ETV Bharat / bharat

ಪ್ರಧಾನಮಂತ್ರಿ ಇಂಟರ್ನ್​ಶಿಪ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ, ಲಕ್ಷಾಂತರ ಯುವಕರ ಪಟ್ಟಿ ಸಿದ್ಧ! - PM INTERNSHIP SCHEME

PM Internship Scheme: ಯುವಕರನ್ನು ಉದ್ಯೋಗಶೀಲರನ್ನಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಾಯೋಗಿಕವಾಗಿ ಪ್ರಧಾನಮಂತ್ರಿ ಇಂಟರ್ನ್​ಶಿಪ್ ಯೋಜನೆಯನ್ನು ಆರಂಭಿಸಿರುವ ವಿಚಾರ ಗೊತ್ತಿದೆ. ಈ ಯೋಜನೆಯಲ್ಲಿ ಕಂಪನಿಗಳು ಲಕ್ಷಾಂತರ ಯುವಕರಿಗೆ ಅವಕಾಶ ಒದಗಿಸಿವೆ.

PMINTERNSHIP  REGISTRATION BY CANDIDATES  INTERNSHIP OFFERS  COMPANIES
ಪ್ರಧಾನಮಂತ್ರಿ ಇಂಟರ್ನ್​ಶಿಪ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ (ANI)
author img

By PTI

Published : Oct 19, 2024, 5:47 PM IST

ನವದೆಹಲಿ: ಪಿಎಂ ಇಂಟರ್ನ್‌ಶಿಪ್ ಯೋಜನೆಯಡಿಯಲ್ಲಿ ಕಂಪನಿಗಳು ಇದುವರೆಗೆ 1.25 ಲಕ್ಷ ಇಂಟರ್ನ್‌ಶಿಪ್ ಅವಕಾಶಗಳನ್ನು ಪಟ್ಟಿ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್ 12ರ ಸಂಜೆ 5 ಗಂಟೆವರೆಗೆ ಅಭ್ಯರ್ಥಿಗಳ ನೋಂದಣಿಗಾಗಿ ಯೋಜನೆಗಾಗಿ ಮೀಸಲಾದ ಪೋರ್ಟಲ್ ಆ್ಯಕ್ಟಿವ್​ ಆಗಿತ್ತು.

ಶನಿವಾರದಂದು ತಿಳಿದಿರುವ ಮೂಲಗಳ ಪ್ರಕಾರ, ಈ ಯೋಜನೆಯಡಿಯಲ್ಲಿ ಇದುವರೆಗೆ 250 ಉನ್ನತ ಕಂಪನಿಗಳನ್ನು ನೋಂದಾಯಿಸಲಾಗಿದೆ ಮತ್ತು ಕಂಪನಿಗಳು 1.25 ಲಕ್ಷ ಇಂಟರ್ನ್‌ಶಿಪ್ ಕೊಡುಗೆಗಳನ್ನು ನೀಡಿವೆ. ಅನೇಕ ಕಂಪನಿಗಳು ಯೋಜನೆ ಅಭ್ಯರ್ಥಿಗಳಿಗೆ 1.25 ಲಕ್ಷ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುತ್ತವೆ. ಇಂಟರ್ನ್‌ಶಿಪ್‌ಗಳು ಡಿಸೆಂಬರ್ 2 ರಂದು ಪ್ರಾರಂಭವಾಗಲಿವೆ.

ಯುವಕರಿಗೆ ತಿಂಗಳಿಗೆ 5,000 ರೂ.ಗಳ ಇಂಟರ್ನ್‌ಶಿಪ್ ಭತ್ಯೆ ಮತ್ತು 6,000 ರೂ.ಗಳ ಒಂದು ಬಾರಿಯ ಸಹಾಯಧನವನ್ನು ನೀಡಲಾಗುತ್ತದೆ. ಇಂಟರ್ನ್‌ಶಿಪ್ 12 ತಿಂಗಳವರೆಗೆ ಇರುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 1.25 ಲಕ್ಷ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಯೋಜನೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಯೋಜನೆಗೆ ಸುಮಾರು 800 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಕಂಪನಿಗಳು ತಮ್ಮ ಅವಶ್ಯಕತೆಗಳು ಮತ್ತು ಇಂಟರ್ನ್‌ಶಿಪ್ ಪೋಸ್ಟ್‌ಗಳ ಬಗ್ಗೆ ಅಕ್ಟೋಬರ್ 10ರೊಳಗೆ ಮಾಹಿತಿ ನೀಡಿವೆ. ಆಸಕ್ತ ಯುವಕರು ಅಕ್ಟೋಬರ್ 12ದಿಂದ www.pminternship.mca.gov.in ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಪ್ರಾರಂಭಿಸಿದ್ದರು. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಕಂಪನಿಗಳಿಗೆ ಅಕ್ಟೋಬರ್ 26ರೊಳಗೆ ನೀಡುತ್ತವೆ.

ಇಲ್ಲಿಯವರೆಗೆ 250ಕ್ಕೂ ಹೆಚ್ಚು ಕಂಪನಿಗಳು ಸೇರಿಕೊಂಡಿವೆ ಮತ್ತು ಇವುಗಳಲ್ಲಿ ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ ಮತ್ತು ಗುಜರಾತ್ ರಾಜ್ಯಗಳು ಸೇರಿವೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ ಅಕ್ಟೋಬರ್ 26ರ ವರೆಗೆ ಲಭ್ಯವಿರುತ್ತದೆ. ಕಂಪನಿಗಳು ನವೆಂಬರ್ 27ರೊಳಗೆ ಅಂತಿಮ ಆಯ್ಕೆಯನ್ನು ಮಾಡಲಿವೆ. ಡಿಸೆಂಬರ್ 2, 2024ರಿಂದ 12 ತಿಂಗಳವರೆಗೆ ಇಂಟರ್ನ್‌ಶಿಪ್ ನಡೆಯಲಿದೆ.

ಯೋಜನೆಗೆ ಸಂಬಂಧಿಸಿದ ನಿಯಮಗಳೇನು: ಯೋಜನೆಯ ಪ್ರಯೋಜನಗಳನ್ನು ಪಡೆಯಲು ಯುವಕರು ಕೆಲವು ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಈ ಮಾನದಂಡವಿಲ್ಲದೆ ಈ ಯೋಜನೆಯ ಲಾಭ ಪಡೆಯುವುದು ಕಷ್ಟ. ಈ ಯೋಜನೆಯಡಿಯಲ್ಲಿ ಇಂಟರ್ನ್‌ನ ವಯಸ್ಸು 21ರಿಂದ 24 ವರ್ಷಗಳ ನಡುವೆ ಇರಬೇಕು. ಅಲ್ಲದೆ, ಅವರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ. ಮೀರಬಾರದು. ಪ್ರಸ್ತುತ, ಔಪಚಾರಿಕ ಪದವಿ ಕೋರ್ಸ್ ಮಾಡುತ್ತಿರುವ ಅಥವಾ ಕೆಲಸ ಮಾಡುವ ಅಭ್ಯರ್ಥಿಗಳು ಈ ಇಂಟರ್ನ್‌ಶಿಪ್ ಯೋಜನೆಯ ಭಾಗವಾಗಲು ಸಾಧ್ಯವಾಗುವುದಿಲ್ಲ. ಆದರೂ ಈ ಅಭ್ಯರ್ಥಿಗಳು ಆನ್‌ಲೈನ್ ಕೋರ್ಸ್‌ಗಳು ಅಥವಾ ವೃತ್ತಿಪರ ತರಬೇತಿಗೆ ಸೇರಬಹುದು.

ಓದಿ: ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಚಾಲನೆ: ವಿಜಯದಶಮಿಯಿಂದ ಅರ್ಜಿ ಸಲ್ಲಿಸಬಹುದು, ಯಾರಿಗೆಲ್ಲ ಪ್ರಯೋಜನ? - Prime Minister Internship Scheme

ETV Bharat Logo

Copyright © 2025 Ushodaya Enterprises Pvt. Ltd., All Rights Reserved.