ETV Bharat / bharat

ಅಂಗವೈಕಲ್ಯಕ್ಕೇ ಸವಾಲು ಹಾಕಿದ; ಎರಡೂ ಕಾಲಿಲ್ಲದಿದ್ದರೂ ಆಟೋ ಓಡಿಸಿ ಬದುಕು ಕಟ್ಟಿಕೊಂಡ ದೀರ! - Inspiring story

author img

By ETV Bharat Karnataka Team

Published : Jul 22, 2024, 8:04 PM IST

Updated : Jul 22, 2024, 9:31 PM IST

ಎರಡೂ ಕಾಲಿಲ್ಲದಿದ್ದರೂ ಆಟೋ ಓಡಿಸಿ ಬದುಕು ಕಟ್ಟಿಕೊಂಡ ವ್ಯಕ್ತಿಯ ಹೋರಾಟದ ಗಾಥೆ ಇಲ್ಲಿದೆ.

ಶನಿಗಾರಪು ನಾಗರಾಜು
ಶನಿಗಾರಪು ನಾಗರಾಜು (IANS)

ಮುಲುಗು,ತೆಲಂಗಾಣ: 'ನಿಮಗೆ ಕಷ್ಟಪಟ್ಟು ಕೆಲಸ ಮಾಡುವ ಆಸೆ, ಭರವಸೆ ಮತ್ತು ಮಹತ್ವಾಕಾಂಕ್ಷೆ ಇದ್ದರೆ, ನೀವು ಎಷ್ಟೇ ಕಷ್ಟಗಳನ್ನು ಎದುರಿಸಿದರೂ, ನೀವು ಅವುಗಳನ್ನು ಜಯಿಸಬಹುದು ಮತ್ತು ಜೀವನದ ಹೋರಾಟದಲ್ಲಿ ಜಯಗಳಿಸಬಹುದು. ಈ ಮಾತಿಗೆ ಇಂಬು ನೀಡುವಂತೆ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಶನಿಗಾರಪು ನಾಗರಾಜು ಎಂಬುವರು ತಮ್ಮ ಜೀವನದಲ್ಲಿನ ಎಲ್ಲ ಅಡೆತಡೆಗಳನ್ನು ಎದುರಿಸಿ ಸಾಧಕ ವ್ಯಕ್ತಿಯಾಗಿದ್ದಾರೆ. ಯಾರು ಈ ಶನಿಗಾರಪು ನಾಗರಾಜು, ಹೇಗಿತ್ತು ಅವರ ಹೋರಾಟ ಎಂಬುದನ್ನು ತಿಳಿಯೋಣ.

ಶನಿಗಾರಪು ನಾಗರಾಜು ಅವರು ಎರಡೂ ಕಾಲುಗಳನ್ನು ಕಳೆದುಕೊಂಡು ಒಂದು ಹಂತದಲ್ಲಿ ಸಾವಿನ ದವಡೆಗೆ ಸಿಲುಕಿದ್ದರು. ಆದಾಗ್ಯೂ ಅದೃಷ್ಟವಶಾತ್ ಬದುಕುಳಿದರು. ತೀರಾ ತೊಂದರೆಯಲ್ಲಿದ್ದು, ಜೀವನದಲ್ಲಿ ಜಿಗುಪ್ಸೆ ಹೊಂದಿದವರಿಗೆ ಇವರ ಜೀವನ ಸಾಧನೆ ಮತ್ತೆ ಜೀವನೋತ್ಸಾಹ ಮೂಡಿಸುವಂತಿದೆ. ಇವರು ತಮ್ಮ ದೃಢ ನಿಶ್ಚಯದಿಂದ ಅಂಗವೈಕಲ್ಯವನ್ನೇ ಮೆಟ್ಟಿ ನಿಂತಿದ್ದಾರೆ.

ನಾಗರಾಜು ಮುಲುಗು ಜಿಲ್ಲೆಯ ಗೋವಿಂದ ರಾವ್ ಪೇಟ ಮಂಡಲ ಕೇಂದ್ರದ ನಂದಮೂರಿ ಕಾಲೋನಿಯ ಬಡ ಕುಟುಂಬದವರಾಗಿದ್ದಾರೆ. ನಾಗರಾಜು ಅವರ ಕುಟುಂಬ ಪತ್ನಿ ಲಾವಣ್ಯ ಹಾಗೂ ಮಕ್ಕಳಾದ ಸಾಯಿದೀಪಿಕಾ ಮತ್ತು ದೇವಾ ಅವರನ್ನು ಒಳಗೊಂಡಿದೆ. ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಾಗರಾಜು ರಸ್ತೆ ಅಪಘಾತವೊಂದರಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡರು. ಅಂಥ ಬಿಕ್ಕಟ್ಟಿನ ಸಮಯದಲ್ಲಿಯೂ ನಾಗರಾಜು ತನ್ನ ಸಂಯಮವನ್ನು ಕಳೆದುಕೊಳ್ಳಲಿಲ್ಲ ಮತ್ತು ಮರಳಿ ಜೀವನ ಕಟ್ಟಿಕೊಳ್ಳಲು ಸಿದ್ಧರಾದರು. ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಅವರು ಹೊಲಿಗೆ ಯಂತ್ರದಲ್ಲಿ ಬಟ್ಟೆಗಳನ್ನು ಹೊಲಿಯಲು ಪ್ರಾರಂಭಿಸಿದರು.

ಶ್ರೀಗುರು ಯೋಗಾಲಯದಿಂದ ಸಹಾಯಹಸ್ತ: ನಾಗರಾಜು ಅವರ ಸ್ಥಿತಿಯ ಬಗ್ಗೆ ತಿಳಿದ ಗೋವಿಂದ ರಾವ್ ಪೇಟದ ಶ್ರೀ ಗುರು ಯೋಗಾಲಯಂ ಯೋಗ ಶಿಕ್ಷಕ ಶಿವಕೃಷ್ಣ ಅವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಅವರು ದಾನಿಗಳಿಂದ 3.5 ಲಕ್ಷ ರೂ. ಸಂಗ್ರಹಿಸಿ ನಾಗರಾಜ್ ಅವರಿಗೆ ಕೃತಕ ಕಾಲು ಹಾಕಿಸಿಕೊಳ್ಳಲು ನೆರವಾಗಿದ್ದಾರೆ. ಅಲ್ಲದೇ ನಾಗರಾಜು ಅವರ ಮಗಳು ಸಾಯಿ ದೀಪಿಕಾ ಅವರ ಹೆಸರಿನಲ್ಲಿ 50,000 ರೂ. ಠೇವಣಿ ಮಾಡಿದ್ದಾರೆ. ಗೋವಿಂದ ರಾವ್ ಪೇಟೆಯ ಮೆರಿಟ್ ಹೈಸ್ಕೂಲ್​ನ ವರದಿಗಾರ ರವಿಕಿರಣ್, ಸಾಯಿ ದೀಪಿಕಾಗೆ 10ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಆಟೋ ಡ್ರೈವರ್ ಆಗಿ ಕೆಲಸ : ಹೊಲಿಗೆ ಯಂತ್ರದಿಂದ ಬರುವ ಆದಾಯದಿಂದ ಕುಟುಂಬದ ನಿರ್ವಹಣೆ ಕಷ್ಟಕರವಾಗಿದ್ದರಿಂದ, ನಾಗರಾಜು ಪರ್ಯಾಯ ಮಾರ್ಗಗಳತ್ತ ಗಮನ ಹರಿಸಿದರು. ಆಟೋ ಓಡಿಸಲು ನಿರ್ಧರಿಸಿದರು. ಎರಡು ಕಾಲುಗಳಿಲ್ಲದೇ ಆಟೋ ಓಡಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಅವರೇ ಉತ್ತರ ಹುಡುಕಿದರು. ಬ್ರೇಕ್ ಪೆಡಲ್ ಗೆ ಸಂಪರ್ಕ ಕಲ್ಪಿಸಿ, ರಾಡ್ ಅನ್ನು ಅಳವಡಿಸಲಾಯಿತು. ಅದು ಬ್ರೇಕ್ ಸಮಸ್ಯೆಯನ್ನು ಪರಿಹರಿಸಿತು. ಒಂದು ಕಡೆ ಬಟ್ಟೆ ಹೊಲಿಯುವುದು, ಮತ್ತೊಂದೆಡೆ ಆಟೋ ಓಡಿಸುವುದರ ಮಧ್ಯೆ ಆರ್ಥಿಕ ಸಮಸ್ಯೆಗಳು ಮುಂದುವರಿಯುತ್ತಲೇ ಇವೆ. ಯಾರಾದರೂ ಆರ್ಥಿಕವಾಗಿ ಸಹಾಯ ಮಾಡಿದರೆ ಕಿರಾಣಿ ಅಂಗಡಿ ತೆರೆಯುವುದು ನಾಗರಾಜ್ ಅವರ ಆಲೋಚನೆಯಾಗಿದೆ.

ಬಾರದ ಪಿಂಚಣಿ : ನಾಗರಾಜು ಎರಡು ವರ್ಷಗಳ ಹಿಂದೆ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇನ್ನೂ ಪಿಂಚಣಿ ಮಂಜೂರಾಗಿಲ್ಲ. ನಾಗರಾಜು ಹಲವಾರು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ, ಅಧಿಕಾರಿಗಳನ್ನು ಭೇಟಿಯಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ : ಆರ್ಥಿಕ ಸಮೀಕ್ಷೆ: ಭಾರತದ ಶಾಲೆಗಳಲ್ಲಿ 26.52 ಕೋಟಿ, ಕಾಲೇಜುಗಳಲ್ಲಿ 4.33 cr ವಿದ್ಯಾರ್ಥಿಗಳಿಂದ ವ್ಯಾಸಂಗ - Economic Survey

Last Updated : Jul 22, 2024, 9:31 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.