ETV Bharat / bharat

ರಷ್ಯಾ ಸೇನೆಯಿಂದ 85 ಭಾರತೀಯರ ಬಿಡುಗಡೆ, ಉಳಿದ 20 ಮಂದಿಗಾಗಿ ಪ್ರಯತ್ನ: ಕೇಂದ್ರ ಸರ್ಕಾರ

ರಷ್ಯಾ ಸೇನೆಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯರ ಬಿಡುಗಡೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಷ್ಯಾ ಸೇನೆಯಿಂದ 85 ಭಾರತೀಯರ ಬಿಡುಗಡೆ
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ (ETV Bharat)
author img

By ANI

Published : Oct 22, 2024, 4:45 PM IST

ನವದೆಹಲಿ: ಯುದ್ಧ ಮಗ್ನವಾಗಿರುವ ರಷ್ಯಾದ ಸೇನೆ ಸೇರಿಕೊಂಡಿದ್ದವರ ಪೈಕಿ 85 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ 20 ಮಂದಿಯನ್ನು ಬಿಡಿಸಿಕೊಂಡು ಬರುವ ಪ್ರಯತ್ನ ಸಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

"ರಷ್ಯಾ ಸೇನೆಯ ಪರವಾಗಿ ಯುದ್ಧ ಮಾಡಲು ಅಕ್ರಮವಾಗಿ ಅಥವಾ ಒಪ್ಪಂದದ ಮೇರೆಗೆ ಸೇರಿಕೊಂಡ ಭಾರತೀಯರ ಬಿಡುಗಡೆಗೆ ಭಾರತ ಸರ್ಕಾರ ಮನವಿ ಮಾಡಿತ್ತು. ಅದಕ್ಕೆ ಸ್ಪಂದಿಸಿದ್ದ ರಷ್ಯಾ 85 ಭಾರತೀಯರನ್ನು ಸೇನೆಯಿಂದ ಬಿಡುಗಡೆ ಮಾಡಿದೆ" ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.

"ರಷ್ಯಾ ಅಧ್ಯಕ್ಷರ ಆಹ್ವಾನದ ಮೇರೆಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಜಾನ್‌ಗೆ ತೆರಳಲಿದ್ದಾರೆ. ಆ ದೇಶದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅವರೊಂದಿಗಿನ ಸಂವಾದದಲ್ಲಿ ಉಳಿದ ಭಾರತೀಯರ ಬಿಡುಗಡೆಗೆ ಪ್ರಸ್ತಾಪಿಸಲಾಗುವುದು. ರಷ್ಯಾವೂ ಇದಕ್ಕೆ ಸ್ಪಂದಿಸಿದೆ" ಎಂದು ತಿಳಿಸಿದರು.

"16ನೇ ಬ್ರಿಕ್ಸ್ ಶೃಂಗಸಭೆಯು ಬಹುಪಕ್ಷೀಯ ಸಾರಥ್ಯದಲ್ಲಿ ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆ ಕುರಿತು ಚರ್ಚೆ ನಡೆಯಲಿದೆ. ಆರ್ಥಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಆಡಳಿತ ಕ್ಷೇತ್ರಗಳಲ್ಲಿ ಸುಧಾರಣೆಗಳಿಗೆ ಬ್ರಿಕ್ಸ್ ಪ್ರಯತ್ನಿಸಲಿದೆ" ಎಂದರು.

ಪ್ರಧಾನಿ ಮೋದಿ ಅವರು ಜುಲೈ ತಿಂಗಳಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲಿ ಸೇನೆಯಲ್ಲಿರುವ ಭಾರತೀಯರ ಬಿಡುಗಡೆಗೆ ಪ್ರಸ್ತಾಪಿಸಿದ್ದರು. ಇದನ್ನು ಅವರು ಅಂಗೀಕರಿಸಿದ್ದರು. ಮಾಹಿತಿಯ ಪ್ರಕಾರ, 91ಕ್ಕೂ ಹೆಚ್ಚು ಭಾರತೀಯರು ರಷ್ಯಾ ಸೇನೆಯಲ್ಲಿ ಸೇರಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಯುದ್ಧದಲ್ಲಿ 21 ಮಂದಿ ಸಾವಿಗೀಡಾಗಿದ್ದಾರೆ. ಅವರ ಮೃತದೇಹಗಳನ್ನು ಕುಟುಂಬಸ್ಥರಿಗೆ ರವಾನಿಸಲಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಪ್ಯಾಲೆಸ್ಟೈನ್​ ಜನರಿಗೆ 30 ಟನ್ ಔಷಧ, ಆಹಾರ ಸಾಮಗ್ರಿ ರವಾನಿಸಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.