ETV Bharat / bharat

ಜಮ್ಮು ಕಾಶ್ಮೀರ ಸರ್ಕಾರ ರಚನೆ: ಇಂದು ಸಂಜೆಯೊಳಗೆ ಎನ್‌ಸಿಗೆ ಬೆಂಬಲ ಪತ್ರ ನೀಡಲಿರುವ ಕಾಂಗ್ರೆಸ್​ - J AND K GOVERNMENT FORMATION

ಜೆಕೆಪಿಸಿಸಿ ಅಧ್ಯಕ್ಷ ತರೀಖ್​ ಹಮೀದ್​ ಕರ್ರಾ ಮಾತನಾಡಿ, ಎನ್​ಸಿಗೆ ಬೆಂಬಲ ಪತ್ರವನ್ನು ಇಂದು ಸಂಜೆಯೊಳಗೆ ನೀಡಲಾಗುವುದು ಎಂದರು.

Congress will give a letter of support to the NC  by evening to government formation
ಎನ್​ಸಿ ನಾಯಕ ಒಮರ್​ ಅಬ್ಧುಲ್ಲಾ (IANS)
author img

By ETV Bharat Karnataka Team

Published : Oct 11, 2024, 4:45 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಹಕ್ಕು ಸ್ಥಾಪಿಸಲು ನ್ಯಾಷನಲ್​ ಕಾನ್ಫರೆನ್ಸ್​​​ಗೆ ಇಂದು ಸಂಜೆಯೊಳಗೆ ಬೆಂಬಲ ಪತ್ರ ನೀಡುವುದಾಗಿ ಕಾಂಗ್ರೆಸ್​ ತಿಳಿಸಿದೆ.

ಜೆಕೆಪಿಸಿಸಿ ಅಧ್ಯಕ್ಷ ತರೀಖ್​ ಹಮೀದ್​ ಕರ್ರಾ ಮಾತನಾಡಿ, "ಎನ್​ಸಿಗೆ ಬೆಂಬಲ ಪತ್ರವನ್ನು ಇಂದು ಸಂಜೆಯೊಳಗೆ ನೀಡಲಾಗುವುದು. ಇದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಬಳಿಕ ಈ ನಿರ್ಣಯವನ್ನು ಹೈಕಮಾಂಡ್​​ಗೆ ತಲುಪಿಸಲಾಗುವುದು" ಎಂದರು.

ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ 6 ಸ್ಥಾನ ಗೆದ್ದಿದೆ. ಇದೀಗ ಎನ್​ಸಿ ಜೊತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಯಾರು ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಎನ್​ಸಿಗೆ ಕಾಂಗ್ರೆಸ್ ಬೆಂಬಲ ಪತ್ರ ನೀಡಲಿದೆ. ಆದರೆ ಪಕ್ಷ ಯಾವುದೇ ನಿರ್ದಿಷ್ಟ ಷರತ್ತು ವಿಧಿಸಿಲ್ಲ ಎಂದು ಹಮೀದ್ ಹೇಳಿದ್ದಾರೆ.

ಎನ್​ಸಿ ಕೂಡ ಗುರುವಾರ ಪಕ್ಷದ ಅಧ್ಯಕ್ಷ ಫಾರುಕ್​ ಅಬ್ಧುಲ್ಲಾ ನೇತೃತ್ವದಲ್ಲಿ ಶಾಸಕಾಂಗ ಪಕ್ಷ ಸಭೆ ನಡೆಸಿದೆ. ಸಭೆಯಲ್ಲಿ ಒಮರ್​ ಅಬ್ಧುಲ್ಲಾರನ್ನು ಶಾಸಕಾಂಗ ಪಕ್ಷದ ನಾಯಕ ಮತ್ತು ಮುಂದಿನ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಲಾಯಿತು.

ಜಮ್ಮು ಕಾಶ್ಮೀರ ಚುನಾವಣೆಗೆ ಮುನ್ನವೇ ಎನ್​ಸಿ ಮತ್ತು ಕಾಂಗ್ರೆಸ್​ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿತ್ತು.

ಕೇಂದ್ರಾಡಳಿತ ಪ್ರದೇಶದ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್​ಸಿ 42 ಸ್ಥಾನಗಳನ್ನು ಗೆದ್ದಿತು. ಕಾಂಗ್ರೆಸ್​ 6 ಸ್ಥಾನ, ಪಿಡಿಪಿ 3, ಸಿಪಿಐ (ಎಂ) 1, ಪೀಪಲ್ಸ್​ ಕಾನ್ಫರೆನ್ಸ್​​ 1, ಆಮ್​ ಆದ್ಮಿ ಪಕ್ಷ 1 ಹಾಗೂ 7 ಸ್ವಾತಂತ್ರ್ಯ ಅಭ್ಯರ್ಥಿಗಳು ಗೆಲುವು ಕಂಡಿದ್ದರು.

ಇದನ್ನೂ ಓದಿ: ಅ.15ರಂದು ಹರಿಯಾಣದ ನೂತನ ಸಿಎಂ ಆಗಿ ನಯಾಬ್​​ ಸಿಂಗ್​ ಸೈನಿ ಪ್ರಮಾಣ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.