ETV Bharat / bharat

ಅಮೆರಿಕದಲ್ಲಿ ರಾಹುಲ್​ ಹೇಳಿಕೆ ವಿಚಾರ: ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್ - RAHUL GANDHI vs BJP FIGHT

ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಪ್ರತಿಪಕ್ಷಗಳ ಕೆಲಸ ಎನ್ನುವ ಮೂಲಕ ರಾಹುಲ್ ವಿರುದ್ಧದ ಬಿಜೆಪಿ​ ವಾಗ್ದಾಳಿಗೆ ಕಾಂಗ್ರೆಸ್​ ತಿರುಗೇಟು ನೀಡಿದೆ.

congress-hits-back-at-bjp-defends-rahul-gandhi
ಅಮೆರಿಕದಲ್ಲಿ ರಾಹುಲ್​ ಹೇಳಿಕೆ ವಿಚಾರ: ಬಿಜೆಪಿಗೆ ತಿರುಗೇಟು ನೀಡಿದ ಕಾಂಗ್ರೆಸ್ (ETV Bharat)
author img

By ETV Bharat Karnataka Team

Published : Sep 10, 2024, 7:35 PM IST

ನವದೆಹಲಿ: ಇತ್ತೀಚೆಗೆ ಅಮೆರಿಕದಲ್ಲಿ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗಳನ್ನು ಕಾಂಗ್ರೆಸ್​ ಸಮರ್ಥನೆ ಮಾಡಿಕೊಂಡಿದೆ. ಬಿಜೆಪಿ ವಿರುದ್ಧದ ನಮ್ಮ ಹೋರಾಟ ರಾಜಕೀಯಕ್ಕಾಗಿ ಅಲ್ಲ ಧರ್ಮ ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಅಸ್ಮಿತೆಗಾಗಿ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅಷ್ಟೇ ಅಲ್ಲ ವಿದೇಶಿ ನೆಲದಲ್ಲಿ ನಿಂತು ಆರ್​ಎಸ್​ಎಸ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದು ಬಿಜೆಪಿಗರನ್ನು ಕೆರಳಿಸಿತ್ತು. ದೇಶವನ್ನು ಕೆಟ್ಟದಾಗಿ ಬಣ್ಣಿಸುವ ಇಂತಹ ಹೇಳಿಕೆಗಳನ್ನು ರಾಹುಲ್​ ನೀಡಿದ್ದು ತಪ್ಪು ಎಂದಿರುವ ಬಿಜೆಪಿ ಕಾನೂನು ಹೋರಾಟದ ಎಚ್ಚರಿಕೆಯನ್ನೂ ನೀಡಿದೆ.

ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡ ಮಾತಿನ ಚಡಿ ಏಟು ನೀಡಿದ್ದ ಕೇಸರಿ ಪಕ್ಷಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಮತ್ತು ಅದಕ್ಕೂ ಮೊದಲು ರಾಹುಲ್​ ಗಾಂಧಿ ಕೇಂದ್ರ ಸರ್ಕಾರ ಮತ್ತು ಬಿಜೆಪಿಗೆ ಕಠಿಣ ಪ್ರಶ್ನೆಗಳನ್ನು ಕೇಳುತ್ತಿದ್ದರು. ಬಿಜೆಪಿ ಅಥವಾ ಸರ್ಕಾರವನ್ನು ಟೀಕಿಸುತ್ತಿಲ್ಲ. ಅಷ್ಟಕ್ಕೂ ಬಿಜೆಪಿಯೇ ದೇಶವಲ್ಲ, ಅವರು ಕೇವಲ ವಿರೋಧ ಪಕ್ಷದ ನಾಯಕರಾಗಿ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯಾಧ್ಯಕ್ಷ ಸೂರಜ್ ಹೆಗಡೆ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ಎರಡೂ ಪ್ರಜಾಸತ್ತಾತ್ಮಕ ರಾಷ್ಟ್ರಗಳಾಗಿದ್ದು, ಇವೆರಡೂ ಇಂತಹ ಮುಕ್ತ ವಿಚಾರ ವಿನಿಮಯಕ್ಕೆ ಉತ್ತೇಜನ ನೀಡುತ್ತವೆ. ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಪ್ರತಿಪಕ್ಷಗಳ ಕೆಲಸವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹೀಗೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಲೋಕಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿ ಮಾದರಿ ಸಂಹಿತೆ ಉಲ್ಲಂಘಿಸಿದೆ. ಈ ಬಗ್ಗೆ ಕಾಂಗ್ರೆಸ್ ಹಲವಾರು ದೂರುಗಳನ್ನು ನೀಡಿತ್ತು. ಹೀಗಾಗಿ ರಾಹುಲ್​ ಗಾಂಧಿ 2024 ರ ಚುನಾವಣೆ ನಿಯಂತ್ರಿಸಲ್ಪಟ್ಟಿದೆ ಎಂದು ಸರಿಯಾಗಿಯೇ ಹೇಳಿದ್ದಾರೆ. ಚುನಾವಣಾ ಆಯೋಗ ಈ ಸಂದರ್ಭದಲ್ಲಿ ಸರಿಯಾಗಿ ನಡೆದುಕೊಂಡಿಲ್ಲ ಎಂದಿದ್ದಾರೆ.

ಇದನ್ನು ಓದಿ: ವಿದ್ಯುತ್​ ಮೇಲೆ ಹಾಲಿನ ಹಾಗೂ ಪರಿಸರ ಸೆಸ್​​ ವಿಧಿಸುವ ಮಸೂದೆ ಅಂಗೀಕರಿಸಿದ ಹಿಮಾಚಲ ಪ್ರದೇಶ - Milk Cess on Electricity

"ನಾವು ವಿವಿಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮತ್ತು ಅಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಯಾವುದೇ ಕ್ರಮವಾಗಲಿಲ್ಲ. 2024 ರ ಚುನಾವಣೆಯನ್ನು ನಾವು ನ್ಯಾಯಸಮ್ಮತ ಮತ್ತು ಮುಕ್ತ ಎಂದು ಕರೆಯಲು ಸಾಧ್ಯವಿಲ್ಲ. ಮತದಾನದ ಮಾಹಿತಿ ನೀಡುವಲ್ಲಿ ವಿಳಂಬವಾಗಿದೆ. ಅಂತಿಮ ಅಂಕಿ- ಅಂಶಗಳು ಸಹ ಸರಿಯಾಗಿ ಹೊಂದಿಕೆಯಾಗಲಿಲ್ಲ. ಹೀಗಾಗಿ ಚುನಾವಣಾ ಆಯೋಗವನ್ನು ಪ್ರಶ್ನಿಸಬೇಕಿದೆ,’’ ಎಂದು ಹೆಗಡೆ ಹೇಳಿದ್ದಾರೆ.

ಈ ಸತ್ಯವನ್ನು ಬಿಜೆಪಿ ಮತ್ತು ನರೇಂದ್ರ ಮೋದಿ ಸರ್ಕಾರ ಮನಸ್ಸಿನಲ್ಲಿಟ್ಟುಕೊಳ್ಳಬೇಕು, ಪ್ರತಿಪಕ್ಷಗಳು ಅವರನ್ನು ಪ್ರಶ್ನಿಸುತ್ತವೆ ಎಂದು ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ಪವನ್ ಖೇರಾ ತಿರುಗೇಟು ನೀಡಿದ್ದಾರೆ. " ಪ್ರಶ್ನೆಗಳನ್ನು ಕೇಳುವುದು ದೇಶಕ್ಕೆ ವಿರುದ್ಧವಾಗಿದೆ ಎಂದು ಅವರು ಏಕೆ ಭಾವಿಸುತ್ತಾರೆ? ಬಿಜೆಪಿ ಭಾರತವಲ್ಲ. ಕೇಸರಿ ಪಕ್ಷವು ರಾಹುಲ್ ಅವರ ಹೇಳಿಕೆಯನ್ನು ಜಗತ್ತೇ ಗಮನಿಸುತ್ತಿದೆ ಎಂದು ಆತಂಕಗೊಂಡಿದ್ದರೆ ಅವರು ದೇಶದೊಳಗೆ ಮಾತನಾಡುವಾಗ ಅದೇ ಸಂಭವಿಸುತ್ತದೆ" ಎಂದು ಖೇರಾ ಹೇಳಿದ್ದಾರೆ.

ಎಐಸಿಸಿ ಕಾರ್ಯಾಧ್ಯಕ್ಷ ಬಿಎಂ ಸಂದೀಪ್ ಮಾತನಾಡಿ, ಪ್ರಧಾನಿ ಮೋದಿ ಅವರ ಕಲ್ಪನೆಯು ಇತಿಹಾಸವಾಗಿದೆ ಎಂಬ ರಾಹುಲ್ ಹೇಳಿಕೆಯಿಂದ ಬಿಜೆಪಿ ಕಳವಳಗೊಂಡಿದೆ ಎಂದಿದ್ದಾರೆ. ಬಿಜೆಪಿ ಮೋದಿ ಬ್ರ್ಯಾಂಡ್ ಅವಲಂಬಿಸಿದ್ದಾರೆ ಮತ್ತು ಅದು ವಿದೇಶದಲ್ಲಿ ಸೋತಾಗ ಅವರಿಗೆ ನೋವುಂಟುಮಾಡುತ್ತದೆ. ಆದರೆ ಇದು ಸತ್ಯ. ರಾಷ್ಟ್ರೀಯ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಒಗ್ಗಟ್ಟು, ಮೋದಿ ಬ್ರ್ಯಾಂಡ್ ದುರ್ಬಲಗೊಳಿಸಿದೆ. ಅದು ಈಗ ಸಂಸತ್ತಿನೊಳಗೆ ಪ್ರತಿಫಲಿಸುತ್ತಿದೆ. ನಮ್ಮ ಒಗ್ಗಟ್ಟಿನ ಹೋರಾಟದ ಪ್ರತಿಫಲವಾಗಿ ವಿವಾದಾತ್ಮಕ ವಿಷಯಗಳ ಬಗ್ಗೆ ಸರ್ಕಾರವು ಹಲವಾರು ಯು-ಟರ್ನ್‌ಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಉದ್ಯಮಶೀಲತೆ, ಸುಸ್ಥಿರ ಅಭಿವೃದ್ಧಿಯ ವಾತಾವರಣ ಕಲ್ಪಿಸಲು ನಮ್ಮ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ - CM Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.