ETV Bharat / bharat

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಹೈಡ್ರಾಮ; ಸಂದೇಶಖಾಲಿ ಘಟನೆ ವಿರುದ್ಧ ಧ್ವನಿಯೆತ್ತಿದ್ದ 6 ಬಿಜೆಪಿ ಶಾಸಕರು ಅಮಾನತು - ಸಂದೇಶಖಾಲಿ

ಸಂದೇಶಖಾಲಿ ವಿಚಾರದ ಬಗ್ಗೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಹೈಡ್ರಾಮವೇ ನಡೆಯಿತು. 6 ಜನ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಲಾಗಿದೆ. ಮಹಿಳೆಯರ ಪರ ಧ್ವನಿ ಎತ್ತಿದ್ದಕ್ಕೆ 'ಉಡುಗೊರೆ' ಸಿಕ್ಕಿದೆ ಎಂದು ಬಿಜೆಪಿಯ ಸುವೆಂದು ಅಧಿಕಾರಿ ಹೇಳಿದರು.

BJP MLAs suspended  West Bengal assembly  Sandeshkhali unrest  ಸಂದೇಶಖಾಲಿ ವಿಚಾರ  ಬಿಜೆಪಿ ಶಾಸಕರು ಅಮಾನತು
ಸಂದೇಶಖಾಲಿ ವಿಚಾರ ವಿರುದ್ಧ ಧ್ವನಿಯೆತ್ತಿದ್ದ 6 ಬಿಜೆಪಿ ಶಾಸಕರು ಅಮಾನತು
author img

By PTI

Published : Feb 12, 2024, 1:46 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ವಿಧಾನಸಭೆಯಿಂದ ಆರು ಜನ ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಇದರಲ್ಲಿ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ, ಅಗ್ನಿಮಿತ್ರ ಪಾಲ್, ಶಂಕರ್ ಘೋಷ್, ತಾಪ್ಸಿ ಮಂಡಲ್, ಬಂಕಿಮ್ ಘೋಷ್ ಮತ್ತು ಮಿಹಿರ್ ಗೋಸ್ವಾಮಿ ಸೇರಿದ್ದಾರೆ. ಸಂದೇಶಖಾಲಿ ಘಟನೆ ವಿರುದ್ಧ ಮಾತನಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶಾಸಕರ ಅಮಾನತು ವಿಧಾನಸಭೆಯೊಳಗೆ ಅಶಿಸ್ತು ಮತ್ತು ಗದ್ದಲದ ವರ್ತನೆಗೆ ಕಾರಣ ಎಂದು ವರದಿಯಾಗಿದೆ.

ರಾಜ್ಯ ವಿಧಾನಸಭೆಯ ನಿಯಮ 348ರ ಅಡಿಯಲ್ಲಿ ಶಾಸಕರನ್ನು ಅಮಾನತು ಮಾಡಲಾಗಿದೆ. ಈ ಪ್ರಸ್ತಾವನೆಯನ್ನು ಪಶ್ಚಿಮ ಬಂಗಾಳ ಸಂಸದೀಯ ವ್ಯವಹಾರಗಳ ಸಚಿವ ಸೋವಂದೇಬ್ ಚಟ್ಟೋಪಾಧ್ಯಾಯ ಅವರು ಮಂಡಿಸಿದರು. ಇದಾದ ಬಳಿಕ ಶಾಸಕರ ಅಮಾನತು ಪ್ರಸ್ತಾವನೆ ಅಂಗೀಕಾರವಾಯಿತು. ಆರು ಜನ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಮತ್ತು ಸಚಿವ ಸೋವಂದೇವ್ ಚಟ್ಟೋಪಾಧ್ಯಾಯ ಹೇಳಿದ್ದಾರೆ. ಪ್ರಸಕ್ತ ಅಧಿವೇಶನದಿಂದ ಉಳಿದ ಅವಧಿವರೆಗೆ ಶಾಸಕರನ್ನು ಅಮಾನತುಗೊಳಿಸಲಾಗಿದೆ.

ಸಂದೇಶಖಾಲಿ ವಿರುದ್ಧ ಮಾತನಾಡಿದ್ದಕ್ಕೆ 'ಉಡುಗೊರೆ' ಸಿಕ್ಕಿದೆ: ಪ್ರತಿಪಕ್ಷ ನಾಯಕ ಸುವೆಂದು ಅಧಿಕಾರಿ ಮಾತನಾಡಿ, ಮಹಿಳೆಯರ ಗೌರವಕ್ಕಾಗಿ ಬಿಜೆಪಿ ಸದಾ ಧ್ವನಿ ಎತ್ತುತ್ತದೆ. ಸಂದೇಶಖಾಲಿಯಲ್ಲಿ ನಡೆದ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೆವು. ಸದನದ ಬಾವಿಗಿಳಿದು ಧ್ವನಿ ಎತ್ತಿದೆವು. ಆದರೆ, ಪ್ರಸ್ತುತ ವಿಧಾನಸಭೆಯ ಅಧಿವೇಶನದಿಂದ ನಮ್ಮನ್ನು ಅಮಾನತುಗೊಳಿಸಲಾಗಿದೆ. ಈ ಅಮಾನತು ನಮಗೆ ಉಡುಗೊರೆಯಾಗಿದೆ. ಏಕೆಂದರೆ ನಾವು ನಮ್ಮ ತಾಯಿ ಮತ್ತು ಸಹೋದರಿಯರ ಗೌರವವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸುವೆಂದು ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದರು.

ಸಂದೇಶಖಾಲಿಯಲ್ಲಿ ನಡೆದಿದ್ದೇನು?: ಶನಿವಾರ (ಫೆಬ್ರವರಿ 10) ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಇಲ್ಲಿ ಪರಾರಿಯಾಗಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶೇಖ್ ಷಹಜಹಾನ್ ಮತ್ತು ಅವರ ಸಹಚರರನ್ನು ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯ ಮಹಿಳೆಯರು ಮೆರವಣಿಗೆ ನಡೆಸಿದರು. ಶೇಖ್ ಷಹಜಹಾನ್ ಪಡಿತರ ಹಗರಣದಲ್ಲಿ ಹೆಸರು ಕೇಳಿಬಂದ ವ್ಯಕ್ತಿಯೇ ಆಗಿದ್ದು, ಜಾರಿ ನಿರ್ದೇಶನಾಲಯ (ಇಡಿ) ತಂಡವು ಅವರ ಸ್ಥಳದ ಮೇಲೆ ದಾಳಿ ಮಾಡಲು ಹೋದಾಗ, ಅವರ ಮೇಲೆ ಹಲ್ಲೆ ನಡೆದಿತ್ತು.

ಸ್ಥಳೀಯ ಮಹಿಳೆಯರ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸಂದೇಶಖಾಲಿಯಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಶೇಖ್ ಷಹಜಹಾನ್ ಮತ್ತು ಅವರ ತಂಡದ ಸದಸ್ಯರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದರು. ಅವರು ಬಲವಂತವಾಗಿ ಭೂಮಿಯ ಹೆಚ್ಚಿನ ಭಾಗಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಷಹಜಹಾನ್ ವಿರುದ್ಧ ಪ್ರತಿಭಟನೆ ನಡೆಸಿದಾಗ ಟಿಎಂಸಿ ನಾಯಕನ ಬೆಂಬಲಿಗರು ಸಹ ಬೀದಿಗೆ ಬಂದರು. ನಂತರ ಎರಡು ಕಡೆಯ ನಡುವೆ ಹಿಂಸಾತ್ಮಕ ಘರ್ಷಣೆ ನಡೆಯಿತು. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಓದಿ: ವಿಧಾನಮಂಡಲ ಅಧಿವೇಶನ: ಜೈ ಶ್ರೀರಾಮ್​ ಘೋಷಣೆ ಕೂಗಿದ ಬಿಜೆಪಿ ಶಾಸಕರು, ಜೈ ಭೀಮ್​ ಎಂದ ಕಾಂಗ್ರೆಸ್​ ಸದಸ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.