ETV Bharat / bharat

ಸೀತೆಗಾಗಿ ಚೆನ್ನೈನಲ್ಲಿ ಬಾಳೆ ನಾರಿನ ಸೀರೆ ತಯಾರಿಕೆ: ವಿಶೇಷ ಸೀರೆ ಅಯೋಧ್ಯೆಗೆ ರವಾನೆ - ಸೀತಾ ಮಾತೆಯ ವಿಗ್ರಹ

20 ಅಡಿ ಉದ್ದ ಮತ್ತು ನಾಲ್ಕು ಅಡಿ ಅಗಲದ ಬಾಳೆ ನಾರಿನ ಸೀರೆಯನ್ನು ಸಂಪೂರ್ಣವಾಗಿ ಪ್ರಕೃತಿಯಿಂದ ದೊರೆತ ವಸ್ತುಗಳಿಂದಲೇ ತಯಾರಿಸಿರುವುದು ವಿಶೇಷ. ಈ ವಿಶೇಷ ನೈಸರ್ಗಿಕ ಬಾಳೆ ನಾರಿನ ಸೀರೆಯಲ್ಲಿ ಅಯೋಧ್ಯೆಯ ರಾಮಮಂದಿರ ಮತ್ತು ರಾಮ ಬಾಣ ಬಿಡುತ್ತಿರುವಂತಹ ಚಿತ್ರವನ್ನು ರಚಿಸಲಾಗಿದೆ.

Banana fiber made special saree for Sita devi in Ayodhya
ಅಯೋಧ್ಯೆ ರಾಮ ಮಂದಿರದ ಸೀತಾ ಮಾತೆಗೆ ಚೆನ್ನೈನಿಂದ ವಿಶೇಷ ಸೀರೆ
author img

By ETV Bharat Karnataka Team

Published : Jan 22, 2024, 5:53 PM IST

Updated : Jan 22, 2024, 9:50 PM IST

ಸೀತೆಗಾಗಿ ಚೆನ್ನೈನಲ್ಲಿ ಬಾಳೆ ನಾರಿನ ಸೀರೆ ತಯಾರಿಕೆ

ಚೆನ್ನೈ(ತಮಿಳುನಾಡು): ಅಯೋಧ್ಯೆಯಲ್ಲಿ ಇಂದು ಅದ್ಧೂರಿಯಾಗಿ ನಡೆದ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದವನ್ನು ಇಡೀ ದೇಶವೇ ಕಣ್ಣು ತುಂಬಿಕೊಂಡಿದೆ. ಶ್ರೀರಾಮ ಮಂದಿರ ಉದ್ಘಾಟನೆಗೆ ವಿವಿಧ ರಾಜ್ಯಗಳ ಸಂಗೀತ ವಾದ್ಯಗಳು ಮಂಗಳ ಧ್ವನಿ ಮೊಳಗಿಸಿವೆ. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಬೇರೆ ಬೇರೆ ಊರುಗಳಿಂದ ಒಂದೊಂದು ವಿಶೇಷ ವಸ್ತುಗಳನ್ನು ಕಳುಹಿಸಲಾಗಿದೆ. ಹೀಗೆ ಅಯೋಧ್ಯೆಯ ರಾಮ ಮಂದಿರದಲ್ಲಿರುವ ಸೀತಾ ಮಾತೆಯ ವಿಗ್ರಹಕ್ಕೆ ಉಡಿಸಲೆಂದು ಚೆನ್ನೈನ ಸಾಂಪ್ರದಾಯಿಕ ನೈಸರ್ಗಿಕ ನಾರು ನೇಯ್ಗೆ ಗ್ರೂಪ್, ವಿಶೇಷವಾಗಿ ಬಾಳೆ ನಾರಿನಿಂದ ತಯಾರಿಸಿದಂತಹ ಸೀರೆಯನ್ನು ವಿಮಾನ ಮೂಲಕ ಅಯೋಧ್ಯೆಗೆ ಕಳುಹಿಸಿದೆ.

20 ಅಡಿ ಉದ್ದ ಮತ್ತು ನಾಲ್ಕು ಅಡಿ ಅಗಲದ ಬಾಳೆ ನಾರಿನ ಸೀರೆಯನ್ನು ಸಂಪೂರ್ಣವಾಗಿ ಪ್ರಕೃತಿಯಿಂದ ದೊರೆತ ವಸ್ತುಗಳಿಂದಲೇ ತಯಾರಿಸಿರುವುದು ವಿಶೇಷ. ಈ ವಿಶೇಷ ನೈಸರ್ಗಿಕ ಬಾಳೆ ನಾರಿನ ಸೀರೆಯಲ್ಲಿ, ಅಯೋಧ್ಯೆ ರಾಮಮಂದಿರ ಮತ್ತು ರಾಮ ಬಾಣ ಬಿಡುತ್ತಿರುವಂತಹ ಚಿತ್ರವನ್ನು ರಚಿಸಲಾಗಿದೆ.

ನಾಟಿಯ ನೆಸವ್ ಗ್ರೂಪ್ ಮುಖ್ಯಸ್ಥ ಶೇಖರ್ ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, "ಈ ನೇಯ್ಗೆ ಕೆಲಸ ಮಾಡುತ್ತಿರುವವರಲ್ಲಿ ನಾವು ಮೂರನೇ ತಲೆಮಾರಿನವರು. ಹಿಂದಿನ ಕಾಲದಲ್ಲಿ ಸೀರೆ ನೇಯಲು ಹತ್ತಿಯನ್ನು ಬಳಸುತ್ತಿದ್ದೆವು. ಆದರೆ ಈಗ ವಿವಿಧ ವಸ್ತುಗಳಿಂದ ಸೀರೆಗಳನ್ನು ನೇಯಲಾಗುತ್ತದೆ. ರಾಮಾಯಣದಲ್ಲಿ ರಾಮನ ಪರಮ ಭಕ್ತ ಹನುಮಂತನು ಸೀತೆಗೆ ಬಾಳೆಹಣ್ಣಿನ ಸೀರೆಯನ್ನು ನೀಡಿದ ಉಲ್ಲೇಖವಿದೆ. ಹತ್ತಿಯಿಂದ ಸೀರೆ ನೇಯುತ್ತಿದ್ದ ನಾವು ನಂತರ ನೈಸರ್ಗಿಕವಾಗಿ ದೊರೆಯುವ ಬಾಳೆ ಸಸಿಗಳ ನಾರಿನಿಂದ ಸೀರೆ ತಯಾರಿಸುವುದನ್ನು ಕಲಿತು, ಇದೀಗ ಸಂಪೂರ್ಣವಾಗಿ ಕೈಯಿಂದಲೇ ಸೀರೆ ನೇಯುತ್ತಿದ್ದೇವೆ." ಎಂದು ತಿಳಿಸಿದರು.

ಕಳೆದ 12 ವರ್ಷಗಳಿಂದ ಹಣ್ಣಿನ ತ್ಯಾಜ್ಯದಿಂದ ಬಣ್ಣ ಮತ್ತು ಬಿದಿರು, ಬಾಳೆಗಿಡ, ತೆಂಗಿನಕಾಯಿ ಮುಂತಾದವುಗಳ ನಾರು ಬಳಸಿ ಸೀರೆಗಳನ್ನು ತಯಾರಿಸುತ್ತಿದ್ದೇವೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಏನಾದರೂ ಕೊಡಬೇಕು ಎಂದು ಕಳೆದ ಎರಡ್ಮೂರು ತಿಂಗಳುಗಳಿಂದ ಯೋಚಿಸುತ್ತಿದ್ದೆವು. ಆಗ ನ್ಯಾಚುರಲ್ ಫೈಬರ್ ವೀಯಿಂಗ್ ಗ್ರೂಪ್​ನ ಮಹಿಳೆಯರೊಂದಿಗೆ ಸಮಾಲೋಚಿಸಿ, ರಾಮಮಂದಿರದಲ್ಲಿ ಇರಿಸಲಾಗಿರುವ ಸೀತಾದೇವಿ ಪ್ರತಿಮೆಗೆ ನೈಸರ್ಗಿಕ ನಾರಿನ ಸೀರೆ ನೀಡಲು ನಿರ್ಧರಿಸಲಾಯಿತು. ಈ ಕಾರಣಕ್ಕಾಗಿಯೇ ಕಳೆದ 10 ದಿನಗಳಿಂದ ಹಗಲಿರುಳು ಬಾಳೆ ನಾರುಗಳನ್ನು ಸಿದ್ಧಪಡಿಸಿ, ಸುಮಾರು 15 ದಿನಗಳಲ್ಲಿ ರಾಮಮಂದಿರದ ಚಿತ್ರವಿರುವ ನೈಸರ್ಗಿಕ ಶೈಲಿಯ ಸೀರೆಯನ್ನು ನೇಯ್ದು, ಸೀರೆಯ ಮೇಲೆ ರಾಮ ಬಾಣ ಬಿಡುತ್ತಿರುವ ಚಿತ್ರವನ್ನೂ ಬಿಡಿಸಿದೆವು. ಈ ಸೀರೆಯನ್ನು ಸಂಪೂರ್ಣವಾಗಿ ಬಾಳೆ ನಾರು ಮತ್ತು ರೇಷ್ಮೆಯಿಂದ ತಯಾರಿಸಲಾಗಿದೆ. 4 ಅಡಿ ಅಗಲ ಮತ್ತು 20 ಅಡಿ ಉದ್ದದ ಈ ಸೀರೆಗೆ ಯಾವುದೇ ಕೆಮಿಕಲ್​ ಬಣ್ಣವನ್ನು ಬೆರೆಸದೆ ನೈಸರ್ಗಿಕವಾಗಿ ತಯಾರಿಸಲಾಗಿದೆ" ಎಂದು ಹೇಳಿದರು.

ಅನಕಾಪುತ್ತೂರಿನಲ್ಲಿರುವ ನ್ಯಾಚುರಲ್ ಫೈಬರ್ ವೀಯಿಂಗ್ ಗ್ರೂಪ್ ಕಳೆದ 12 ವರ್ಷಗಳಿಂದ ಬಾಳೆಹಣ್ಣು, ಬಿದಿರು, ಕಳ್ಳಿ ಮತ್ತು ಅನಾನಸ್‌ನಿಂದ ತೆಗೆದ ನೈಸರ್ಗಿಕ ನಾರನ್ನು ಬಳಸಿ ಬಹು ಬಣ್ಣದ ಸೀರೆಗಳ ನೇಯ್ಗೆಯಲ್ಲಿ ತೊಡಗಿಸಿಕೊಂಡಿದೆ. ತ್ಯಾಜ್ಯ ಉತ್ಪನ್ನಗಳಿಂದ, ತರಕಾರಿ ಮತ್ತು ಹಣ್ಣಿನ ಸಿಪ್ಪೆಗಳಿಂದ ಬಣ್ಣಗಳನ್ನು ತೆಗೆದು ಸೀರೆಗಳನ್ನು ತಯಾರಿಸಲಾಗುತ್ತದೆ.

ಬೇವು, ಅರಿಶಿನ, ಶ್ರೀಗಂಧ, ಸುಣ್ಣ, ಇದ್ದಿಲು, ಹಣ್ಣುಗಳು, ತರಕಾರಿಗಳು, ತೊಗಟೆಯಿಂದ ಸೀರೆಗಳಿಗೆ ಬೇಕಾದಂತಹ ಬಣ್ಣಗಳನ್ನು ತಯಾರಿಸಲಾಗುತ್ತದೆ. ಆ ಬಣ್ಣಗಳಲ್ಲಿ ನಾರುಗಳನ್ನು ನೆನೆಸಿಟ್ಟು ಅನೇಕ ಬಣ್ಣಗಳ ಸೀರೆಗಳನ್ನು ನೇಯಲಾಗುತ್ತದೆ. ಈ ಸೀರೆಗಳಿಗೆ ಯಾವುದೇ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ, ಹಾಗಾಗಿ ಈ ಸೀರೆಗಳು ದೇಹಕ್ಕೂ ತುಂಬಾ ತಂಪಾಗಿರುತ್ತವೆ. ಇದಲ್ಲದೆ, ಗಿಡಮೂಲಿಕೆಗಳ ನಾರುಗಳಿಂದ ನೇಯ್ದ ಸೀರೆಗಳು ಚರ್ಮ ರೋಗಗಳನ್ನು ಗುಣಪಡಿಸುತ್ತವೆ ಎಂದು ಈ ತಂಡದ ಸದಸ್ಯರು ಹೇಳುತ್ತಾರೆ.

ಅನಕಪುತ್ತೂರು ನ್ಯಾಚುರಲ್ ಫೈಬರ್ ವೀಯಿಂಗ್ ಗ್ರೂಪ್​ನ ನೇಕಾರರು ಈ ಕೆಲಸಕ್ಕಾಗಿ ಅನೇಕ ಪ್ರಮಾಣಪತ್ರಗಳನ್ನು ಸಹ ಪಡೆದಿದ್ದಾರೆ. ರಾಷ್ಟ್ರೀಯ ಬಾಳೆ ಸಂಶೋಧನಾ ಸಂಸ್ಥೆಯಿಂದ ಭಾರತದಲ್ಲಿ ಮೊದಲ ಬಾರಿಗೆ ಈ ಗ್ರೂಪ್​ನವರು ಬಾಳೆ ನಾರಿನಿಂದ ಸೀರೆ ನೇಯ್ಗೆಗಾಗಿ ಪ್ರಮಾಣಪತ್ರಗಳು ಮತ್ತು ಪದಕಗಳನ್ನು ಪಡೆದವರು. ನೈಸರ್ಗಿಕ ನಾರುಗಳಿಂದ ಸೀರೆಯನ್ನು ತಯಾರಿಸಲು ಸುಮಾರು ಮೂರು ದಿನಗಳು ಬೇಕಾಗಿದ್ದು, 1,200 ರಿಂದ 7,500 ರೂ.ವರೆಗೆ ಬೆಲೆ ಬಾಳುತ್ತವೆ.

ಇದನ್ನೂ ಓದಿ: ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ

Last Updated : Jan 22, 2024, 9:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.