ಹೈದರಾಬಾದ್: ಭಾರತ್ ಬಯೋಟೆಕ್ ಅಧ್ಯಕ್ಷ ಕೃಷ್ಣ ಎಲ್ಲಾ ಅವರು ಭಾರತೀಯ ಲಸಿಕೆ ತಯಾರಕರ ಸಂಘದ (ಐವಿಎಂಎ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಐವಿಎಂಎ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. ಅವರು ಎರಡು ವರ್ಷಗಳ ಕಾಲ ಈ ಅಧ್ಯಕ್ಷ ಸ್ಥಾನದಲ್ಲಿರಲಿದ್ದಾರೆ ಎಂದು ಐವಿಎಂಎ ಸ್ಪಷ್ಟಪಡಿಸಿದೆ. ಮಾಜಿ ಅಧ್ಯಕ್ಷ ಆದರ್ ಸಿ. ಪೂನಾವಾಲಾ ಅವರಿಂದ ಕೃಷ್ಣ ಎಲ್ಲಾ ಅಧಿಕಾರ ಸ್ವೀಕರಿಸಿದರು.
ಬಯೋಲಾಜಿಕಲ್ ಇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಮಹಿಮಾ ದಾಟ್ಲಾ ಅವರು ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೆ, ಭಾರತ್ ಬಯೋಟೆಕ್ ಸಿಎಫ್‌ಒ ಶ್ರೀನಿವಾಸ್ ಖಜಾಂಚಿಯಾಗಿ ಮತ್ತು ಡಾ.ಹರ್ಷವರ್ಧನ್ ಐವಿಎಂಎ ಮಹಾನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಎಲ್ಲಾ ಅವರು, ಪ್ರತಿಯೊಬ್ಬರಿಗೂ ಜೀವರಕ್ಷಕ ಲಸಿಕೆ ನೀಡುವ ಗುರಿ ಹೊಂದಲಾಗಿದೆ'' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿ ಭೂಮಿಗೆ ಅಪ್ಪಳಿಸಿತೇ ಉಲ್ಕಾಶಿಲೆ? ರಾಜಸ್ಥಾನದ ಗಡಿ ಪ್ರದೇಶದಲ್ಲಿ ವಿಸ್ಮಯ - Astronomical Event In Barmer