ETV Bharat / bharat

ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ದುರಂತವೊಂದು ನಡೆದಿದೆ. ಶಂಕರಪಲ್ಲಿ ತಾಲೂಕಿನ ಟಂಗುಟೂರಿನಲ್ಲಿ ತಂದೆಯೇ ತನ್ನ ಮೂವರು ಮಕ್ಕಳನ್ನು ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

father killed children  committed suicide  Four died in Rangareddy district  ಮಕ್ಕಳನ್ನು ಕೊಂದು ಆತ್ಮಹತ್ಯೆ  ಆತ್ಮಹತ್ಯೆಗೆ ಶರಣಾದ ತಂದೆ
ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ
author img

By ETV Bharat Karnataka Team

Published : Mar 4, 2024, 2:45 PM IST

ರಂಗಾರೆಡ್ಡಿ (ತೆಲಂಗಾಣ): ಜಿಲ್ಲೆಯ ಶಂಕರಪಲ್ಲಿ ಮಂಡಲದ ಟಂಗುಟೂರಿನಲ್ಲಿ ದುರಂತ ಸಂಭವಿಸಿದೆ. ಮೂವರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮೋಕಿಲ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಏನಿದು ಪ್ರಕರಣ?: ಪೊಲೀಸರ ಪ್ರಕಾರ ನಿರತಿ ರವಿ (35) ಎಂಬ ವ್ಯಕ್ತಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ತೊಂದರೆಯಿಂದ ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಕಾಲ ಜಿಎಸ್​ಎನ್ ಫೌಂಡೇಶನ್ ಹೆಸರಿನಲ್ಲಿ ನೆಟ್ ವರ್ಕ್ ಮಾರ್ಕೆಟಿಂಗ್ ಮಾಡುತ್ತಿದ್ದರು. ಮನಿ ಸ್ಕೀಮ್​ ಮೂಲಕ ನಿಮಗೆ ಎರಡು ತಿಂಗಳಿಗೆ ಸಾವಿರಕ್ಕೆ 3000, ಲಕ್ಷಕ್ಕೆ 5 ಲಕ್ಷ ಕೊಡುವುದಾಗಿ ಹೇಳಿ ಆಪ್ತ ಸ್ನೇಹಿತರು, ಸಂಬಂಧಿಕರಿಂದ ಹಣ ಪಡೆದಿದ್ದರು.

ಈ ಸ್ಕೀಮ್​ನಲ್ಲಿ ತನ್ನ ಹಣ ಸಹಿತ ಎಲ್ಲರ ದುಡ್ಡ ಸಹ ಸೇರಿ ಸ್ಕೀಮ್ ಮ್ಯಾನೇಜರ್​ಗೆ ಕೊಟ್ಟಿದ್ದಾರೆ. ಒಂದು ವರ್ಷ ಕಳೆದರೂ ಹಣ ಸಿಗದ ಕಾರಣ ಜನರಿಗೆ ವಾಪಾಸ್​ ಕೊಡಲು ಸಾಧ್ಯವಾಗಿಲ್ಲ. ಸ್ಥಳೀಯರ ಒತ್ತಡ ಸಹಿಸಲಾಗದ ರವಿ ತಮ್ಮ ಕುಟುಂಬ ಸದಸ್ಯರೊಂದಿಗೆ ಟಂಗುಟೂರು ಗ್ರಾಮದಿಂದ ಶಂಕರಪಲ್ಲಿಗೆ ವಲಸೆ ಬಂದರು. ಈ ಕ್ರಮದಲ್ಲಿ ಭಾನುವಾರ ಹಣ ಪಾವತಿ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದೆ.

ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆ: ನಂತರ ಶಂಕರಪಲ್ಲಿಯಿಂದ ಮೂವರು ಮಕ್ಕಳೊಂದಿಗೆ ತನ್ನ ಮನೆಗೆ ಬಂದ ರವಿ ಇಂದು ಮುಂಜಾನೆ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಮೋಸ ಹೋಗಿದ್ದಷ್ಟೇ ಅಲ್ಲ ತನ್ನಿಂದ ಹಲವರಿಗೆ ಮೋಸ ಮಾಡಿದ್ದಾನೆ ಎಂದು ರವಿ ಮನನೊಂದಿದ್ದರು. ಇಷ್ಟು ಹಣ ಎಲ್ಲಿಂದ ತರುವುದು ಎಂದು ಅರ್ಥವಾಗದೇ ಕೊನೆಗೆ ಆತ್ಮಹತ್ಯೆಗೆ ಶರಣಾದರು.

ಆದರೆ, ನಾನೊಬ್ಬನೇ ಸತ್ತರೆ ನನ್ನ ಮಕ್ಕಳು ಅನಾಥರಾಗುತ್ತಾರೆ. ಅಷ್ಟೇ ಅಲ್ಲ ಸಾಲ ಕೊಟ್ಟವರೆಲ್ಲರೂ ಹಣಕ್ಕಾಗಿ ತನ್ನ ಮಕ್ಕಳನ್ನು ಪೀಡಿಸುತ್ತಾರೆ ಎಂದು ರವಿ ಭಾವಿಸಿದ್ದರು. ಹೀಗಾಗಿ ರವಿ ತನ್ನ ಮೂವರು ಮಕ್ಕಳನ್ನು ಮೊದಲು ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಮನಿ ಸ್ಕೀಮ್​​​​​​​​​​​ನಿಂದಾಗಿ ಅನೇಕರು ವಂಚನೆಗೆ ಒಳಗಾಗುತ್ತಿದ್ದಾರೆ. ಸಾವಿರಕ್ಕೆ ಎರಡು ಸಾವಿರ, ಒಂದು ಲಕ್ಷಕ್ಕೆ ಐದು ಲಕ್ಷ ಕೊಡುತ್ತೇವೆ ಎಂದು ಹೇಳುವವರ ಮಾತನ್ನು ನಂಬಬೇಡಿ. ಮೊದಲು ಎರಡ್ಮೂರು ಬಾರಿ ಹಣ ಕೊಟ್ಟು ನಂತರ ವಿಶ್ವಾಸ ಗಳಿಸಿ ದೊಡ್ಡ ಮೊತ್ತದ ಹಣದೊಂದಿಗೆ ಪರಾರಿಯಾಗುತ್ತಾರೆ. ಹಾಗಾಗಿ ಇಂತಹ ಯೋಜನೆಗಳ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಕೌಟುಂಬಿಕ ಕಲಹ, ಸಾಲಬಾಧೆ: ಇಬ್ಬರು ಆತ್ಮಹತ್ಯೆ, ಮಗನನ್ನು ರಕ್ಷಿಸಲು ಹೋದ ತಾಯಿಯೂ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.