ಹೈದರಾಬಾದ್: ಸರ್ಕಾರಿ ಉದ್ಯೋಗದ ಪರೀಕ್ಷೆ ಪಾಸಾಗಲು ಸಾಕಷ್ಟು ಪ್ರಯತ್ನಗಳು ಅತ್ಯವಶ್ಯಕ. ಈ ಉದ್ಯೋಗ ಎಂದರೆ ಅಲ್ಲಿ ಭಾರೀ ಪೈಪೋಟಿ ಇರುವುದು ಸಾಮಾನ್ಯ. ಸಮರ್ಪಣಾ ಮನೋಭಾವದಿಂದ ಅಧ್ಯಯನ ನಡೆಸಲೇಬೇಕು. ಒಂದು ಸರ್ಕಾರಿ ಉದ್ಯೋಗ ಸಿಗಲಿ ಎಂದು ಪರಿತಪಿಸುವವರ ನಡುವೆ ಇಲ್ಲೊಬ್ಬ ಗೃಹಿಣಿ ಮತ್ತು ಯುವತಿ ಏಕ ಕಾಲಕ್ಕೆ ನಾಲ್ಕು ಸರ್ಕಾರಿ ಉದ್ಯೋಗದ ಅವಕಾಶಗಳನ್ನು ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಆದರೆ ಈ ಮಹಿಳೆ ಕುಟುಂಬ ಮತ್ತು ಮಕ್ಕಳನ್ನ ನಿಭಾಯಿಸಿಕೊಂಡು ಈ ಯಶಸ್ಸು ಸಾಧಿಸಿದ್ದಾರೆ. ಇವರ ಜೊತೆಗೆ ಮತ್ತೊಬ್ಬ ಯುವತಿ ಕೂಡ ನಾಲ್ಕು ಉದ್ಯೋಗಗಳಿಗೆ ಆಯ್ಕೆಯಾಗಿದ್ದು, ಅವರ ಸಂತೋಷಕ್ಕೆ ಇದೀಗ ಪಾರವೇ ಇಲ್ಲದಂತಾಗಿದೆ.
ವರಂಗಲ್ ಜಿಲ್ಲೆಯ ಖಿಲಾ ವರಂಗಲ್ನ ಮಧ್ಯ ಕೋಟಾದ ಬಂಡಿ ಹಿಮ ಬಿಂದು ಈ ಸಾಧನೆ ಮಾಡಿದ ಗೃಹಿಣಿ. ಇವರು ಕಾಕತೀಯ ಯುನಿವರ್ಸಿಟಿಯಲ್ಲಿ ರಾಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಡಾ ಬಿಆರ್ ಅಂಬೇಡ್ಕರ್ ಓಪನ್ ಯುನಿವರ್ಸಿಟಿಯಲ್ಲಿ ಗ್ರಂಥಾಲಯ ವಿಜ್ಞಾನದಲ್ಲೂ ಪದವಿ ಪಡೆದುಕೊಂಡಿದ್ದಾರೆ.
ಇನ್ನು ಗೀಸುಕೊಂಡ ಮಂಡಲದ ಧರ್ಮಾರಾಂ ಗ್ರಾಮದ ಕೊಪ್ಪುಳ ಚೈತನ್ಯ ಕೂಡಾ ನಾಲ್ಕು ನೌಕರಿಗಳನ್ನು ಗಿಟ್ಟಿಸಿಕೊಂಡು ಸಾಧನೆ ಮಾಡಿದ್ದಾರೆ. ಈ ಇಬ್ಬರು ಕಳೆದ ವರ್ಷ ಬರೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾರಿ ಯಶಸ್ಸು ಪಡೆದುಕೊಂಡಿದ್ದಾರೆ.
ಸದ್ಯ ಈ ಪರೀಕ್ಷಾ ಫಲಿತಾಂಶ ಬಿಡುಗಡೆಯಾಗಿದೆ. ಇದರಲ್ಲಿ ಮೂರು ಉದ್ಯೋಗಗಳಿಗೆ ಮಹಿಳೆ ಮೆರಿಟ್ ಮೇಲೆ ಆಯ್ಕೆಯಾಗಿದ್ದಾರೆ. ಜೂನಿಯರ್, ಡಿಗ್ರಿ ಕಾಲೇಜ್ ಮತ್ತು ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಈ ಎಲ್ಲ ಉದ್ಯೋಗಗಳಲ್ಲಿ ಇದೀಗ ಅವರು, ಡಿಗ್ರಿ ಕಾಲೇಜಿನ ಅಧ್ಯಾಪಕ (ಅಸಿಸ್ಟೆಂಟ್ ಪ್ರೊಫೆಸರ್) ಹುದ್ದೆ ಆರಿಸಿಕೊಂಡಿದ್ದಾರೆ. ಈ ಉದ್ಯೋಗ ಸಂಬಂಧ ಇತ್ತೀಚಿಗೆ ಹೈದರಾಬಾದ್ನಲ್ಲಿ ನೇಮಕಾತಿ ಪತ್ರವನ್ನು ಕೂಡಾ ಪಡೆದಿದ್ದಾರೆ. ಈ ಪ್ರಕ್ರಿಯೆ ಮುಗಿಯುವ ಮುನ್ನ ಈ ಇಬ್ಬರು ಅಭ್ಯರ್ಥಿಗಳು ಇಂಟರ್ ಬೋರ್ಡ್ ವೃತ್ತಿಪರ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಗ್ರಂಥಾಲಯ ವಿಜ್ಞಾನ ಉದ್ಯೋಗಗಳಿಗಾಗಿ ನಡೆಸಿದ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ್ದರು.
ಕೊಪ್ಪುಲ ಚೈತನ್ಯ ಮಹಿಳಾ ವರ್ಗದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದು, ಸಾಮಾನ್ಯ ವರ್ಗದಲ್ಲಿ ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಹಿಮಬಿಂದು ಮಹಿಳಾ ವರ್ಗದಲ್ಲಿ 2 ಮತ್ತು ಸಾಮಾನ್ಯ ವರ್ಗದಲ್ಲಿ 36ನೇ ಸ್ಥಾನ ಪಡೆದಿದ್ದಾರೆ. ಇವರಿಬ್ಬರು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲೈಬ್ರರಿ ಸೈನ್ಸ್ ಹುದ್ದೆಯನ್ನು ಆರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಎಟ್ನಾದ ಜ್ವಾಲಾಮುಖಿ ಪರ್ವತ ಏರಿ ತ್ರಿವರ್ಣ ಧ್ವಜ ಹಾರಿಸಿದ ರಾಜಸ್ಥಾನದ ಧೋಲಿ ಮೀನಾ