ರಾಯಚೂರು: ಕುರಿ ತಿನ್ನಲು ಬಂದು ಬಲೆಗೆ ಬಿದ್ದ ಮರಿ ಚಿರತೆ
🎬 Watch Now: Feature Video
ರಾಯಚೂರು: ಚಿರತೆ ಮರಿಯೊಂದು ಗ್ರಾಮಸ್ಥರ ಬಲೆಗೆ ಬಿದ್ದಿರುವ ಘಟನೆ ರಾಯಚೂರಿನ ನೀರಿಮಾನವಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಹತ್ತಿರದ ಗುಡ್ಡದಲ್ಲಿ ಗ್ರಾಮಸ್ಥರು ಹಾಕಿದ ಬಲೆಗೆ ಚಿರತೆ ಮರಿ ಸೆರೆಸಿಕ್ಕಿದೆ. ಈ ಗುಡ್ಡದಲ್ಲಿ ಕಳೆದ ಕೆಲ ದಿನಗಳ ಹಿಂದೆ ಚಿರತೆ ವಾಸವಾಗಿತ್ತು. ಹಲವು ದಿನಗಳಿಂದ ಗುಡ್ಡದಲ್ಲಿ ವಾಸವಾಗಿದ್ದ ಚಿರತೆ ಕಡೆಗೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿತ್ತು. ಇದಾದ ಮೇಲೆ ಇತ್ತೀಚೆಗೆ ಚಿರತೆಯ ಹೆಜ್ಜೆ ಗುರುತು ಗ್ರಾಮದ ಬಳಿ ಕಂಡು ಬಂದಿದ್ದವು. ಭಾನುವಾರ ಕುರಿಗಾಹಿಗಳು ಕುರಿ ಮೇಯಿಸಲು ಹೋದಾಗ, ಚಿರತೆ ಮರಿ ಕುರಿಯನ್ನು ತಿನ್ನಲು ಬಂದಿದೆ. ಆಗ ನಾಯಿಗಳು ಚಿರತೆ ಮರಿಯನ್ನು ಕಂಡು ಬೊಗಳುತ್ತಿದ್ದವು. ನಾಯಿಗಳು ಜೋರಾಗಿ ಬೊಗಳುತ್ತಿರುವುದನ್ನು ಕುರಿಗಾಹಿಗಳು ನೋಡಿದಾಗ ಚಿರತೆ ಮರಿ ಇರುವುದು ಗೊತ್ತಾಗಿದೆ. ಬಳಿಕ ಕೂಡಲೇ ಗ್ರಾಮಸ್ಥರು ಬಲೆ ಹಾಕಿ, ಒಂದು ಚಿರತೆ ಮರಿ ಸೆರೆ ಹಿಡಿದಿದ್ದಾರೆ. ಮತ್ತೊಂದು ಮರಿ ಓಡಿ ಹೋಗಿದೆ. ಸೆರೆ ಸಿಕ್ಕ ಚಿರತೆ ಮರಿಯನ್ನು ಅರಣ್ಯ ಇಲಾಖೆಯ ಅರಣ್ಯಾಧಿಕಾರಿಗಳಿಗೆ ಒಪ್ಪಿಸಲಾಗಿದೆ.