ನಡುರಸ್ತೆಯಲ್ಲಿ ಸಿನಿಮೀಯ ಸ್ಟೈಲ್ನಲ್ಲಿ ಕಾಲೇಜ್ ವಿದ್ಯಾರ್ಥಿನಿಯರ ಫೈಟ್.. ವಿಡಿಯೋ - ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ವಿದ್ಯಾರ್ಥಿನಿಯರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15000997-thumbnail-3x2-wdfdfdf.jpg)
ನಾಗ್ಪುರ: ಇಲ್ಲಿನ ಸಿವಿಲ್ ಲೈನ್ಸ್ ಪ್ರದೇಶದ ಹಿಸ್ಲೋಪ್ ಕಾಲೇಜ್ ಬಳಿ ವಿದ್ಯಾರ್ಥಿನಿಯರು ಸಿನಿಮೀಯ ಸ್ಟೈಲ್ನಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾಲೇಜ್ ಮುಗಿದ ಬಳಿಕ ಏಳು ವಿದ್ಯಾರ್ಥಿನಿಯರು ರಸ್ತೆ ಬಳಿ ನಿಂತುಕೊಂಡಿದ್ದರು. ಈ ವೇಳೆ ಅವರ ನಡುವೆ ಜಗಳ ಶುರುವಾಗಿದೆ. ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆಯ ದೃಶ್ಯವನ್ನ ವಾಹನ ಸವಾರನೊಬ್ಬ ಚಿತ್ರೀಕರಿಸಿ, ವೈರಲ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿದು ಬಂದಿದೆ.