ಲಿಫ್ಟ್ ಹಾಳಾಗಿ ನಿಂತಿದ್ದಕ್ಕೆ ಭದ್ರತಾ ಸಿಬ್ಬಂದಿಗೆ ಥಳಿತ: ವಿಡಿಯೋ ವೈರಲ್ - ಈಟಿವಿ ಭಾರತ್ ಕರ್ನಾಟಕ
🎬 Watch Now: Feature Video
ಗುರುಗ್ರಾಮ(ಹರಿಯಾಣ): ಲಿಫ್ಟ್‌ನಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಿಸಿದ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಸಂಬಂಧ ಗುರುಗ್ರಾಮ್ ಪೊಲೀಸರು ಆರೋಪಿ ವರುಣ್ ನಾಥ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಉದ್ಯಮಿ ವರುಣ್ ನಾಥ್ (39) ಎಂದು ಗುರುತಿಸಲಾದ ವ್ಯಕ್ತಿ ಉತ್ತರ ಪ್ರದೇಶದ ಸಿಬ್ಬಂದಿ ಅಶೋಕ್ ಕುಮಾರ್ ಮತ್ತು ಲಿಫ್ಟ್ ಆಪರೇಟರ್‌ಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬರುವಂತೆ, ವ್ಯಕ್ತಿ ಲಿಫ್ಟ್‌ನಿಂದ ಹೊರಬಂದ ತಕ್ಷಣ ಸಿಬ್ಬಂದಿಗೆ ನಿಂದಿಸಿರುವುದು ಮತ್ತು ಹೊಡೆದಿರುವುದು ಕಂಡು ಬರುತ್ತದೆ.