ಬರ್ತ್‌ಡೇ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಐವಿಆರ್‌ಐ ಕಾರ್ಯಕರ್ತ ಸಾವು : ವಿಡಿಯೋ - ಈಟಿವಿ ಭಾರತ್ ಕನ್ನಡ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16268383-thumbnail-3x2-sanjuu.jpg)
ಬರೇಲಿಯಲ್ಲಿ ನಡೆದ ಬರ್ತ್‌ಡೇ ಪಾರ್ಟಿಯಲ್ಲಿ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ಐವಿಆರ್‌ಐ ಕಾರ್ಯಕರ್ತ ಮೃತಪಟ್ಟಿದ್ದಾರೆ. ಪ್ರಭಾತ್ ಕುಮಾರ್ (45 ) ಎಂಬುವವರು ಮೃತರು. ಇವರು ಪ್ರೇಮ್‌ನಗರ ಪೊಲೀಸ್ ಠಾಣೆ ಬರೇಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಬರೇಲಿಯ ಐವಿಆರ್‌ಐನಲ್ಲಿ ಅಸಿಸ್ಟೆಂಟ್ ಟೆಕ್ನಿಕಲ್ ಆಗಿ ನೇಮಕಗೊಂಡಿದ್ದಾರೆ. ನಿನ್ನೆ ರಾತ್ರಿ ಪ್ರಭಾತ್ ಕುಮಾರ್ ಅವರು ತಮ್ಮ ಸ್ನೇಹಿತನ ಮಗುವಿನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲಿ ಪಾರ್ಟಿಯಲ್ಲಿ ಚಿತ್ರಗೀತೆಗಳಲ್ಲಿ ನೃತ್ಯ ಮಾಡುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.