ಬಲೂರ್‌ಘಾಟ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಬಲೂರ್‌ಘಾಟ್‌ನ ಲೋಕಸಭಾ ಅಭ್ಯರ್ಥಿ ಸುಕಾಂತ್ ಮಜುಂದಾರ್ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಬಾಲೂರ್‌ಘಾಟ್‌ನಲ್ಲಿ ಶುಕ್ರವಾರ ವಾಗ್ವಾದ ನಡೆಯಿತು.
ಲೋಕಸಭೆಯ ಪತಿರಾಮ್ ಬಾಲಕಿಯರ ಶಾಲೆಯ ಮತಗಟ್ಟೆ ಸಂಖ್ಯೆ 100ರಲ್ಲಿ ತೃಣಮೂಲ ಕಾರ್ಯಕರ್ತರು ಮತದಾರರ ಮೇಲೆ ಪ್ರಭಾವ ಬೀರಿದೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ನಾಯಕನಿಗೆ ಟಿಎಂಸಿ ತಿರುಗೇಟು: ಮಾಹಿತಿ ಪ್ರಕಾರ, ಮತದಾನದ ವೇಳೆ ಟಿಎಂಸಿ ಕಾರ್ಯಕರ್ತರು ಮತ್ತು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ್ ಮಜುಂದಾರ್ ನಡುವೆ ತೀವ್ರ ವಗ್ವಾದ ನಡೆದಿದೆ. ಬಿಜೆಪಿ ನಾಯಕನಿಗೆ ತಿರುಗೇಟು ನೀಡಿದ ಟಿಎಂಸಿ ಕಾರ್ಯಕರ್ತರು, ಬಲೂರ್‌ಘಾಟ್ ವ್ಯಾಪ್ತಿಯ ಬರುವ ಪತಿರಾಮ್‌ನಲ್ಲಿ "ಗೋ ಬ್ಯಾಕ್" ಎಂಬ ಘೋಷಣೆಗಳನ್ನು ಕೂಗಿದರು.
''ಮತಗಟ್ಟೆಯೊಂದರಲ್ಲಿ ಟಿಎಂಸಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ'' ಎಂದು ಸುಕಾಂತ ಮಜುಂದಾರ್ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಮತದಾನ ಮಾಹಿತಿ: ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಡಾರ್ಜಿಲಿಂಗ್, ಬಲೂರ್‌ಘಾಟ್ ಮತ್ತು ರಾಯಗಂಜ್ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಬೆಳಗ್ಗೆ 11 ಗಂಟೆವರೆಗೆ ರಾಯಗಂಜ್‌ನಲ್ಲಿ ಶೇ.32.51, ಡಾರ್ಜಿಲಿಂಗ್‌ನಲ್ಲಿ ಶೇ.32.75 ಮತ್ತು ಬಾಲೂರ್‌ಘಾಟ್‌ನಲ್ಲಿ ಶೇ.32.51ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 31.25ರಷ್ಟು ಮತದಾನವಾಗಿದೆ. 241 ದೂರುಗಳಲ್ಲಿ ಈವರೆಗೆ 43 ಪರಿಹರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಅಖಾಡದಲ್ಲಿ 47 ಅಭ್ಯರ್ಥಿಗಳು: ಪಶ್ಚಿಮ ಬಂಗಾಳದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ 51.17 ಲಕ್ಷ ಮತದಾರರಲ್ಲಿ ಸುಮಾರು 31.25 ಪ್ರತಿಶತದಷ್ಟು ಮತದಾರರು ಶುಕ್ರವಾರ ಬೆಳಿಗ್ಗೆ 11 ಗಂಟೆಯವರೆಗೆ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಈ ಮೂರು ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಾಧ್ಯಕ್ಷ ಸುಕಾಂತ್ ಮಜುಂದಾರ್ ಸೇರಿದಂತೆ ಒಟ್ಟು 47 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.