ಹೈದರಾಬಾದ್: ಬಹು ನಿರೀಕ್ಷಿತ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಶುಭ ವಿವಾಹ್ ಜುಲೈ 12 ರಂದು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಮೇ ತಿಂಗಳಿನಿಂದ ಸುದ್ದಿ ಸಂಸ್ಥೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವಿವಾಹ ಆಮಂತ್ರಣ ಪತ್ರಿಕೆಯ ಇಣುಕು ನೋಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ ಜನರಲ್ಲಿ ಕುತೂಹಲ ಹೆಚ್ಚಾಗಿದೆ.
ಇನ್ನು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮದುವೆಯ ವೇಳಾಪಟ್ಟಿ ಬಹಿರಂಗಗೊಂಡಿದ್ದು, ಮೂರು ದಿನಗಳ ಕಾಲ ವೈಭವದಿಂದ ವಿವಾಹ ಸಮಾರಂಭ ನೆರವೇರಲಿದೆ.
- ಜುಲೈ 12 ರಂದು ಶುಭ ವಿವಾಹ್ ನಡೆಯಲಿದ್ದು, ಅತಿಥಿಗಳು ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಲು ವಿನಂತಿಸಲಾಗಿದೆ.
- ಮರುದಿನ ಅಂದರೆ ಜುಲೈ 13 ರಂದು ಶುಭ ಆಶೀರ್ವಾದ್ ಸಮಾರಂಭ ನಡೆಯಲಿದೆ. ಅಲ್ಲಿ ಅತಿಥಿಗಳಿಗೆ ಭಾರತೀಯ ಔಪಚಾರಿಕ ಉಡುಪನ್ನು ಧರಿಸಲು ಕೋರಲಾಗಿದೆ.
- ಅಂತಿಮವಾಗಿ, ಜುಲೈ 14 ರಂದು, ಭಾರತೀಯ ಚಿಕ್ ಥೀಮ್ ಡ್ರೆಸ್ ಕೋಡ್‌ನೊಂದಿಗೆ ಮಂಗಲ್ ಉತ್ಸವ ಅಥವಾ ವಿವಾಹ ಆರತಕ್ಷತೆ ನಡೆಯಲಿದೆ.
ಜಾಮ್‌ನಗರದಲ್ಲಿ ಅಂತಾರಾಷ್ಟ್ರೀಯ ತಾರೆಯರಾದ ರಿಹಾನ್ನಾ ಮತ್ತು ಎಕಾನ್ ಮತ್ತು ಬ್ಯಾಕ್ಸ್ಟ್ರೀಟ್ ಬಾಯ್ಸ್, ಪಿಟ್ಬುಲ್ ಮತ್ತು ಆಂಡ್ರಿಯಾ ಬೊಸೆಲ್ಲಿ ಅವರು ವಿವಾಹಪೂರ್ವ ಉತ್ಸವಗಳಲ್ಲಿ ಪ್ರದರ್ಶನ ನೀಡಲಿದ್ದಾರೆ. ಮೂಲಗಳ ಪ್ರಕಾರ, ಮುಂಬೈ ವಿವಾಹದಲ್ಲಿ ಅಡೆಲೆ, ಡ್ರೇಕ್ ಮತ್ತು ಲಾನಾ ಡೆಲ್ ರೇ ಅವರ ಪ್ರದರ್ಶನ ನೀಡುವ ನಿರೀಕ್ಷೆಯಿದೆ, ಅವರ ಪ್ರದರ್ಶನಕ್ಕಾಗಿ ಮಾತುಕತೆಗಳು ನಡೆಯುತ್ತಿವೆ.
ಇನ್ನು ಅಂಬಾನಿ ಕುಟುಂಬವು ಜುಲೈ 2 ರಂದು 'ಸಮುಹ್ ವಿವಾಹ' (ಸಾಮೂಹಿಕ ವಿವಾಹ) ಅನ್ನು ಆಯೋಜಿಸಿತ್ತು. ಅಲ್ಲಿ ಪಾಲ್ಘರ್‌ನ 50 ಕ್ಕೂ ಹೆಚ್ಚು ಜೋಡಿಗಳು ಅದ್ಧೂರಿ ಸಮಾರಂಭದಲ್ಲಿ ಸಪ್ತಪದಿ ತುಳಿದಿದ್ದರು. ಮದುವೆಯಲ್ಲಿ ಪ್ರತಿ ವಧುವಿಗೆ ಮಂಗಳಸೂತ್ರ, ಮದುವೆಯ ಉಂಗುರಗಳು, ಮೂಗುತಿ, ಕಾಲುಂಗುರಗಳು ಸೇರಿದಂತೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ನೀಡಲಾಗಿತ್ತು. ಅವರ ಈ ಔದಾರ್ಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದಲ್ಲದೆ, ಅವರು 'ಸ್ತ್ರೀಧನ್' ಆಗಿ 1.01 ಲಕ್ಷ ರೂ.ಗಳ ಚೆಕ್ ಅನ್ನು ಸಹ ನೀಡಿದ್ದರು. ದಂಪತಿಗಳು ತಮ್ಮ ಹೊಸ ಜೀವನ ನಡೆಸಲು ಅಗತ್ಯವಾದ ದಿನಸಿ, ಗೃಹೋಪಯೋಗಿ ವಸ್ತುಗಳು ಮತ್ತು ಉಪಕರಣಗಳನ್ನು ಸಹ ವಿತರಿಸಲಾಗಿತ್ತು.