ETV Bharat / bharat

ಸುಪ್ರೀಂ ಕೋರ್ಟ್​ನಲ್ಲಿ 'ತ್ರಿವಳಿ ತಲಾಖ್​ ಕಾನೂನು' ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ - Triple Talaq - TRIPLE TALAQ

ತ್ರಿವಳಿ ತಲಾಖ್​ ಅಪರಾಧವನ್ನಾಗಿ ರೂಪಿಸಿದ ಕಾನೂನನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಬಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ. ಇಂತಹ ಪದ್ಧತಿ ವೈವಾಹಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಮಾರಕ ಎಂದು ಹೇಳಿದೆ.

ತ್ರಿವಳಿ ತಲಾಖ್​ ಅಪರಾಧ ಕಾನೂನು
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Aug 19, 2024, 3:37 PM IST

ನವದೆಹಲಿ: ಮುಸ್ಲಿಂ ಮಹಿಳೆಗೆ ಆಕೆಯ ಪತಿ ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಖ್​ ನೀಡಿ ವೈವಾಹಿಕ ವಿಚ್ಚೇದನ ನೀಡುವುದನ್ನು 'ಕ್ರಿಮಿನಲ್​ ಅಪರಾಧ'ವಾಗಿ ಪರಿಗಣಿಸಿರುವ ತನ್ನ ನಿರ್ಧಾರವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಸಮರ್ಥಿಸಿಕೊಂಡಿದೆ.

2019ರಲ್ಲಿ ತ್ರಿವಳಿ ತಲಾಖ್ ಅಪರಾಧ ಎಂದು ಪರಿಗಣಿಸುವ ಕಾನೂನು ಜಾರಿ ಮಾಡಿದ್ದರ ಬಗ್ಗೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಈ ವೇಳೆ ಅದು ತನ್ನ ನಿರ್ಣಯವನ್ನು ಸರಿಯಾದ ಕ್ರಮ ಎಂದು ಹೇಳಿಕೊಂಡಿದೆ.

ಅಫಿಡವಿಟ್​ನಲ್ಲಿ ವಿವರಿಸಿದಂತೆ, 2019ರ ಕಾಯಿದೆಯು ವಿವಾಹಿತ ಮುಸ್ಲಿಂ ಮಹಿಳೆಯರ ನ್ಯಾಯ ಮತ್ತು ಲಿಂಗ ಸಮಾನತೆಯನ್ನು ತಂದ ದೊಡ್ಡ ಬೆಳವಣಿಗೆಯಾಗಿದೆ. ಈ ಮೂಲಕ ಅವರೂ ಸಾಂವಿಧಾನಿಕ ಹಕ್ಕುಗಳನ್ನು ಹೊಂದಲು ಸಹಕಾರಿಯಾಗಿದೆ. ಮೂಲಭೂತ ಹಕ್ಕುಗಳ ತಾರತಮ್ಯ ನಿಲ್ಲಿಸಿ, ಸಬಲೀಕರಣದ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿದೆ.

ವೈವಾಹಿಕ ವ್ಯವಸ್ಥೆಗೆ ಮಾರಕ: ತ್ರಿವಳಿ ತಲಾಖ್​​ನಿಂದ ಮುಸ್ಲಿಂ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ವಿವಾಹ ಪದ್ಧತಿ, ಸಾಮಾಜಿಕವಾಗಿಯೂ ತ್ರಿವಳಿ ತಲಾಖ್​ ಮಾರಕ ವ್ಯವಸ್ಥೆಯಾಗಿದೆ. ಅದನ್ನು ನಿರ್ಮೂಲನೆ ಮಾಡುವುದು ಇಂದಿನ ಅಗತ್ಯ ಎಂದು ಕೇಂದ್ರ ತಿಳಿಸಿದೆ.

ತ್ರಿವಳಿ ತಲಾಖ್​​ ಸಂತ್ರಸ್ತರು ಪೊಲೀಸರನ್ನು ಸಂಪರ್ಕಿಸುವುದು ಬಿಟ್ಟರೆ ಅವರಿಗೆ ಬೇರೆ ಹಾದಿ ಇಲ್ಲ. ಕಾನೂನಿನಲ್ಲಿ ಆ ಮಹಿಳೆಯ ಪತ್ನಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲೂ ಯಾವುದೇ ನಿಯಮಗಳಿಲ್ಲ. ಇದರ ವಿರುದ್ಧ ಕ್ರಮ ಜರುಗಿಸಲು ಪೊಲೀಸರೂ ಅಸಹಾಯಕರಾಗಿದ್ದರು. ಇಂತಹ ಅವ್ಯವಸ್ಥೆಯನ್ನು ತಡೆಯಲು ಕಟ್ಟುನಿಟ್ಟಿನ ನಿಯಮ ಅಗತ್ಯವಿದೆ ಎಂದು ಸಮರ್ಥಿಸಿಕೊಂಡಿದೆ.

ತಲಾಖ್​​ ಕ್ರಿಮಿನಲ್​ ಅಪರಾಧದ ವಿರುದ್ಧ ಅರ್ಜಿ: ತ್ರಿವಳಿ ತಲಾಖ್​ ನೀಡುವುದನ್ನು ಕ್ರಿಮಿನಲ್​ ಅಪರಾಧ ಎಂದು ಪರಿಗಣಿಸುವುದರ ವಿರುದ್ಧ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಸಮಸ್ತ ಕೇರಳ ಜಮೈತ್​​ ಉಲೇಮಾದಿಂದ ಈ ಅರ್ಜಿ ಸಲ್ಲಿಕೆಯಾಗಿದೆ. ಸುಪ್ರೀಂ ಕೋರ್ಟ್​ ತೀರ್ಪೊಂದರಲ್ಲಿ ತ್ರಿವಳಿ ತಲಾಖ್​ ಅನ್ನೇ ಅಮಾನ್ಯ ಮಾಡಿದೆ. ಹೀಗಾಗಿ ಅದನ್ನು ಕೇಂದ್ರ ಸರ್ಕಾರ ಅಪರಾಧ ಎಂದು ಪರಿಗಣಿಸಿ ಕಾನೂನು ರೂಪಿಸಿದೆ. ಅಮಾನ್ಯವಾಗಿರುವ ಪದ್ಧತಿ ಅಪರಾಧವಲ್ಲ ಎಂದು ಅರ್ಜಿದಾರರ ವಾದವಾಗಿದೆ.

ಹೀಗಾಗಿ ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಇದೀಗ ಕೇಂದ್ರ ಸರ್ಕಾರ ತ್ರಿವಳಿ ತಲಾಖ್​ ಅನ್ನು ಅಪರಾಧ ಎಂದು ಪರಿಗಣಿಸಲು ಇರುವ ಕಾರಣಗಳನ್ನು ಅಫಿಡವಿಟ್​​ನಲ್ಲಿ ಉಲ್ಲೇಖಿಸಿ, ಜಾರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧಕ್ಕೆ ವರ್ಷ... ಶೇಕಡಾ 82ರಷ್ಟು ಇಳಿಕೆ ಕಂಡ ಪ್ರಕರಣಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.