ಎರಡು ದಿನಗಳಿಂದ ಮಳೆ: ಮನೆಗಳಿಗೆ ನುಗ್ಗಿದ ಹಾವುಗಳು ಸುರಕ್ಷಿತವಾಗಿ ಅರಣ್ಯಕ್ಕೆ ಸ್ಥಳಾಂತರ - ವಾರಂಗಲ್ ವನ್ಯಜೀವಿ ಹಾಗೂ ಉರಗ ರಕ್ಷಣೆ ಜಾಗೃತಿ ಸಂಸ್ಥೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15276009-thumbnail-3x2-tmk.jpg)
ತುಮಕೂರು ನಗರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಹಾವುಗಳು ಎಲ್ಲೆಂದರಲ್ಲಿ ಕಾಣಿಸುತ್ತಿದ್ದು, ಸಾರ್ವಜನಿಕರು ಹೌಹಾರುತ್ತಿದ್ದಾರೆ. ಒಂದೇ ದಿನದಲ್ಲಿ ಹತ್ತಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ ನಂತರ ವರಂಗಲ್ ವನ್ಯಜೀವಿ ಹಾಗೂ ಉರಗ ರಕ್ಷಣೆ ಜಾಗೃತಿ ಸಂಸ್ಥೆಯ ಉರಗ ತಜ್ಞ ದಿಲೀಪ್ ಮತ್ತು ತಂಡ ಅವುಗಳನ್ನು ಸುರಕ್ಷಿತವಾಗಿ ದೇವರಾಯನ ದುರ್ಗ ಅರಣ್ಯ ಪದೇಶಕ್ಕೆ ಬಿಟ್ಟಿದ್ದಾರೆ. 3 ಹಾವುಗಳು ಬೈಕ್ ಒಳಗೆ, ಏಳು ಹಾವುಗಳು ಮನೆಗಳ ಒಳಗೆ, ಅಲ್ಲದೇ ಮನೆಯ ಬೀರು ಒಳಗೂ ಸೇರಿಕೊಂಡಿದ್ದ ಹಾವುಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.