ETV Bharat / bharat

ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಕಿರುಚಿತ್ರ ನಿರ್ದೇಶಕನಿಂದ ಅತ್ಯಾಚಾರ ಆರೋಪ - Rape Case - RAPE CASE

ಕಿರುಚಿತ್ರ ನಿರ್ದೇಶಕನೊಬ್ಬ ತನ್ನ ಸ್ನೇಹಿತೆ ಮೇಲೆಯೇ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.

A software engineer was raped by a short film director in Hyderabad
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Aug 1, 2024, 2:08 PM IST

ಹೈದರಾಬಾದ್: ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್​ ಮೇಲೆ ಆಕೆಯ ಸ್ನೇಹಿತನೇ ಅತ್ಯಾಚಾರವೆಸಗಿದ ಘಟನೆ ನಗರದ ಗಚ್ಚಿಬೌಲಿಯಲ್ಲಿ ನಡೆದಿದೆ. ಕಿರುಚಿತ್ರ ನಿರ್ದೇಶಕ ಸಿದ್ಧಾರ್ಥ್ ವರ್ಮಾ ಅತ್ಯಾಚಾರವೆಸಗಿರುವ ಆರೋಪಿ. ಸಂತ್ರಸ್ತೆ ಯುವತಿ ಆತನ ಸ್ನೇಹಿತೆಯಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಯುವತಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಿದ್ಧಾರ್ಥ್ ವರ್ಮಾಗೆ ಇತ್ತೀಚೆಗೆ ಯುವತಿ ಪರಿಚಯವಾಗಿದ್ದಳು ಎಂದು ತಿಳಿದುಬಂದಿದೆ.

''ತನಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಆಕೆಯನ್ನು ನಂಬಿಸಿದ್ದ. ಬುಧವಾರ ರಾತ್ರಿ ಊಟಕ್ಕೆ ಮನೆಗೆ ಕರೆದಿದ್ದ ಸಿದ್ಧಾರ್ಥ್ ಈ ವೇಳೆ ತನಗೆ ಅಮಲು ಪದಾರ್ಥ ಬೆರೆಸಿದ ತಂಪು ಪಾನೀಯ ಕುಡಿಸಿದ್ದಾನೆ. ಬಳಿಕ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ'' ಎಂದು ಸಂತ್ರಸ್ತೆಯು ಗಚ್ಚಿಬೌಲಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಸಂತ್ರಸ್ತೆ ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ದೋಷ ನಿವಾರಣೆ ಪೂಜೆ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರ: ಪೂಜಾರಿಯ ಬಂಧನ - Rape on Girl

ETV Bharat Logo

Copyright © 2024 Ushodaya Enterprises Pvt. Ltd., All Rights Reserved.