೊತೆಗೆ ತಂತ್ರಜ್ಞಾನದ ಸಹಾಯದಿಂದ ಆರೋಪಿಗಳನ್ನು ಎರಡು ಪ್ರತ್ಯೇಕ ದಿಕ್ಕಿನಲ್ಲಿ ಶೋಧಿಸಲು ಮುಂದಾಯಿತು. ಈ ಸಂಬಂಧ ವಿಶೇಷ ಸಿಬ್ಬಂದಿ ತಂಡ ಮತ್ತು ಇತರೆ ನೆರೆಹೊರೆಯ ಜಿಲ್ಲೆಗಳನ್ನು ಮಕ್ಕಳ ಪತ್ತೆಗೆ ಆಲರ್ಟ್​ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಪಹರಣಕಾರ ಮಕ್ಕಳನ್ನು ಕಾರಿನಲ್ಲಿ ಕೂರಿಸಿಕೊಂಡು ಸಮಯಪುರ್​ ಬಡ್ಲಿ ಪ್ರದೇಶದಲ್ಲಿ ಹೋಗುತ್ತಿರುವುದನ್ನು ತಿಳಿದ ಪೊಲೀಸರು, ಆರೋಪಿ ಸೆರೆಗೆ 20 ವಾಹನಗಳ ಪೊಲೀಸರ ವಾಹನಗಳ ತಂಡಗಳು ಬೆನ್ನತ್ತಿದ್ದವು. ದೆಹಲಿಯ ರಸ್ತೆಗಳಲ್ಲಿ 100 ಕಿ.ಮೀ ದೂರ ಚೇಸ್​ ಮಾಡಿದೆ. ಅಂತಿಮವಾಗಿ ಇಬ್ಬರು ಮಕ್ಕಳನ್ನು ರಕ್ಷಿಸಿ, ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕಾರಿನಲ್ಲಿ ಆಭರಣ, ಮೊಬೈಲ್​ ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಇಡಲಾಗಿತ್ತು. ಆರೋಪಿಯನ್ನು ತಕ್ಷಣಕ್ಕೆ ಬೆನ್ನಟ್ಟಿದ ಪರಿಣಾಮ ಆತ ಅವುಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಕಾರ್ಯಾಚರಣೆಯಲ್ಲಿ ಉತ್ತರ ಹೊರವಲಯದ ಜಿಲ್ಲಾ ಪೊಲೀಸ್​ ತಂಡ ಮತ್ತು ರೈಲ್ವೆ ರಕ್ಷಣಾ ತಂಡ ಆರೋಪಿಯನ್ನು ಬಂಧಿಸಲು ನಮಗೆ ಸಾಕಷ್ಟು ಸಹಾಯ ಮಾಡಿದರು ಎಂದು ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಲಿಂಗ ಬದಲಾವಣೆಗಾಗಿ ಆಸ್ಪತ್ರೆಗೆ ಬಂದ ಅಘೋರಿ ಬಾಬಾ; ಅವರ ಕಾರು ನೋಡಿ ಬೆಚ್ಚಿಬಿದ್ದ ಜನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.