ಚಾಮುಂಡಿ ಬೆಟ್ಟದಲ್ಲಿ ಜರುಗಿದ ಅದ್ಧೂರಿ ತೆಪ್ಪೋತ್ಸವ - ದಸರಾ ಮಹೋತ್ಸವ
🎬 Watch Now: Feature Video
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯ ತೆಪ್ಪೋತ್ಸವ ಅದ್ಧೂರಿಯಾಗಿ ನಡೆಯಿತು. ಚಾಮುಂಡೇಶ್ವರಿ ದೇವಸ್ಥಾನದ ಸಮೀಪದಲ್ಲಿರುವ ದೇವಿಕೆರೆಯಲ್ಲಿ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ತೆಪ್ಪೋತ್ಸವ ನಡೆಯಿತು. ಈ ವೇಳೆ ಚಾಮುಂಡೇಶ್ವರಿಗೆ ಭಕ್ತಾದಿಗಳು ಜಯಕಾರ ಕೂಗಿದರು. ರಾಣಿ ಪ್ರಮೋದಾದೇವಿ ಒಡೆಯರ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ದಸರಾ ಮಹೋತ್ಸವದ ಬಳಿಕ ರಥೋತ್ಸವ ನಡೆಯುತ್ತದೆ. ನಂತರ ತೆಪ್ಪೋತ್ಸವ ನಡೆದರೆ ದಸರಾ ಸಂಪನ್ನವಾದಂತೆ ಎಂಬ ಪ್ರತೀತಿ.