ಹೈದರಾಬಾದ್: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಕ್ಟೋಬರ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ, ದೇಶದ ವಿವಿಧ ಬ್ಯಾಂಕ್‌ಗಳಿಗೆ 15 ದಿನಗಳು ರಜೆ ಇರುತ್ತದೆ. ಇವುಗಳಲ್ಲಿ ಕೆಲವು ರಾಷ್ಟ್ರೀಯ ರಜಾದಿನಗಳು ಮತ್ತು ಇನ್ನಿತರ ಸುಟ್ಟಿಗಳು ಪ್ರಾದೇಶಿಕ ರಜಾದಿನಗಳಾಗಿವೆ. ಆದ್ದರಿಂದ, ಗ್ರಾಹಕರು ಈ ರಜಾದಿನಗಳನ್ನು ನೆನಪಿನಲ್ಲಿಟ್ಟುಕೊಂಡು ಅವರ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ಯೋಜಿಸಿದರೆ ಉತ್ತಮ.
ಅಕ್ಟೋಬರ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ:
- ಅಕ್ಟೋಬರ್ 1 (ಮಂಗಳವಾರ): ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಹಂತದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆ ದಿನ ಜಮ್ಮುವಿನ ಬ್ಯಾಂಕ್‌ಗಳಿಗೆ ರಜೆ.
- ಅಕ್ಟೋಬರ್ 2 (ಬುಧವಾರ): ಮಹಾತ್ಮ ಗಾಂಧಿ ಜಯಂತಿ ಮತ್ತು ಮಹಾಲಯ ಅಮಾವಾಸ್ಯೆಯ ಸಂದರ್ಭದಲ್ಲಿ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ರಜೆ.
- ಅಕ್ಟೋಬರ್ 3 (ಗುರುವಾರ): ನವರಾತ್ರಿ ಪ್ರಯುಕ್ತ ರಾಜಸ್ಥಾನದಲ್ಲಿ ಬ್ಯಾಂಕ್ ರಜೆ.
- ಅಕ್ಟೋಬರ್ 6 (ಭಾನುವಾರ)
- ಅಕ್ಟೋಬರ್ 10 (ಗುರುವಾರ): ದುರ್ಗಾ ಪೂಜೆ/ದಸರಾ ಸಂದರ್ಭದಲ್ಲಿ ತ್ರಿಪುರಾ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಬಂಗಾಳದಲ್ಲಿ ಬ್ಯಾಂಕ್‌ಗಳಿಗೆ ರಜೆ.
- ಅಕ್ಟೋಬರ್ 11 (ಶುಕ್ರವಾರ): ದಸರಾ, ಆಯುಧ ಪೂಜೆ ಮತ್ತು ದುರ್ಗಾಷ್ಟಮಿ ಪ್ರಯುಕ್ತ ಬ್ಯಾಂಕ್ ರಜೆ.
- ಅಕ್ಟೋಬರ್ 12 (ಎರಡನೇ ಶನಿವಾರ)
- ಅಕ್ಟೋಬರ್ 13 (ಭಾನುವಾರ)
- ಅಕ್ಟೋಬರ್ 14 (ಸೋಮವಾರ): ದುರ್ಗಾ ಪೂಜೆ (ದಾಸೈನ್) ಪ್ರಯುಕ್ತ ಸಿಕ್ಕಿಂನಲ್ಲಿ ಬ್ಯಾಂಕ್‌ಗಳಿಗೆ ರಜೆ.
- ಅಕ್ಟೋಬರ್ 16 (ಬುಧವಾರ): ಲಕ್ಷ್ಮಿ ಪೂಜೆ ಪ್ರಯುಕ್ತ ತ್ರಿಪುರಾ ಮತ್ತು ಬಂಗಾಳ ರಾಜ್ಯಗಳಲ್ಲಿ ಬ್ಯಾಂಕ್ ರಜೆ.
- ಅಕ್ಟೋಬರ್ 17 (ಗುರುವಾರ): ಮಹರ್ಷಿ ವಾಲ್ಮೀಕಿ ಜಯಂತಿ/ ಕತಿ ಬಿಹು ಪ್ರಯುಕ್ತ ಕರ್ನಾಟಕ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶದ ಬ್ಯಾಂಕ್‌ಗಳಿಗೆ ರಜೆ.
- ಅಕ್ಟೋಬರ್ 20 (ಭಾನುವಾರ)
- ಅಕ್ಟೋಬರ್ 26 (ಶನಿವಾರ): ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ವಿಲೀನವಾದ ದಿನ ಪ್ರಯುಕ್ತ ಜಮ್ಮು ಮತ್ತು ಶ್ರೀನಗರದ ಬ್ಯಾಂಕುಗಳಿಗೆ ರಜೆ.
- ಅಕ್ಟೋಬರ್ 27 (ಭಾನುವಾರ)
- ಅಕ್ಟೋಬರ್ 31 (ಗುರುವಾರ): ದೀಪಾವಳಿ/ ನರಕ ಚತುರ್ದಶಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ದಿನ ಬ್ಯಾಂಕ್ ರಜೆ.
ರಜಾದಿನಗಳಲ್ಲಿ ಹಣಕಾಸಿನ ವಹಿವಾಟು ನಡೆಸುವುದು ಹೇಗೆ?: 15 ದಿನಗಳು ಬ್ಯಾಂಕ್ ರಜೆ ಇದ್ದರೂ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಮುಂದುವರಿಯುತ್ತವೆ. ಅಲ್ಲದೆ, ಯುಪಿಐ ಮತ್ತು ಎಟಿಎಂ ಸೇವೆಗಳು ಸಹ ಎಂದಿನಂತೆ ನಡೆಯಲಿವೆ. ಆದ್ದರಿಂದ ನೀವು ಬ್ಯಾಂಕ್‌ಗಳಿಗೆ ಹೋಗದೆಯೇ ನಿಮ್ಮ ಹಣಕಾಸಿನ ವಹಿವಾಟುಗಳನ್ನು ಸುಲಭವಾಗಿ ನಿರ್ವಹಿಸಬಹುದು.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಶಾಲೆಗಳಿಗೆ ದಸರಾ ರಜೆ ಘೋಷಣೆ; 17 ದಿನ ಮಕ್ಕಳಿಗೆ ಹಾಲಿಡೇಸ್ - Dasara holiday announced