ETV Bharat / bharat

ಕಾಂಗ್ರೆಸ್ EVM ದೂಷಿಸುವುದನ್ನು ಬಿಟ್ಟು ಫಲಿತಾಂಶ ಒಪ್ಪಿಕೊಳ್ಳಲಿ: ಸಿಎಂ ಒಮರ್ ಅಬ್ದುಲ್ಲಾ - OMAR ABDULLAH SUPPORT EVM

ಇವಿಎಂ ವಿಷಯದಲ್ಲಿ ಕಾಂಗ್ರೆಸ್ ಆಕ್ಷೇಪಗಳನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಳ್ಳಿ ಹಾಕಿದ್ದಾರೆ.

ಸಿಎಂ ಒಮರ್ ಅಬ್ದುಲ್ಲಾ
ಸಿಎಂ ಒಮರ್ ಅಬ್ದುಲ್ಲಾ (IANS)
author img

By PTI

Published : 3 hours ago

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗೆಗಿನ ಕಾಂಗ್ರೆಸ್ ಪಕ್ಷದ ತೀವ್ರ ಆಕ್ಷೇಪಗಳನ್ನು ತಳ್ಳಿಹಾಕಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಇವಿಎಂಗಳ ವಿಷಯದಲ್ಲಿ ಬಿಜೆಪಿಗೆ ಸಮಾನವಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ.

"ಇವಿಎಂ ಮೂಲಕ ಮತದಾನ ನಡೆದು ನೀವು ಲೋಕಸಭಾ ಚುನಾವಣೆಯಲ್ಲಿ ನೂರಕ್ಕೂ ಅಧಿಕ ಸ್ಥಾನ ಗಳಿಸಿದಾಗ ಅದು ನಿಮ್ಮ ಪಕ್ಷದ ದೊಡ್ಡ ಸಾಧನೆ ಎಂಬಂತೆ ಸಂಭ್ರಮಾಚರಣೆ ಮಾಡುತ್ತೀರಿ. ಅದೇ ಕೆಲ ತಿಂಗಳುಗಳ ನಂತರ ನೀವು ಬಯಸಿದ ರೀತಿಯಲ್ಲಿ ನಿಮಗೆ ಫಲಿತಾಂಶ ಸಿಗದಿದ್ದಾಗ ನಾವು ಫಲಿತಾಂಶಗಳನ್ನೇ ಒಪ್ಪುವುದಿಲ್ಲ ಎಂದು ಇವಿಎಂಗಳನ್ನು ದೂಷಿಸಿದರೆ ಏನರ್ಥ" ಎಂದು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಬ್ದುಲ್ಲಾ ಪ್ರಶ್ನಿಸಿದರು.

"ನಾನು ಈ ರೀತಿ ಮಾತನಾಡುವಾಗ ಬಿಜೆಪಿಯ ವಕ್ತಾರನಂತೆ ಕಾಣಿಸಿದರೆ ದೇವರು ನನ್ನನ್ನು ಕ್ಷಮಿಸಲಿ. ಆದರೆ ವಾಸ್ತವ ಹಾಗಿದೆ. ಯಾವುದು ಸತ್ಯವೋ ಅದನ್ನು ಹಾಗೆಯೇ ಹೇಳಬೇಕು." ಎಂದು ಅವರು ಹೇಳಿದರು.

ತಾವು ಪಕ್ಷ ನಿಷ್ಠೆಗಿಂತಲೂ ಸೈದ್ಧಾಂತಿಕ ತತ್ವಗಳ ಆಧಾರದ ಮೇಲೆ ಮಾತನಾಡುವುದಾಗಿ ತಿಳಿಸಿದ ಅವರು, ಸೆಂಟ್ರಲ್ ವಿಸ್ಟಾದಂತಹ ಮೂಲಸೌಕರ್ಯ ಯೋಜನೆಗಳಿಗೆ ತಾವು ಬೆಂಬಲಿಸಿರುವುದೇ ಇದಕ್ಕೆ ಉದಾಹರಣೆ ಎಂದರು.

"ಬಹುತೇಕರ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ, ದೆಹಲಿಯ ಸೆಂಟ್ರಲ್ ವಿಸ್ಟಾ ಯೋಜನೆ ತುಂಬಾ ಒಳ್ಳೆಯ ಯೋಜನೆಯಾಗಿದೆ ಎಂದು ನಾನು ಹೇಳುತ್ತೇನೆ. ಹೊಸ ಸಂಸತ್ ಕಟ್ಟಡವನ್ನು ನಿರ್ಮಿಸುವುದು ಅತ್ಯುತ್ತಮ ಕೆಲಸ ಎಂಬುದು ನನ್ನ ಅಭಿಪ್ರಾಯ. ನಮಗೆ ಹೊಸ ಸಂಸತ್ ಕಟ್ಟಡದ ಅಗತ್ಯವಿತ್ತು. ಹಳೆಯ ಕಟ್ಟಡವು ಅದರ ಉಪಯುಕ್ತತೆಯ ಅವಧಿಯನ್ನು ಮೀರಿದೆ" ಎಂದು ಅವರು ಹೇಳಿದರು.

ಮತದಾನ ಪ್ರಕ್ರಿಯೆಯ ಬಗ್ಗೆ ನಂಬಿಕೆ ಇಲ್ಲದಿದ್ದರೆ ಅಂಥ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಲೇಬಾರದು ಎಂದು ಅವರು ಹೇಳಿದರು. ಪ್ರತಿಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್​ ಇವಿಎಂ ವಿಷಯವನ್ನು ಪ್ರಸ್ತಾಪಿಸುವ ಮೂಲಕ ತಪ್ಪು ಮಾಡುತ್ತಿವೆಯೇ ಎಂದು ಕೇಳಲಾದ ಪ್ರಶ್ನೆಗೆ, "ಇವಿಎಂ ಗಳ ಬಗ್ಗೆ ನಿಮಗೆ ಆಕ್ಷೇಪವಿದ್ದರೆ ಅದು ಸ್ಥಿರವಾಗಿರಬೇಕು." ಎಂದರು.

ಚುನಾವಣಾ ಫಲಿತಾಂಶ ಏನೇ ಬಂದರೂ ಚುನಾವಣಾ ಯಂತ್ರಗಳು ಒಂದೇ ರೀತಿ ಕೆಲಸ ಮಾಡುತ್ತವೆ. ಪಕ್ಷಗಳು ಅವುಗಳನ್ನು ತಮ್ಮ ಸೋಲಿಗೆ ಅನುಕೂಲಕರ ನೆಪವಾಗಿ ಬಳಸಬಾರದು ಎಂದು ಮುಖ್ಯಮಂತ್ರಿ ಒಮರ್ ಒತ್ತಿ ಹೇಳಿದರು.

"ಒಂದು ದಿನ ಮತದಾರರು ನಿಮ್ಮನ್ನು ಆಯ್ಕೆ ಮಾಡುತ್ತಾರೆ, ಅವರೇ ಮರುದಿನ ನಿಮ್ಮನ್ನು ತಿರಸ್ಕರಿಸುತ್ತಾರೆ" ಎಂದ ಅವರು, ಸೆಪ್ಟೆಂಬರ್​ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಹುಮತ ಪಡೆದಿದ್ದು ಹಾಗೂ ಅದಕ್ಕೂ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದನ್ನು ಉದಾಹರಣೆಯಾಗಿ ನೀಡಿದರು. ಏನೇ ಆದರೂ ನಾನು ಎಂದಿಗೂ ಮತ ಯಂತ್ರಗಳನ್ನು ದೂಷಿಸಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ : ನ್ಯಾಯ ಸಿಗುವವರೆಗೂ ಮಗನ ಚಿತಾಭಸ್ಮ ವಿಸರ್ಜಿಸಲ್ಲ: ಮೃತ ಟೆಕ್ಕಿ ಅತುಲ್ ಸುಭಾಷ್ ತಂದೆಯ ಮಾತು - TECHIE ATUL SUBHASH

ETV Bharat Logo

Copyright © 2024 Ushodaya Enterprises Pvt. Ltd., All Rights Reserved.