ನಿತ್ಯವೂ ಕಬಾಬ್ ತಿನ್ನಲು ನಿತ್ಯ ಹೋಟೆಲ್ಗೆ ಬರುವ ಮುಂಗುಸಿ: ವಿಡಿಯೋ - ಕಬಾಬ್ ತಿನ್ನಲು ನಿತ್ಯ ಹೋಟೆಲ್ಗೆ ಬರುವ ಮುಂಗುಸಿ
🎬 Watch Now: Feature Video
ಕೊಪ್ಪಳ: ಮನುಷ್ಯ ಒಂದಿಲ್ಲೊಂದು ತಿನಿಸಿಗೆ ಆಸೆ ಪಡುವುದು ಸಹಜ. ಆದರೆ ಇಲ್ಲೊಂದು ಮುಂಗುಸಿ ಚಿಕನ್ ಕಬಾಬ್ ಸವಿಯಲು ಕಾದು ಕುಳಿತಿರುತ್ತದೆ. ಕೊಪ್ಪಳದ ಅಳವಂಡಿ ಗ್ರಾಮದ ಮಾರುಕಟ್ಟೆ ಬಳಿ ಇರುವ ಚಿಕನ್ ಕಬಾಬ್ ಹೋಟೆಲ್ವೊಂದರಲ್ಲಿ ಮುಂಗುಸಿ ಚಿಕನ್ ಕಬಾಬ್ ಸವಿಯಲು ಪ್ರತಿದಿನ ಬರುತ್ತದೆ. ಹೋಟೆಲ್ಗೆ ಊಟ ಮಾಡಲು ಬಂದ ಗ್ರಾಹಕರು ಚಿಕನ್ ಹಾಕ್ತಾರಾ? ಅಂತಾ ಕಾದು ಕುಳಿತು ಕದ್ದು ಮುಚ್ಚಿ ನೋಡುತ್ತಿರುತ್ತದೆ. ಯಾರಾದರು ಕಬಾಬ್ ಎಸೆದರೆ ಕೂಡಲೇ ಅದನ್ನು ಕಚ್ಚಿಕೊಂಡು ಮೂಲೆಗೆ ಹೋಗುತ್ತದೆ. ಹೀಗೆ ತನ್ನ ಹೊಟ್ಟೆ ತುಂಬುವವರೆಗೆ ಹೋಟೆಲ್ ಮೂಲೆಯೊಂದರಲ್ಲಿ ಇಣುಕುತ್ತಾ ಕಬಾಬ್ ಸಿಕ್ಕ ಕೂಡಲೇ ಸವಿಯುತ್ತಿರುತ್ತದೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.