ETV Bharat / bharat

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೆಚ್ಚಿದ ಪ್ರತಿಭಟನೆ ಕಿಚ್ಚು: ಮತ್ತೆ ಸರ್ಕಾರದ ವಿರುದ್ಧ ಬಹೃತ್​ ಮೆರವಣಿಗೆ - Anti government march rocks

ಪಾಕಿಸ್ತಾನ ಸರ್ಕಾರ ಮತ್ತು ಆಜಾದ್ ಜಮ್ಮು ಮತ್ತು ಕಾಶ್ಮೀರದ (ಎಜೆಕೆ) ಶಾಸಕಾಂಗ ಸರ್ಕಾರದ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಾರ್ವಜನಿಕ ಕ್ರಿಯಾ ಸಮಿತಿಯ (ಪಿಎಸಿ) ಸಾವಿರಾರು ಜನರು ಬಹೃತ್​ ಪ್ರತಿಭಟನಾ ಮೆರವಣಿಗೆ ನಡೆಸಿದರು.

ANTI GOVERNMENT MARCH ROCKS PUBLIC ACTION COMMITTEE  PAKISTAN
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಕಾರ ವಿರುದ್ಧ ಬಹೃತ್​ ಮೆರವಣಿಗೆ (IANS)
author img

By ETV Bharat Karnataka Team

Published : Jun 15, 2024, 11:14 AM IST

ಇಸ್ಲಾಮಾಬಾದ್ (ಪಾಕಿಸ್ತಾನ): ವಿದ್ಯುತ್ ದರ ಇಳಿಕೆ, ಹಿಟ್ಟಿನ ಚೀಲಗಳ ಸಬ್ಸಿಡಿ ಬೆಲೆ ಏರಿಕೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸವಲತ್ತುಗಳ ಮೇಲಿನ ಕಡಿತದ ಬೇಡಿಕೆಗಳ ಮೇಲೆ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿ ಮತ್ತೆ ಹೋರಾಟ ನಡೆದಿದೆ. ಸಾರ್ವಜನಿಕ ಕ್ರಿಯಾ ಸಮಿತಿಯ (ಪಿಎಸಿ) ಸಾವಿರಾರು ಜನರು, ಪಾಕಿಸ್ತಾನ ಸರ್ಕಾರ ಮತ್ತು ಆಜಾದ್ ಜಮ್ಮು ಮತ್ತು ಕಾಶ್ಮೀರದ (ಎಜೆಕೆ) ಶಾಸಕಾಂಗ ಸರ್ಕಾರದ ವಿರುದ್ಧ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಈ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸರ್ಕಾರವು ತಾನು ನೀಡಿರುವ ಭರವಸೆಗಳನ್ನು ಪೂರೈಸಬೇಕು ಎಂದು ಆಗ್ರಹಿಸಿದ ಹಲವಾರು ಪ್ರತಿಭಟನಾಕಾರರು, ಮೆರವಣಿಗೆಯನ್ನು ಪೂಂಚ್ ಪ್ರದೇಶದಿಂದ ಪ್ರಾರಂಭಿಸಿದರು. ಕೋಟ್ಲಿ ಮಾರ್ಗವಾಗಿ ವಿವಿಧ ಪ್ರದೇಶಗಳಲ್ಲಿ ಹಾದು ಹೋದಂತೆ ದೊಡ್ಡದಾಗಿ ಬೆಳೆಯುತ್ತಾ ಸಾಗಿತು. ಜೊತೆಗೆ ದಾರಿ ಮಧ್ಯದಲ್ಲೇ ಅನೇಕ ಜನರು ಮೆರವಣಿಗೆಯಲ್ಲಿ ಸೇರಿಕೊಂಡು ಪಾಕ್​ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಸ್ವಾತಂತ್ರ್ಯದ ಪರ ಘೋಷಣೆಗಳನ್ನು ಕೂಗಿದರು.

"ಕಳೆದ ಬಾರಿ ನಾವು ಪ್ರತಿಭಟಿಸಿದಾಗ ಸರ್ಕಾರವು ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅವರು ವಿದ್ಯುತ್ ದರ ಕಡಿತ ಮಾಡುವುದಾಗಿ ಹೇಳಿ ಭರವಸೆ ನೀಡಿದ್ದರು. ಆದರೆ, ಅದೆಲ್ಲವೂ ಸುಳ್ಳು ಮತ್ತು ವಂಚನೆಯಾಗಿದೆ. ಏಕೆಂದರೆ, ಎಲ್ಲ ಕಾಶ್ಮೀರಿಗಳು ಈ ತಿಂಗಳು ತಮ್ಮ ವಿದ್ಯುತ್‌ನಲ್ಲಿ ಅದೇ ಹೆಚ್ಚಿನ ಯೂನಿಟ್ ದರಗಳೊಂದಿಗೆ ತಮ್ಮ ಬಿಲ್‌ಗಳನ್ನು ಸ್ವೀಕರಿಸಿದ್ದಾರೆ'' ಎಂದು ಪಾಲಂದ್ರಿಯ ಪ್ರತಿಭಟನಾಕಾರರೊಬ್ಬರು ತಮ್ಮ ಅಳಲು ತೋಡಿಕೊಂಡರಲ್ಲದೇ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದರು.

"ನಮ್ಮ ನಾಯಕರು ಮತ್ತು ಬೆಂಬಲಿಗರನ್ನು ಬಂಧಿಸಿದ್ದಾರೆ. ಅವರು ನಮ್ಮ ಕನಿಷ್ಠ 200 ಜನರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಆಕ್ರಮಣವನ್ನು ನಾವು ಸಹಿಸುವುದಿಲ್ಲ'' ಎಂದು ಕಿಡಿಕಾರಿದರು. ಬಂಧಿತರಾದ ಅನೇಕ ಜನರಲ್ಲಿ ಅಮಾನ್ ಕಾಶ್ಮೀರಿಯಂತಹ ಪ್ರಭಾವಿ ರಾಷ್ಟ್ರೀಯತಾವಾದಿ ನಾಯಕರು ಸೇರಿದ್ದಾರೆ. ಅಮಾನ್‌ನನ್ನು ಸಹ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅಮಾನ್​ ಸೇರಿದಂತೆ ಪಾಕ್ ಆಕ್ರಮಿತ ಕಾಶ್ಮೀರದ ವಿವಿಧ ಭಾಗಗಳಿಂದ ನೂರಾರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

"ಸರ್ಕಾರದ ವಂಚನೆ ಮತ್ತು ಸುಳ್ಳು ಒಪ್ಪಂದದ ವಿರುದ್ಧ ಅವರು ಧ್ವನಿ ಎತ್ತಿದ್ದರಿಂದ ಅವರು ನಮ್ಮ ಜನರನ್ನು ಬಂಧಿಸಿದ್ದಾರೆ. ಎಲ್ಲಾ ಬಂಧಿತರನ್ನು ಬಿಡುಗಡೆ ಮಾಡುವವರೆಗೆ ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ರಾಜಧಾನಿ ಮುಜಫರಾಬಾದ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸುತ್ತೇವೆ'' ಎಂದು ಪ್ರತಿಭಟನಾಕಾರರೊಬ್ಬರು ಹೇಳಿದರು.

ಇದನ್ನೂ ಓದಿ: ಮೋಹನ್​ ಭಾಗವತ್​ ಭೇಟಿ ಮಾಡಲಿರುವ ಸಿಎಂ ಯೋಗಿ: ಕುತೂಹಲ ಕೆರಳಿಸಿದ ಭೇಟಿ - CM Yogi to meet RSS chief

ETV Bharat Logo

Copyright © 2024 Ushodaya Enterprises Pvt. Ltd., All Rights Reserved.