ಕೊಂಡ ಹಾಯುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದ ಅರ್ಚಕ! - ರಾಮನಗರದಲ್ಲಿ ಕೊಟ್ರು ಬಸವಪ್ಪ ಕೊಂಡೋತ್ಸವ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15244640-thumbnail-3x2-rsedf.jpg)
ಕೊಟ್ರು ಬಸವಪ್ಪನ ಕೊಂಡೋತ್ಸವದಲ್ಲಿ ಕೊಂಡ ಹಾಯುತ್ತಿದ್ದ ಅರ್ಚಕ ಆಯತಪ್ಪಿ ಬೆಂಕಿಯ ಕೆಂಡದ ಮೇಲೆ ಬಿದ್ದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹರೂರು ಗ್ರಾಮದಲ್ಲಿ ನಡೆದಿದೆ. ನಂದೀಶ್ ಕೊಂಡಕ್ಕೆ ಬಿದ್ದು ಗಾಯಗೊಂಡಿರುವ ಅರ್ಚಕ. ಇವರು ತಾಲೂಕಿನ ಮುಕುಂದ ಗ್ರಾಮದವರೆಂದು ತಿಳಿದು ಬಂದಿದೆ. ಕೊಂಡ ಹಾಯುವ ವೇಳೆ ಆಯತಪ್ಪಿ ಬಿದ್ದ ಅರ್ಚಕ ಬಳಿಕ ಮೇಲೆದ್ದು ಓಡಿದರು. ಸ್ಥಳದಲ್ಲಿದ್ದವರು ಕೂಡಲೇ ಅವರನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಇದೇ ಪ್ರಥಮ ಬಾರಿಗೆ ಇವರು ಕೊಂಡ ಹಾಯುತ್ತಿದ್ದರು. ಆಯತಪ್ಪಿ ಕೊಂಡ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಭಕ್ತನೊಬ್ಬನನ್ನು ಕೊಂಡ ಹಾಯುವಾಗ ಬಿದ್ದು ಗಾಯಗೊಂಡಿದನ್ನು ಸ್ಮರಿಸಬಹುದು.